ಡೈಸನ್ V15 ಡಿಟೆಕ್ಟ್ ಎಕ್ಸ್‌ಟ್ರಾ ಲಾಂಚ್: ಇದರ ವಿಶೇಷತೆ ಏನು?
ಡೈಸನ್ ಕಂಪೆನಿಯು ಈಗಾಗಲೇ ಸಾಕಷ್ಟು ವ್ಯಾಕ್ಯೂಮ್ ಕ್ಲೀನರ್‌ಗಳು, ಏರ್ ಪ್ಯೂರಿಫೈಯರ್‌ಗಳು, ಹ್ಯಾಂಡ್ ಡ್ರೈಯರ್‌ಗಳು, ಬ್ಲೇಡ್‌ಲೆಸ್ ಫ್ಯಾನ್‌ಗಳು, ಹೀಟರ್‌ಗಳು, ಹೇರ್ ಡ್ರೈಯರ್‌ಗಳು ಸೇರಿದಂತೆ ವಿವಿಧ ರೀತಿಯ ಸ್ಮಾರ್ಟ್‌ಡಿವೈಸ್‌ಗಳನ್ನು ಮಾರುಕಟ್ಟೆಯಲ್ಲಿ ಅನಾವರಣ ಮಾಡಿದ್ದು, ಇದರ ಸಾಲಿಗೆ ಈಗ ಸುಧಾರಿತ ಫೀಚರ್ಸ್ ಹೊಂದಿರುವ ಹೊಸ ಡಿವೈಸ್ ಸೇರಿಕೊಳ್ಳಲಿದೆ.
ಹೌದು, ತಂತ್ರಜ್ಞಾನ ಅಭಿವೃದ್ಧಿಯಾದಂತೆ ವಿವಿಧ ಅಗತ್ಯ ದೈನಂದಿನ ಸಾಧನಗಳೂ ಹೊಸ ರೂಪ ಪಡೆದುಕೊಳ್ಳುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಮನೆಯನ್ನು ಸ್ವಚ್ಛಮಾಡುವ ಹಲವಾರು ಡಿವೈಸ್‌ಗಳಿದ್ದು, ಈ ನಡುವೆ ಲಾಂಚ್ ಆಗಿರುವ ಡೈಸನ್ V15 ಡಿಟೆಕ್ಟ್ ಎಕ್ಸ್ಟ್ರಾ (Dyson V15 Detect Extra)ಡಿವೈಸ್ ವಿಶೇಷ ಸ್ಥಾನ ಪಡೆಯಲಿದೆ. ಇದು 100,000Gವರೆಗಿನ ಶಕ್ತಿಯೊಂದಿಗೆ ಧೂಳು ಮತ್ತು ಸಣ್ಣ ಕಣಗಳನ್ನು ಸೆರೆಹಿಡಿಯುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿದುಕೊಳ್ಳಿ.

ಡೈಸನ್ V15 ಡಿಟೆಕ್ಟ್ ಎಕ್ಸ್ಟ್ರಾ ಫೀಚರ್ಸ್: ಈ ಹೊಸ ಡಿವೈಸ್ ಶಕ್ತಿಯುತ 240AW ಮೋಟಾರ್ ಮತ್ತು ಸೂಕ್ಷ್ಮ ಧೂಳಿನ ಕಣಗಳನ್ನು ಬಹಿರಂಗಪಡಿಸುವ ಲೇಸರ್ ಅನ್ನು ಹೊಂದಿದ್ದು, ಇದು ಸಂಪೂರ್ಣ ಯಂತ್ರದ HEPA ಫಿಲ್ಟರೇಶನ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪಿಇಟಿ ಡ್ಯಾಂಡರ್‌ನಂತಹ ಅಲ್ಟ್ರಾ ಫೈನ್ ಕಣಗಳನ್ನು ಸಹ ಇದು ಎಲ್ಲಿದ್ದರೂ ಹುಡುಕಿ ಸ್ವಚ್ಛ ಮಾಡಲಿದೆ.
ಇದರಲ್ಲಿನ ಸುಧಾರಿತ ಮೋಟಾರ್ ಫಿಲ್ಟರ್‌ನೊಂದಿಗೆ 0.1 ಮೈಕ್ರಾನ್‌ಗಳಷ್ಟು ಚಿಕ್ಕದಾದ 99.97% ಕಣಗಳನ್ನು ಕ್ಲೀನ್ ಮಾಡಲಿದ್ದು, ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಡೈಸನ್‌ನ ಅತ್ಯಂತ ಸುಧಾರಿತ ಶೋಧನೆ ವ್ಯವಸ್ಥೆಯಾಗಿ ಇದು ಕಾಣಿಸಿಕೊಂಡಿದೆ. ಹಾಗೆಯೇ 14 ರೂಟ್ ಸೈಕ್ಲೋನ್‌ಗಳನ್ನು ಹೊಂದಿದ್ದು, ಈ ಮೂಲಕ ಧೂಳು ಮತ್ತು ಕಣಗಳನ್ನು 100,000G ವರೆಗಿನ ಬಲದೊಂದಿಗೆ ಎಳೆದುಕೊಳ್ಳುತ್ತದೆ.
ಈ ಸ್ಮಾರ್ಟ್ ಡಿವೈಸ್ ತುಂಬಾ ಮೃದುವಾದ ಬಿರುಗೂದಲುಗಳೊಂದಿಗೆ ಆಟೋಮ್ಯಾಟಿಕ್ ಕ್ಲೀನ್ ಮಾಡುವ ಸೌಲಭ್ಯ ಹೊಂದಿದ್ದು, ಯಾವದೇ ಮೂಲೆ ಹಾಗೂ ಗಟ್ಟಿಯಾದ ಪ್ರದೇಶದಲ್ಲೂ ಇದು ಉತ್ತಮವಾಗಿ ಸ್ವಚ್ಛಮಾಡಲಿದೆ. ಇದಕ್ಕಾಗಿ ವಿವಿಧ ಕೋನದಲ್ಲಿ ತಿರುಗುವ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಡಸ್ಟ್ ಇಲ್ಯುಮಿನೇಷನ್ ತಂತ್ರಜ್ಞಾನ ಹೊಂದಿದ್ದು, ಒಂದು ಸೆಕೆಂಡಿಗೆ 15,000 ಬಾರಿ ಸೂಕ್ಷ್ಮ ಕಣಗಳನ್ನು ಎಣಿಸುವ ಪೈಜೊ ಸೆನ್ಸರ್ ಪಡೆದುಕೊಂಡಿದ್ದು, ಇದು ಎಲ್‌ಸಿಡಿ ಡಿಸ್‌ಪ್ಲೇ ಮೇಲೆ ಧೂಳಿನ ಗಾತ್ರ ಮತ್ತು ಪ್ರಮಾಣವನ್ನು ಸಹ ತಿಳಿಸುತ್ತದೆ.

ಇನ್ನುಳಿದಂತೆ ಆಟೋ ಮೋಡ್ ಆಯ್ಕೆ ಇದ್ದು, ಹೆಚ್ಚಿನ ಸಾಂದ್ರತೆ ಕಂಡುಬಂದಾಗ ನಿರ್ವಾತವು ಆಟೋಮ್ಯಾಟಿಕ್ ಆಗಿ ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚಿಗೆ ಮಾಡಿಕೊಳ್ಳುತ್ತದೆ. ಇದರೊಂದಿಗೆ ಆಂಟಿ ಸ್ಟಾಟಿಕ್ ಕಾರ್ಬನ್ ಫೈಬರ್ ಫಿಲಾಮೆಂಟ್‌ಗಳೊಂದಿಗೆ ಸುಧಾರಿತ ಡಿಟ್ಯಾಂಗ್ಲಿಂಗ್ ಬ್ರಷ್ ಬಾರ್ ತಂತ್ರಜ್ಞಾನವನ್ನು ಹೊಂದಿದ್ದು, ಇದರಿಂದ ಕೂದಲುಗಳು ಹಾಗೂ ಇತರೆ ಮತ್ತು ಸೂಕ್ಷ್ಮ ಧೂಳನ್ನು ಸೆರೆಹಿಡಿಯುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ಡೈಸನ್ v15 ಡಿಟೆಕ್ಟ್ ಎಕ್ಸ್ಟ್ರಾ ಡಿವೈಸ್ ಸುಧಾರಿತ ಮತ್ತು ಶಕ್ತಿಯುತವಾದ ಕೋರ್ಡ್ ಪ್ರೀ ವ್ಯಾಕ್ಯೂಮ್ ಕ್ಲೀನರ್ ಆಗಿದ್ದು, ಅತ್ಯುತ್ತಮವಾದ ಶೋಧನಾ ತಂತ್ರಜ್ಞಾನವನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಹಾಗೆಯೇ ನೀವು ವಾವ್ ಎನಿಸುವಷ್ಟು ಮಟ್ಟಿಗೆ ಸ್ವಚ್ಛಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಡೈಸನ್ V15 ಡಿಟೆಕ್ಟ್ ಎಕ್ಸ್‌ಟ್ರಾ ಬೆಲೆ ಹಾಗೂ ಲಭ್ಯತೆ: ಡೈಸನ್ v15 ಡಿಟೆಕ್ಟ್ ಎಕ್ಸ್‌ಟ್ರಾ ಡಿವೈಸ್‌ಗೆ 65,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದು ಪ್ರಶ್ಯನ್ ಬ್ಲೂ ಮತ್ತು ಬ್ರೈಟ್ ಕಾಪರ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಇದನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಮೂಲಕ ಹಾಗೂ ಡೈಸನ್‌ನ ಆನ್‌ಲೈನ್ ಸ್ಟೋರ್ ಅಥವಾ ಡೈಸನ್ ಡೆಮೊ ಸ್ಟೋರ್‌ನಿಂದ ಖರೀದಿ ಮಾಡಬಹುದು.


Click it and Unblock the Notifications








