ರೂ $1.2 ಬಿಲಿಯನ್‌ಗೆ ಅಮೆಜಾನ್ ಗಾಳ ಜಬಾಂಗ್‌ನತ್ತ

By Shwetha
|

ಇ ಕಾಮರ್ಸ್ ಸೈಟ್ ಆಗಿ ಪ್ರಸಿದ್ಧಿಯನ್ನು ಪಡೆದಿರುವ ಅಮೆಜಾನ್ ಜಬಾಂಗ್ ಅನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿದ್ದು $1.2 ಬಿಲಿಯನ್‌ ದರವನ್ನು ಇದಕ್ಕಾಗಿ ನಿಗದಿಪಡಿಸಿದೆ. ಇದೇ ಸಮಯದಲ್ಲಿ ಆಲಿಬಾಬಾ ರೀಟೈಲ್ ತಾಣವು ಸ್ನ್ಯಾಪ್‌ಡೀಲ್ ಅನ್ನು ಖರೀದಿಸುವ ಬಯಕೆಯನ್ನು ಪ್ರಕಟಪಡಿಸಿದ್ದು ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯತತ್ಪರನಾಗಲಿದೆ.

ಫ್ಲಿಪ್‌ಕಾರ್ಟ್ ಮಿಂತ್ರವನ್ನು ಖರೀದಿಸಿ ರೀಟೈಲ್ ತಾಣದಲ್ಲಿ ಪ್ರಾಬಲ್ಯವನ್ನು ಗಳಿಸುತ್ತಿರುವ ಸುಸಂದರ್ಭದಲ್ಲೇ ಅಮೆಜಾನ್‌ನಿಂದ ಭರ್ಜರಿ ಪೈಪೋಟಿಯನ್ನು ಈ ತಾಣ ಪಡೆದುಕೊಳ್ಳಲಿದೆ. ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದ ಷೇರು 50 ಶೇಕಡದಷ್ಟಿದ್ದು ಜಬಾಂಗ್ ಸದ್ಯಕ್ಕೆ ಮಾರುಕಟ್ಟೆಯಲ್ಲಿ 25 ಶೇಕಡಾ ಮಾರುಕಟ್ಟೆ ಷೇರನ್ನು ಹೊಂದಿದೆ.

ಜಬಾಂಗ್ ಖರೀದಿಯೊಂದಿಗೆ ಅಮೆಜಾನ್ ಇನ್ನಷ್ಟು ಪ್ರಬಲ

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಸೂಪರ್ ಟಿಪ್ಸ್

ರೀಟೈಲ್ ತಾಣಗಳು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದು ಒಂದಕ್ಕಿಂತ ಇನ್ನೊಂದು ಮೇಲೆ ಎಂಬ ತತ್ವದಡಿಯಲ್ಲಿ ಗ್ರಾಹಕರ ಗಮನ ಸೆಳೆಯಲು ಮುಂದಾಗಿದೆ. ಅಮೆಜಾನ ಇತರ ರೀಟೈಲ್ ತಾಣಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವಲ್ಲಿ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಏಕಾಂಗಿಯಾಗಿಯೇ ಉತ್ತಮ ಪ್ರಾಬಲ್ಯ ಪಡೆದುಕೊಂಡಿರುವ ಜಬಾಂಗ್‌ನತ್ತ ದೃಷ್ಟಿ ಹರಿಸಿದೆ.

ಕೆಲವು ತಿಂಗಳಿಂದೀಚೆಗೆ ಜಬಾಂಗ್ ಅನ್ನು ತನ್ನ ಒಡೆತನದ ಅಡಿಯಲ್ಲಿ ಬರುವ ಮಾತುಕತೆಯನ್ನು ಅಮೆಜಾನ್ ಮಾಡಿಕೊಂಡಿದ್ದು ಕೊನೆಗೂ ಇದನ್ನು ಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದೆ. ರೀಟೈಲ್ ತಾಣಗಳ ಪೈಪೋಟಿಯಲ್ಲಿ ಯಾರು ಮೇಲೆ ಯಾರು ಕೆಳಗೆ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

English summary
This aricle tells about As the e-commerce space heats up, two major deals maybe in the offing. While Amazon is inching towards acquiring Jabong, Alibaba is watching Snapdeal very closely, and a deal may breakthrough anytime now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X