ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಸೂಪರ್ ಟಿಪ್ಸ್

By Shwetha
|

ನಿಮ್ಮ ಆಂಡ್ರಾಯ್ಡ್ ಫೋನ್ ಹಲವಾರು ಕಾರ್ಯಗಳನ್ನು ಮಾಡುವುದರಲ್ಲಿ ನಿಪುಣತೆಯನ್ನು ಪಡೆದುಕೊಂಡಿದೆ. ನಿಮ್ಮ ಗೆಳೆಯನಾಗಿ ಉತ್ತಮ ಕಾವಲುಗಾರನಾಗಿ ಇದು ಕಾರ್ಯನಿರ್ವಹಿಸುತ್ತದೆ. ಆದರೆ ನಮ್ಮಲ್ಲಿ ಹಲವಾರು ಜನರು ಫೋನ್ ಅನ್ನು ಜಾಗರೂಕತೆಯಿಂದ ಕಾಪಾಡುವುದಿಲ್ಲ, ನಮ್ಮ ಡೇಟಾಗೆ ನಾವು ಗಂಭೀರವಾದ ಹಾನಿಯನ್ನು ಉಂಟುಮಾಡುತ್ತೇವೆ. ಹಾಗಿದ್ದರೆ ನಿಮ್ಮ ಫೋನ್‌ನೊಂದಿಗೆ ನೀವು ಮಾಡಬಾರದ ತಪ್ಪುಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ಇದನ್ನೂ ಓದಿ: ಟೆಕ್ ನೌಕರಿಗೆ ಹೆಚ್ಚು ಸಂಬಳ ನೀಡುವ ಯುಎಸ್ ನಗರಗಳು

ಆ ತಪ್ಪುಗಳನ್ನು ನೀವೇನಾದರೂ ಮಾಡುತ್ತಿದ್ದರೆ ಅದನ್ನು ಈಗಲೇ ನಿಯಂತ್ರಿಸಿ ಮತ್ತು ಆ ತಪ್ಪುಗಳ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.

#1

#1

ನಿಮ್ಮ ಫೋನ್ ಅನ್ನು ಜಾಗರೂಕೆತಯಿಂದ ನೋಡಿಕೊಳ್ಳಲು ಇರುವ ಒಂದು ವಿಧಾನವೆಂದರೆ ಅದನ್ನು ಲಾಕ್ ಮಾಡುವುದಾಗಿದೆ. ಆಂಡ್ರಾಯ್ಡ್‌ನಲ್ಲಿ ನಿಮ್ಮ ಫೋನ್ ಅನ್ನು ಲಾಕ್ ಮಾಡುವ ಅಪ್ಲಿಕೇಶನ್‌ಗಳಿಗೆ ಏನೂ ಭರವಿಲ್ಲ, ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ.

#2

#2

ಗೂಗಲ್ ಪ್ಲೇನಲ್ಲಿ ನಿಮಗೆ ಆಂಡ್ರಾಯ್ಡ್‌ನ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ.

#3

#3

ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ನಿಮ್ಮ ಫೋನ್‌ನ ಚಾರ್ಜರ್ ಅನ್ನು ಅಳವಡಿಸುವುದು ಚಾರ್ಜಿಂಗ್‌ನ ಸರಿಯಾದ ವಿಧಾನವಲ್ಲ ಎಂಬುದನ್ನು ಅರಿತುಕೊಳ್ಳಿ.

#4

#4

ನಿಮ್ಮ ಜೀವನ ನಿಮ್ಮ ಫೋನ್‌ನಲ್ಲಿದೆ. ನಿಮ್ಮ ಅತ್ಯಮೂಲ್ಯ ಫೋಟೋಗಳು, ರಹಸ್ಯವಾದ ದಾಖಲೆಗಳುಳ್ಳ ಫೋನ್ ಅನ್ನು ನೀವು ಕಳೆದುಕೊಂಡಿರಿ ಎಂದಲ್ಲಿ ಅದು ನಿಮ್ಮ ಜೀವನದ ಪ್ರಮುಖ ಸೋಲಾಗುತ್ತದೆ. ಆದ್ದರಿಂದ ಫೋನ್‌ನಲ್ಲಿರುವ ದಾಖಲೆಗಳನ್ನು ಬ್ಯಾಕಪ್ ಮಾಡಲು ಮರೆಯದಿರಿ.

#5

#5

ಕ್ಲೌಡ್ ಪ್ರೊವೈಡರ್‌ಗೆ ಏನಾದರೂ ಸಂಭವಿಸಿದಲ್ಲಿ ನಿಮ್ಮ ಡೇಟಾದ ಗತಿ ಏನಾಗಬಹುದು ಎಂಬುದನ್ನು ಯೋಚಿಸಿದ್ದೀರಾ? ಆದ್ದರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸುವಾಗ ಹೆಚ್ಚಿನ ಮುತುವರ್ಜಿಯನ್ನು ಕಾಪಾಡಿಕೊಳ್ಳಿ.

#6

#6

ನಿಮ್ಮ ಫೋನ್‌ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಆದ್ದರಿಂದ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ತಣ್ಣಗಿನ ಸ್ಥಳದಲ್ಲಿ ಇರಿಸುವುದು ಮುಖ್ಯವಾಗುತ್ತದೆ. ಸೊನ್ನೆ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ಫೋನ್‌ನ ಜೀವನವನ್ನು ನಾಶಪಡಿಸಬಹುದು.

#7

#7

ಗೋರಿಲ್ಲಾ ಗ್ಲಾಸ್ ಅತ್ಯುತ್ತಮ ಆದರೆ ಇದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

#8

#8

ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತವಾಗಿದೆ.

#9

#9

ಫೋನ್ ಅನ್ನು ಇಎಮ್‌ಐ ಆಯ್ಕೆಯನ್ನು ಬಳಸಿ ಖರೀದಿಸುವುದನ್ನು ನಿಲ್ಲಿಸಿ. ಫೋನ್‌ಗಳು ಲಾಂಚ್ ಆಗಿ ಕೆಲವು ತಿಂಗಳುಗಳ ನಂತರ ಕಡಿಮೆ ಬೆಲೆಗೆ ಇಳಿಯುತ್ತವೆ. ಈ ಸಂದರ್ಭವನ್ನು ಬಳಸಿಕೊಂಡು ಫೋನ್ ಖರೀದಿಸಿ.

#10

#10

ನಿಮ್ಮ ಫೋನ್‌ಗೆ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು.

Best Mobiles in India

English summary
This article tells about 10 things not to do with your Android smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X