ಇ-ವಹಿವಾಟುವಿನಲ್ಲಿ ಗುಜರಾತ್ ಫಸ್ಟ್...ದಕ್ಷಿಣ ಭಾರತದಲ್ಲಿ ಕರ್ನಾಟಕ ಲಾಸ್ಟ್!!
ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚು ಆನ್‌ಲೈನ್ ವಹಿವಾಟು ತಂತ್ರಜ್ಞಾನವನ್ನು ಬಳಸಿಕೊಂಡಿರುವುವು ಅಂಕಿಅಂಶಗಳಿಂದ ತಿಳಿದುಬಂದಿದೆ.!!
2017ರ ರಿಂದ ಆನ್‌ಲೈನ್ ವಹಿವಾಟು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡ ಅಗ್ರ 10 ರಾಜ್ಯಗಳ ಪಟ್ಟಿಯನ್ನು ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್ ಎಗ್ರಿಗೇಷನ್ ಆಂಡ್ ಅನಾಲಿಸಿಸ್ ಲೇಯರ್ ಬಿಡುಗಡೆ ಮಾಡಿದ್ದು, ದಕ್ಷಿಣ ಭಾರತದಲ್ಲಿ ಕೊನೆಯ ಸ್ಥಾನಕ್ಕೆ ಕರ್ನಾಟಕ ದೂಡಲ್ಪಟ್ಟಿದೆ.!!
ಹೌದು, ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್ ಇ-ಟಾಲ್ ದತ್ತಾಂಶಗಳು ನೀಡಿದ ಮಾಹಿತಿ ಪ್ರಕಾರ ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚು ಆನ್‌ಲೈನ್ ವಹಿವಾಟು ತಂತ್ರಜ್ಞಾನವನ್ನು ಬಳಸಿಕೊಂಡಿರುವುವು ಅಂಕಿಅಂಶಗಳಿಂದ ತಿಳಿದುಬಂದಿದೆ.!!

ಇನ್ನು ಈ ಪಟ್ಟಿಯಲ್ಲಿ ಗುಜರಾತ್ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವೊಂದನ್ನು ಬಿಟ್ಟು ಇನ್ನೆಲ್ಲಾ ರಾಜ್ಯಗಳು ಅಗ್ರ 10 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಪ್ರತಿ 1,000 ಜನರಿಗೆ ಇ-ವಹಿವಾಟುಗಳು ಕರ್ನಾಟಕದಲ್ಲಿಯೇ ಕಡಿಮೆಯಾಗಿದೆ ಎಂದು ಈ ವರದಿ ಹೇಳಿದೆ.!!

ಲಕ್ಷದ್ವೀಪವು 20,756 ಸಂಖ್ಯೆಯ ಇ-ವಹಿವಾಟು ನಡೆಸಿ ಸರಾಸರಿ ವಹಿವಾಟಿನಲ್ಲಿ ದಾಖಲೆ ಸೃಷ್ಟಿಸಿದೆ. ಸರ್ಟಿಫಿಕೆಟ್ಸ್, ಕಮರ್ಷಿಯಲ್ ಟ್ಯಾಕ್ಸ್, ಎಜುಕೇಷಶ್ ಮತ್ತು ಎಲೆಕ್ಷನ್ ಎಲ್ಲಾ ವಿಭಾಗಗಳಲ್ಲಿಯೂ ಕರ್ನಾಟಕ ಸರ್ಕಾರ ಕೊನೆಯ ಸ್ಥಾನಪಡೆದಿರುವುದು ವರದಿಯಲ್ಲಿನ ಪಟ್ಟಿಯಲ್ಲಿ ನೀವು ನೋಡಬಹುದು.!!
ಓದಿರಿ: ಸ್ಮಾರ್ಟ್‌ಫೋನ್ ಲೋಕವೇ ಬೆಚ್ಚಿಬೀಳುವ ಸುದ್ದಿ!..18ಕೋಟಿ ಜನರು ಬಳಸುತ್ತಿರುವ ಆಪ್‌ಗಳು ಸೇಫ್ ಆಗಿಲ್ಲ!!


Click it and Unblock the Notifications








