ಸ್ಮಾರ್ಟ್‌ಫೋನ್ ಲೋಕವೇ ಬೆಚ್ಚಿಬೀಳುವ ಸುದ್ದಿ!..18ಕೋಟಿ ಜನರು ಬಳಸುತ್ತಿರುವ ಆಪ್‌ಗಳು ಸೇಫ್ ಆಗಿಲ್ಲ!!

ಆಂಡ್ರಾಯ್ಡ್ ಮತ್ತು ಐಒಎಸ್‌ನ ಸುಮಾರು 685 ಅಪ್ಲಿಕೇಷನ್‌ಗಳು ಹ್ಯಾಕರ್‌ಗಳ ಪಾಲಿಗೆ ಸುಲಭದ ತುತ್ತಾಗಿದ್ದು, ಹ್ಯಾಕರ್‌ಗಳು ನೀರು ಕುಡಿದಷ್ಟು ಸಲೀಸಾಗಿ ಮಾಹಿತಿ ಕದಿಯಬಹುದು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಆಪ್‌ಥಾರಿಟಿ ವರದಿ ನೀಡಿದೆ.!!

|

ಸ್ಮಾರ್ಟ್‌ಫೋನ್ ಬಳಕೆದಾರರು ಬೆಚ್ಚಿಬೀಳಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ.! ಹೌದು, ಆಂಡ್ರಾಯ್ಡ್ ಮತ್ತು ಐಒಎಸ್‌ನ ಸುಮಾರು 685 ಅಪ್ಲಿಕೇಷನ್‌ಗಳು ಹ್ಯಾಕರ್‌ಗಳ ಪಾಲಿಗೆ ಸುಲಭದ ತುತ್ತಾಗಿದ್ದು, ಹ್ಯಾಕರ್‌ಗಳು ನೀರು ಕುಡಿದಷ್ಟು ಸಲೀಸಾಗಿ ಮಾಹಿತಿ ಕದಿಯಬಹುದು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಆಪ್‌ಥಾರಿಟಿ ವರದಿ ನೀಡಿದೆ.!!

ವಿಶ್ವದಾದ್ಯಂತ ಈ ಅಪ್ಲಿಕೇಷನ್ಸ್‌ಗಳನ್ನು ಬಳಸುತ್ತಿರುವ ಸುಮಾರು 18 ಕೋಟಿ ಜನರ ಕರೆ ಮತ್ತು ಟೆಕ್ಸ್ಟ್‌ ಮೆಸೇಜ್ ವಿವರಗಳನ್ನು ಹ್ಯಾಕರ್‌ಗಳು ಸುಲಭವಾಗಿ ಕದಿಯಬಹುದಾಗಿದ್ದು, ಈ ಆಪ್‌ಗಳನ್ನು ಪ್ರೋಗ್ರಾಂ ಮಾಡುವಾಗ ಆದ ಸಣ್ಣ ಲೋಪವೇ ಇದಕ್ಕೆಲ್ಲಾ ಕಾರಣ ಎಂದು ಸಂಸ್ಥೆ ಹೇಳಿದೆ. ಹಾಗಾದರೆ, ಅವುಗಳಲ್ಲಿನ ಪ್ರಮುಖ ಆಪ್‌ಗಳು ಯಾವುವು? ಲೋಪ ಏನಿದೆ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್!!

ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್!!

ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್‌ಗಳಲ್ಲಿ ಲೋಪ ಕಂಡುಬಂದಿರುವುದಾಗಿ ಸೈಬರ್ ಸುರಕ್ಷತಾ ಸಂಸ್ಥೆ ಆಪ್‌ಥಾರಿಟಿ ವರದಿ ನೀಡಿದೆ. ಈ ಆಪ್‌ಗಳಲ್ಲಿ ನೂತನ ಪರಿಷ್ಕೃತ ಕೋಡ್ ಬಳಸಿ ಹ್ಯಾಕರ್‌ಗಳು ಬಳಕೆದಾರರ ದತ್ತಾಂಶಗಳಿಗೆ ಕನ್ನ ಹಾಕಬಹುದು ಎಂದೂ ವರದಿಯಲ್ಲಿ ವಿವರಿಸಲಾಗಿದೆ.!!

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕುತ್ತು.!!

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕುತ್ತು.!!

ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್‌ಗಳನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರು ಉಪಯೋಗಿಸುತ್ತಿದ್ದಾರೆ. ಈ ಆಪ್‌ಗಳನ್ನು ಬಳಸುತ್ತಿರುವ ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆ 18 ಕೋಟಿ ಎಂದು ತಿಳಿದುಬಂದಿದೆ ಆದರೆ, ಐಒಎಸ್ ಬಳಕೆದಾರರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.!!

ಯಾವ ಯಾವ ಆಪ್‌ಗಳಲ್ಲಿ ದೋಷ!!

ಯಾವ ಯಾವ ಆಪ್‌ಗಳಲ್ಲಿ ದೋಷ!!

ವಿಶ್ವದಾದ್ಯಂತ 40,000 ವ್ಯವಹಾರಿಕ ಕಂಪೆನಿಗಳಿಗೆ ಸೇವೆ ಒದಗಿಸುತ್ತಿದ್ದೇವೆ ಎಂಬ ಮಾಹಿತಿಯನ್ನು ಟ್ವಿಲಿಯೊ ನೀಡಿದೆ. ಉಬರ್ ಮತ್ತು ನೆಟ್‌ಫ್ಲಿಕ್ಸ್ ಸಹ ತನ್ನ ಗ್ರಾಹಕರು ಎಂದು ತನ್ನ ಅಧಿಕೃತ ಜಾಲತಾಣದಲ್ಲಿ ಹೇಳಿಕೊಂಡಿದೆ. ಹಾಗಾಗಿ, ಬಹುತೇಕ ದೊಡ್ಡ ದೊಡ್ಡ ಆಪ್‌ಗಳು ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್‌ನಂತಹ ಥರ್ಡ್ ಪಾರ್ಟಿ ಕಂಪೆನಿಗಳಿಂದಲೇ ಅಭಿವೃದ್ದಿಯಾಗಿವೆ.!!

ಆಪ್‌ಗಳಲ್ಲಿನ ದೋಷ ಏನು?

ಆಪ್‌ಗಳಲ್ಲಿನ ದೋಷ ಏನು?

ಆಪ್‌ಗಳನ್ನು ಪ್ರೋಗ್ರಾಂ ಮಾಡುವಾಗ ರಹಸ್ಯ ಸಂಖ್ಯೆಗಳ ಸಂಯೋಜನೆಯಲ್ಲಿ ಆದ ಸಣ್ಣ ಲೋಪ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಒಂದು ಅಪ್ಲಿಕೇಷನ್ ಕೋಡ್ ಅನ್ನು ದೋಷಪೂರಿತವಾಗಿ ವಿನ್ಯಾಸ ಮಾಡಿದ್ದಲ್ಲಿ, ಟ್ವಿಲಿಯೊದ ಎಲ್ಲಾ ಅಪ್ಲಿಕೇಷನ್‌ಗಳಲ್ಲೂ ಆ ಸಮಸ್ಯೆ ಇರುವ ಸಾಧ್ಯತೆ ಹೆಚ್ಚು.!!

ಅಮೆಜಾನ್‌ ಆಪ್‌ನಲ್ಲಿಯೂ ದೋಷ!?

ಅಮೆಜಾನ್‌ ಆಪ್‌ನಲ್ಲಿಯೂ ದೋಷ!?

ಅಮೆಜಾನ್‌ನ ಹಲವು ಅಪ್ಲಿಕೇಷನ್‌ಗಳಲ್ಲೂ ಇಂತಹದ್ದೇ ದೋಷವಿತ್ತು. ಈ ಬಗ್ಗೆ ಅದಕ್ಕೆ ಮಾಹಿತಿ ನೀಡಲಾಗಿತ್ತು' ಎಂದೂ ಆಪ್‌ ಅಥಾರಿಟಿ ಹೇಳಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆಜಾನ್‌ ನಿರಾಕರಿಸಿದ್ದು, ಅಮೆಜಾನ್‌ನಲ್ಲಿನ ಆಪ್‌ಗಳ ಮೇಲೆ ಅನುಮಾನ ಮೂಡಿದೆ.! ಆದರೆ, ಈ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.!!

ಸಣ್ಣ ಸಂಸ್ಥೆಗಳ ಆಪ್‌ಗಳು ಬೆಲೆತೆರಲಿವೆ.!!

ಸಣ್ಣ ಸಂಸ್ಥೆಗಳ ಆಪ್‌ಗಳು ಬೆಲೆತೆರಲಿವೆ.!!

ಉಬರ್ ಮತ್ತು ನೆಟ್‌ಫ್ಲಿಕ್ಸ್ ನಂತಹ ದೈತ್ಯ ಕಂಪೆನಿಗಳು ತಮ್ಮದೇ ಆದ ಸೈಬರ್ ಸುರಕ್ಷಾ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಸಣ್ಣ ಸಂಸ್ಥೆಗಳಲ್ಲಿ ಅಂತಹ ಸುರಕ್ಷಾ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಸಣ್ಣ ಸಂಸ್ಥೆಗಳ ಅಪ್ಲಿಕೇಷನ್‌ಗಳ ಬಳಕೆದಾರರು ಬೆಲೆ ತೆರಬೇಕಾದ ಅಪಾಯವಿರುತ್ತದೆ' ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಇನ್ನು ವರದಿ ಪ್ರಕಟವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಟ್ವಿಲಿಯೊ ಇಂಕ್ ನಷೇರುಗಳ ಮೌಲ್ಯ ಕುಸಿದಿದೆ.

ಗೂಗಲ್ ಅನ್ನು ಕಂಟ್ರೋಲ್ ಮಾಡುವ ಶಕ್ತಿ ನಿಮಗಿದೆ!!..ಆದರೆ, ಕಂಟ್ರೋಲ್ ಏಕೆ ಮಾಡಬೇಕು!?ಗೂಗಲ್ ಅನ್ನು ಕಂಟ್ರೋಲ್ ಮಾಡುವ ಶಕ್ತಿ ನಿಮಗಿದೆ!!..ಆದರೆ, ಕಂಟ್ರೋಲ್ ಏಕೆ ಮಾಡಬೇಕು!?

Best Mobiles in India

English summary
Appthority, the enterprise mobile threat protection company.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X