ಇ ತ್ಯಾಜ್ಯದ ಉತ್ಪನ್ನಗಳು ಇಲ್ಲಿವೆ ನೋಡಿ
ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಜೋರಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಬೆಂಗಳೂರಿನ ಕಸ ಸುದ್ದಿಯಾಗಿದೆ. ಹಾಗಾಗಿ ಈ ಕಸ ವಿಲೇವಾರಿಗೆ ಸರ್ಕಾರ ಮತ್ತು ಬಿಬಿಎಂಪಿ ಭಾರಿ ಕಸರತ್ತು ನಡೆಸುತ್ತಿದೆ. ಆದರೆ ಈಗ ವಿಶ್ವದಲ್ಲಿ ಇದಕ್ಕಿಂತ ದೊಡ್ಡ ಸಮಸ್ಯೆ ಎದುರಾಗಿದೆ.
ಕಂಪ್ಯೂಟರ್‌ನಲ್ಲಿ ಎರಡು ಭಾಗಗಳಿರುವುದು ನಿಮಗೆಲ್ಲ ಗೊತ್ತಿರುವ ವಿಷ್ಯವೇ. ಒಂದು ಸಾಫ್ಟ್‌ವೇರ್ ಇನ್ನೊಂದು ಹಾರ್ಡ್‌ವೇರ್. ಈ ಎರಡು ಸರಿಯಾಗಿ ಕೆಲಸ ಮಾಡುತ್ತಿದ್ದರೆ ನೀವು ಆರಾಮವಾಗಿ ನಿಮ್ಮ ಕೆಲಸ ಮಾಡಬಹುದು. ಆದರೆ ಅದು ಸರಿಯಾಗಿ ಕೆಲಸ ಮಾಡದಿದ್ದರೆ ಏನು ಮಾಡುತ್ತೀರಿ ? ನಿಮ್ಮ ಕಂಪ್ಯೂಟರ್‌ನ ಯಾವ ಪಾರ್ಟ್ಸ ಹಾಳಾಗಿದೆ ಎಂಬುದನ್ನು ನೋಡಿ ಅದನ್ನು ತೆಗೆದು ಅಲ್ಲಿಗೆ ಬೇರೆ ಪಾರ್ಟ್ಸ ಹಾಕುತ್ತೇವೆ . ಹಾಕಿದ ಮೇಲೆ ಆ ಕಿತ್ತು ಹೋದ ಭಾಗವನ್ನು ಏನು ಮಾಡುತ್ತೀರಿ. ? ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವೇ. ಅದೇ ಈಗ ವಿಶ್ವದಲ್ಲಿ ತಲೆ ಎತ್ತಿರುವ ಮತ್ತು ಭವಿಷ್ಯದಲ್ಲಿ ಇಡೀ ವಿಶ್ವಕ್ಕೆ ಸವಾಲಾಗಲಿರುವ ದೊಡ್ಡ ಸಮಸ್ಯೆ.
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೇಡವಾದ ವಸ್ತುಗಳನ್ನು ನಾವು ಇ ತ್ಯಾಜ್ಯ ಎಂದು ಕರೆಯುತ್ತೇವೆ. ಪ್ರತಿವರ್ಷ ವಿಶ್ವದಲ್ಲಿ ಐವತ್ತು ಟನ್ ಇ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಕೆಲ ದೇಶಗಳಲ್ಲಿ ಇದನ್ನು ರಿಸೈಕಲ್ ಮಾಡುತ್ತಿದ್ದರೂ ಅದು ಶೇ.10 ಭಾಗ ಮಾತ್ರ. ಹಾಗಾಗಿ ವಿಶ್ವದಲ್ಲಿ ಈಗ ಇ ತ್ಯಾಜ್ಯ ಸಮಸ್ಯೆ ತಪ್ಪಿಸಲು ಅದನ್ನು ನಾನಾ ರೀತಿ ಸಂಸ್ಕರಿಸಿ ಹೊಸ ಹೊಸ ಉತ್ಪನ್ನ ತಯಾರಿಸುತ್ತಿದ್ದಾರೆ. ಕೀ ಬೋರ್ಡ್ ಬ್ಯಾಗ್, ಕಂಪ್ಯೂಟರ್ ಸೋಫಾ, ಚಿಪ್‌ನಿಂದ ಆಟದ ಸಾಮಾಗ್ರಿ ಹೀಗೆ ಕಲ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕೆಲವರು ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ತಯಾರಿಸಿದ್ದಾರೆ. ಹಾಗಾಗಿ ಗಿಜ್ಬಾಟ್ ಈ ಭಾರಿ ಆ ಉತ್ಪನ್ನಗಳ ಚಿತ್ರವನ್ನು ತಂದಿದೆ ಒಂದೊಂದೆ ಪುಟ ತಿರುಗಿಸಿ ಆ ಚಿತ್ರಗಳನ್ನು ನೋಡಿ. ಸಾಧ್ಯವಾದ್ರೆ ಈ ಸಾಧನಗಳಿಂದ ಸ್ಪೂರ್ತಿಯಾಗಿ ನೀವು ಒಂದು ಉತ್ಪನ್ನ ತಯಾರಿಸಿ.

ಸಿ.ಡಿ ಚಯರ್

ಚಿಪ್ ಸ್ಪೈಡರ್

ಕಂಪ್ಯೂಟರ್ ಸೋಫಾ

ಕೀಬೋರ್ಡ್ ಕೀ ಬ್ಯಾಗ್

ಚಿಪ್ ಡಾಗ್

ಕೀಬೋರ್ಡ್ ಕೀ ತಲೆ ಬುರುಡೆ

ಚಿಪ್ ಸ್ಲಿಪ್ಪರ್

ಮದರ್‌ಬೋರ್ಡ್ ಗಡಿಯಾರ

ಇ ಮ್ಯಾನ್

ಚಿಪ್ ಸ್ಟೇಡಿಯಂ

ಇ .ಆರ್ಟ್

ಇ. ಶೂ

ಸಿ.ಡಿ. ಗ್ರೌಂಡ್

ಇ. ಮ್ಯಾನ್

ಚಿಪ್ ಹೂ

ಚಿಪ್ ರೊಬೋಟ್

ಚಿಪ್ ಸಿಟಿ

ಇ. ಬುರುಡೆ
ಕಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಫೋನಿದೆ ಗೊತ್ತಾ..?


Click it and Unblock the Notifications








