Subscribe to Gizbot

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇನ್ನು ಮುಂದೆ ಬಳಕೆಯಾಗುವುದಿಲ್ಲ: ಬೇರೆಯದು ಬರಲಿದೆ.! ಯಾವುದು ಗೊತ್ತಾ?

Written By:

ಇಂದಿನ ದಿನದಲ್ಲಿ ಮೊಬೈಲ್ ಆನ್‌ಲಾಕ್ ಮಾಡುವುದರಿಂದ ಹಿಡಿದು ಆಫೀಸ್ ನಲ್ಲಿ ಹಾಜರಾತಿ ಹಾಕಲು, ಆಧಾರ್ ಕಾರ್ಡ್ ಕೆವೈಸಿ ವೇರಿಫೀಕೇಷನ್ ಸೇರಿದಂತೆ ಎಲ್ಲಾ ಮಾದರಿಯ ಕೆಲಸಗಳಿಗೂ ಫಿಂಗರ್ ಪ್ರಿಂಟ್ ಅನ್ನು ಬಳಸುತ್ತಿದ್ದೇವೆ. ಆದರೆ ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ಶೀಘ್ರವೇ ಇದಕ್ಕಿಂತ ಬದಲಾಗಿ ಹೆಚ್ಚು ಸುರಕ್ಷಿತವಾದ ಮಾದರಿಯೊಂದು ಬಳಕೆಗೆ ಸಿದ್ಧವಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇನ್ನು ಮುಂದೆ ಬಳಕೆಯಾಗುವುದಿಲ್ಲ: ಬದಲಾಗಲಿದೆ..!


ಈಗಾಗಲೇ ಫಿಂಗರ್ ಪ್ರಿಂಟ್ ಮಾದರಿಯನ್ನು ಕಾಪಿ ಮಾಡುವ ಕಾರ್ಯವೂ ಆರಂಭವಾಗಿದ್ದು, ಹ್ಯಾಕರ್ಸ್ ಗಳು ಬಹಳ ಬುದ್ದಿವಂತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಾಹಿತಿಗಳನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಹೊಸ ಮಾದರಿಯೊಂದನ್ನು ಸಂಶೋಧನೆ ಮಾಡಲಾಗಿದೆ. ಶೀಘ್ರವೇ ಇದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ಓದಿರಿ: ಅಮೆಜಾನ್‌ಗೆ ಸೆಡ್ಡು: ವಾಲ್‌ಮಾರ್ಟ್‌ನೊಂದಿಗೆ ಕೈ ಜೋಡಿಸಿದ ಫ್ಲಿಪ್‌ಕಾರ್ಟ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಯರ್ ಪ್ರಿಂಟ್:

ಇಯರ್ ಪ್ರಿಂಟ್:

ಫಿಂಗರ್ ಪ್ರಿಂಟ್ ಗಿಂತಲೂ ಸುರಕ್ಷಿತವಾದ ವಿಧಾನವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೇ ಇಯರ್ ಪ್ರಿಂಟ್(ಕಿವಿಯಚ್ಚು). ಮಾನವ ಫಿಂಗರ್ ಪ್ರಿಂಟ್ ಮಾದರಿಯಲ್ಲಿ ಇಯರ್ ಪ್ರಿಂಟ್ ಸಹ ಒಬ್ಬರಿಂದ ಒಬ್ಬರಿಗೆ ಬದಲಾಗಲಿದೆ. ಈ ಹಿನ್ನಲೆಯಲ್ಲಿ ಸುರಕ್ಷತೆಗಾಗಿ ಇಯರ್ ಪ್ರಿಂಟ್ ಬಳಕೆ ಮಾಡಿಕೊಳ್ಳಲು ನಿರ್ಧಾರಿಸಲಾಗಿದೆ. ಶೀಘ್ರವೇ ಇದು ಎಲ್ಲಾ ಕಡೆಗಳಲ್ಲೂ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಇಯರ್ ಪ್ರಿಂಟ್ ಹೆಚ್ಚು ಸುರಕ್ಷಿತ:

ಇಯರ್ ಪ್ರಿಂಟ್ ಹೆಚ್ಚು ಸುರಕ್ಷಿತ:

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಸುಲಭವಾಗಿ ಕಾಪಿ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಇಯರ್ ಪ್ರಿಂಟ್ ಅತ್ಯಂತ ಸುರಕ್ಷಿತವಾಗಿದೆ. ಇದನ್ನು ಯಾರು ಕಾಪಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯವನ್ನು ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚು ಸುರಕ್ಷತೆಯನ್ನು ಬಯಸುವ ಕಡೆಗಳಲ್ಲಿ ಇಯರ್ ಪ್ರಿಂಟ್ ಬಳಕೆ ಯಾಗಲಿದೆ.

ಇನ್ನು ಇದೆ:

ಇನ್ನು ಇದೆ:

ಈಗಾಗಲೇ ಮಾಹಿತಿಯನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಕಣ್ಣುಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದೆ ನೀವು ನಡೆದಾಡುವ ರೀತಿಯನ್ನು ರೆಕಾರ್ಡ್ ಮಾಡಿಕೊಂಡು ಆ ಮೂಲಕ ನಿಮ್ಮ ಗುರುತನ್ನು ಹುಡುಕುವ ತಂತ್ರಜ್ಞಾನವು ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
ear print for security. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot