ಅಮೆಜಾನ್‌ಗೆ ಸೆಡ್ಡು: ವಾಲ್‌ಮಾರ್ಟ್‌ನೊಂದಿಗೆ ಕೈ ಜೋಡಿಸಿದ ಫ್ಲಿಪ್‌ಕಾರ್ಟ್..!

|

ದೇಶಿಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಬೆಂಗಳೂರಿನ ಫ್ಲಿಪ್‌ಕಾರ್ಟ್ ಶೀಘ್ರವೇ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಕಾಣಲಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ನ ಷೇರನ್ನು ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ವಾಲ್‌ಮಾರ್ಟ್‌ ಖರೀದಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆಜಾನ್‌ಗೆ ಸೆಡ್ಡು: ವಾಲ್‌ಮಾರ್ಟ್‌ನೊಂದಿಗೆ ಕೈ ಜೋಡಿಸಿದ ಫ್ಲಿಪ್‌ಕಾರ್ಟ್..!

ಈಗಾಗಲೇ ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಪಡೆಯಲು ಕಾತುರದಿಂದ ಕೂಡಿರುವ ವಾಲ್‌ಮಾರ್ಟ್‌ ಭಾರತದ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌ನ ಷೇರನ್ನುಗಳನ್ನು ಖರೀದಿಸಲಿದೆ ಎನ್ನುವ ಮಾಹಿತಿಯನ್ನು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೇ ಈ ಒಪ್ಪಂದವು ಮಾರ್ಚ್ ನಲ್ಲಿ ನಡೆಯಲಿದೆ ಎನ್ನಲಾಗಿದೆ.

ಓದಿರಿ: ಇಂಟರ್ನೆಟ್‌ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ: ಪರಿಣಾಮ ತೀರಾ ಅಪಾಯಕಾರಿ..!

ಶೇ.25 ರಷ್ಟು ಹೂಡಿಕೆ:

ಶೇ.25 ರಷ್ಟು ಹೂಡಿಕೆ:

ಫ್ಲಿಪ್‌ಕಾರ್ಟ್‌ನಲ್ಲಿ ಶೇ. 25ರಷ್ಟು ಹೂಡಿಕೆಯನ್ನು ವಾಲ್‌ಮಾರ್ಟ್‌ ಮಾಡಲಿದೆ ಎನ್ನಲಾಗಿದ್ದು, ಅಮೆಜಾನ್ ಮುಂದೆ ತೊಡೆ ತಟ್ಟಿ ನಿಂತಿರುವ ಫ್ಲಿಪ್‌ಕಾರ್ಟ್‌ಗೆ ಇದು ಹೆಚ್ಚಿನ ಶಕ್ತಿಯನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್ ಮಾರುಕಟ್ಟೆಯಲ್ಲಿ ಇನ್ನುಷ್ಟು ದೊಡ್ಡದಾಗಿ ಬೆಳೆಯಲಿದೆ.

Here's how the Face ID of the newly launched Oppo A83 works (KANNADA)
ಬೆಂಗಳೂರಿಗೆ ಬಂದಿದ್ದ ವಾಲ್‌ಮಾರ್ಟ್‌ ಅಧಿಕಾರಿಗಳು:

ಬೆಂಗಳೂರಿಗೆ ಬಂದಿದ್ದ ವಾಲ್‌ಮಾರ್ಟ್‌ ಅಧಿಕಾರಿಗಳು:

ಕೆಲವು ದಿನಗಳ ಹಿಂದೆ ವಾಲ್‌ಮಾರ್ಟ್‌ ಸಿಇಒ ಸೇರಿದಂತೆ ಅಧಿಕಾರಿಗಳ ತಂಡವೊಂದು ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್‌ ಕಚೇರಿಗೆ ಆಗಮಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿಯೇ ಈ ಶೇರು ಮಾರಾಟದ ಒಪ್ಪಂದ ಕುರಿತು ಮಾತುಕತೆ ನಡೆದಿತ್ತು ಎನ್ನಲಾಗಿದೆ.

ಅಮೆಜಾನ್‌ಗೆ ಸೆಡ್ಡು:

ಅಮೆಜಾನ್‌ಗೆ ಸೆಡ್ಡು:

ವಾಲ್‌ಮಾರ್ಟ್‌ ಷೇರುಗಳ ಖರೀದಿ ಮಾಡಿದ ನಂತರದಲ್ಲಿ ಅಮೆಜಾನ್‌ ವಿರುದ್ಧ ಭಾರತದಲ್ಲಿ ಪ್ರಬಲ ಪೈಪೋಟಿ ನೀಡಲು ಫ್ಲಿಪ್‌ಕಾರ್ಟ್‌ ಸಾಧ್ಯವಾಗಲಿದೆ. ಇದರಿಂದಾಗಿ ವಾಲ್‌ಮಾರ್ಟ್‌ ಸಹ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಪರೀಕ್ಷೆಯನ್ನು ನಡೆಸುತ್ತಿದೆ. ಒಟ್ಟಿನಲ್ಲಿ ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್ ಜುಗಲ್ ಬಂದಿ ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಲಿದೆ ಎಂಬುದನ್ನು ನೋಡಬೇಕಾಗಿದೆ.

Best Mobiles in India

English summary
Walmart May Buy Stake in Flipkart, India's Answer to Amazon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X