Home
ಸುದ್ದಿಜಾಲ

ಎಚ್ಚರ...ಇಯರ್‌ಬಡ್ಸ್‌ ಹೇಗೆಲ್ಲಾ ಕಿವಿಯ ಸೋಂಕನ್ನು ಉಂಟುಮಾಡುತ್ತವೆ ಗೊತ್ತಾ?

ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರಲ್ಲಿ ಈಗ ಇಯರ್‌ಬಡ್ಸ್‌ ಬಳಕೆ ಸಹ ಅತಿಯಾಗಿದೆ. ಅದರಲ್ಲೂ ವಿವಿಧ ಫೀಚರ್ಸ್‌ ಇರುವ ಹೊಸ ರೀತಿಯ ಹಾಗೂ ಶೈಲಿಯ ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಸಂಗೀತ ಆಲಿಸಲು, ಸಿನಿಮಾ ನೋಡಲು ಹಾಗೂ ಗೇಮಿಂಗ್‌ ನಲ್ಲಿ ಉತ್ತಮ ಅನುಭವ ಪಡೆದುಕೊಳ್ಳಲು ಇವುಗಳು ಸಾಕಷ್ಟು ಸಹಾಯಕಾರಿ. ಹಾಗೆಯೇ ಅಷ್ಟೇ ಅಪಾಯಕಾರಿ.

ಹೌದು, ಈ ವಿಷಯ ಕೇಳಿದ್ರೆ ನಿಮಗೆ ಖಂಡಿತಾ ಶಾಕ್‌ ಆಗುತ್ತದೆ. ಯಾಕೆಂದರೆ ನಿರಂತರವಾಗಿ ಇಯರ್‌ಬಡ್ಸ್‌ಗಳನ್ನು ಬಳಕೆ ಮಾಡುವುದರಿಂದ ಆಗುವ ಸಮಸ್ಯೆಗಳು ಒಂದೆರಡಲ್ಲ. ಹಾಗಿದ್ರೆ, ಇಯರ್‌ಬಡ್ಸ್‌ಗಳನ್ನು ಎಚ್ಚರಿಕೆ ವಹಿಸಿಕೊಂಡು ಹೇಗೆ ಬಳಕೆ ಮಾಡಬೇಕು?, ಏನೆಲ್ಲಾ ಸಮಸ್ಯೆ ನಿರ್ಮಾಣ ಆಗುತ್ತವೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಎಚ್ಚರ...ಇಯರ್‌ಬಡ್ಸ್‌ ಹೇಗೆಲ್ಲಾ ಕಿವಿಯ ಸೋಂಕನ್ನು ಉಂಟುಮಾಡುತ್ತವೆ ಗೊತ್ತಾ?

ಇಯರ್‌ಬಡ್ಸ್‌ಗಳಿಂದ ಏನೆಲ್ಲಾ ಸಮಸ್ಯೆ?: ಸಾಮಾನ್ಯವಾಗಿ ಅನೇಕ ಜನರು ತಲೆತಿರುಗುವಿಕೆ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಅದರಲ್ಲೂ ಸಕ್ರಿಯ ಶಬ್ದ ರದ್ಧತಿ (ANC) ಆಯ್ಕೆ ಇರುವ ಡಿವೈಸ್‌ಗಳಿಂದ ಉಂಟಾಗುವ ಬಾಹ್ಯ ಶಬ್ದದ ಕೊರತೆಯಿಂದ ನಿಮ್ಮ ಕಿವಿಗಳನ್ನು ಮರುಳುಗೊಳಿಸಬಹುದು. ಈ ಮೂಲಕ ನಿಮ್ಮ ಮೆದುಳನ್ನು ಗೊಂದಲಗೊಳಿಸಬಹುದು ಎನ್ನಲಾಗಿದೆ. ಇವು ನಿಮ್ಮನ್ನು ದಿಗ್ಭ್ರಮೆಗೂ ದೂಡುತ್ತವೆ.

ಇಷ್ಟು ಮಾತ್ರವಲ್ಲದೆ ಇಯರ್‌ಬಡ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ಹೆಚ್ಚಿನ ವಾಲ್ಯೂಮ್‌ಗಳಲ್ಲಿ ದೀರ್ಘಕಾಲದವರೆಗೆ ಬಳಸಿದರೆ ನಿಮ್ಮ ಶ್ರವಣ ಖಂಡಿತಾ ಹಾನಿಗೊಳಗಾಗಬಹುದು. ಇದೆಲ್ಲದರ ಪರಿಣಾಮ ಇಯರ್‌ಬಡ್‌ಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ನೇರವಾಗಿ ಕಿವಿಯ ಒಳಗೆ ಹೋಗಿ ಕೂರುವುದರಿಂದ ಒಳಗಿನ ಕಿವಿಯ ಸಿಲಿಯಾಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತವೆ.

ಇನ್ನುಳಿಂದಂತೆ ನಮ್ಮ ಕಿವಿಗಳಲ್ಲಿ ಸೂಕ್ಷ್ಮಜೀವಿಗಳು, ತೇವಾಂಶ ಮತ್ತು ಇಯರ್‌ವಾಕ್ಸ್‌ ಇರುತ್ತದೆ. ಇವೆಲ್ಲವೂ ನಮ್ಮ ಕಿವಿಯ ಆರೋಗ್ಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕೊಡುಗೆ ನೀಡುತ್ತವೆ. ಆದರೆ, ಇಯರ್‌ಬಡ್ಸ್‌ಗಳು ಈ ಪ್ರಕ್ರಿಯೆಯನ್ನು ತಡೆಯಲಿದ್ದು, ಈ ಮೂಲಕ ನಿಮ್ಮ ಕಿವಿಯನ್ನು ನಿಧಾನವಾಗಿ ಸಂಕಷ್ಟಕ್ಕೆ ದೂಡಲು ಮುಂದಾಗುತ್ತವೆ.

ತಜ್ಞರ ಪ್ರಕಾರ, ಕಿವಿ ತೇವ, ಬೆಚ್ಚಗಿನ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ ಮತ್ತು ಇಯರ್‌ಬಡ್‌ಗಳು ಕೆಲವೊಮ್ಮೆ ತೇವಾಂಶ ಮತ್ತು ದ್ರವಕ್ಕೆ ಸಮಸ್ಯೆ ಉಂಟು ಮಾಡುವುದರಿಂದ ಕಿವಿ ಸೋಂಕಿಗೆ ಒಳಗಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಹಾಗೆಯೇ ಇಯರ್‌ಬಡ್‌ಗಳು ಇಯರ್‌ವಾಕ್ಸ್ ಅನ್ನು ನಮ್ಮ ಕಿವಿ ಆಳಕ್ಕೆ ಮತ್ತಷ್ಟು ತಳ್ಳಬಹುದು, ಇದರ ಪರಿಣಾಮವಾಗಿ ಒಂದೇ ಕಡೆ ಹೆಚ್ಚು ವಾಕ್ಸ್ ಸಂಗ್ರಹವಾಗಿ ಮತ್ತಷ್ಟು ಸೋಂಕು ಇದರಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ.

ಎಚ್ಚರ...ಇಯರ್‌ಬಡ್ಸ್‌ ಹೇಗೆಲ್ಲಾ ಕಿವಿಯ ಸೋಂಕನ್ನು ಉಂಟುಮಾಡುತ್ತವೆ ಗೊತ್ತಾ?

ಕಿವಿ ಸೋಂಕನ್ನು ತಪ್ಪಿಸುವುದು ಹೇಗೆ? ನಿಮ್ಮ ಮೆಚ್ಚಿನ ಸಂಗೀತವನ್ನು ಕೇಳಲು ನೀವು ಈಗಲೂ ಯಾವುದೇ ಅಂಜಿಕೆ ಇಲ್ಲದೆ ಈಗಲೂ ಸಹ ಇಯರ್‌ಬಡ್ಸ್‌ಗಳನ್ನು ಬಳಕೆ ಮಾಡಿ, ತೊಂದರೆ ಇಲ್ಲ. ಆದರೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ಕೆಲಸ ಮಾಡಬೇಕಿದೆ. ಆ ಮುನ್ನೆಚ್ಚರಿಕಾ ಕ್ರಮಗಳು ಏನೇನು ಎಂಬುದನ್ನು ತಿಳಿಸಿಕೊಡಲಾಗಿದೆ ಓದಿರಿ.

ನಿಮಗೆ ಕಿವಿಯಲ್ಲಿ ಈಗಾಗಲೇ ಸೋಂಕು ಇದ್ದರೆ ಇಯರ್‌ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ. ಹಾಗೆಯೇ ನಿಮ್ಮ ಇಯರ್‌ಫೋನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸು ಮೂಲಕ ಎಚ್ಚರಿಕೆ ವಹಿಸಿಕೊಳ್ಳಿ, ಸಿಕ್ಕ ಸಿಕ್ಕವರಿಗೆ ನಿಮ್ಮ ಇಯರ್‌ಫೋನ್‌ ಬಳಕೆ ಮಾಡಲು ನೀಡಬೇಡಿ. ಬೇರೆಯವರಿಗೆ ಏನಾದರೂ ಕಿವಿಯಲ್ಲಿ ಸೋಂಕು ಇದ್ದರೆ ಅದು ನಿಮಗೂ ಅಂಟುತ್ತದೆ.

ಈಗಂತೂ ಇನ್‌ಇಯರ್‌ ಇಯರ್‌ಬಡ್ಸ್‌ಗಳು ಹೆಚ್ಚು ಬೇಡಿಕೆ ನಿರ್ಮಾಣ ಮಾಡಿವೆ. ಇವುಗಳನ್ನು ಬಳಕೆ ಮಾಡುವಾಗ ಹೊರಗಡೆ ಏನೆಲ್ಲಾ ಸಂಭವಿಸುತ್ತಿದೆ ಎನ್ನುವ ಅರಿವೇ ಇರುವುದಿಲ್ಲ ಆದರೆ, ಇವುಗಳ ಬದಲಿಗೆ ಬಾಹ್ಯ ಹೆಡ್‌ಫೋನ್‌ಗಳನ್ನ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಿ. ಇದರೊಂದಿಗೆ ನಿಮ್ಮ ಕಿವಿಯನ್ನು ಆಗಾಗ್ಗೆ ಹತ್ತಿ ಸ್ವ್ಯಾಬ್ ಬಳಕೆ ಮಾಡಿಕೊಂಡು ಸ್ವಚ್ಛ ಮಾಡುತ್ತಾ ಇರಿ. ಇದೆಲ್ಲಕ್ಕೂ ಮಿಗಿಲಾಗಿ ನಿಮ್ಮ ಫೋನ್‌ನ ವಾಲ್ಯೂಮ್‌ನ ಮೇಲೆ ಕಂಟ್ರೋಲ್‌ ಇರಲಿ.

Best Mobiles in India

English summary
While there are plenty of benefits from earbuds, there are just as many health problems. The main reason for this is the habit of constantly using earbuds. So read how to be careful.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+