Home
ಸುದ್ದಿಜಾಲ

Realme: ಲಾಂಚ್‌ ಆಗೋ ಮುನ್ನವೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಗೆ ಕೊಡುಗೆ! 4,299ರೂ. ಉಳಿತಾಯ

ರಿಯಲ್‌ಮಿ ನಾರ್ಜೊ 70 ಪ್ರೊ 5G (Realme Narzo 70 Pro 5G) ಸ್ಮಾರ್ಟ್‌ಫೋನ್‌ ಲಾಂಚ್‌ ಆಗುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿದೆ. ಈ ನಡುವೆ ಸಾಕಷ್ಟು ಜನರು ಈ ಫೋನ್‌ ಅನ್ನು ಖರೀದಿ ಮಾಡಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಈ ಬೆಳವಣಿಗೆ ನಡುವೆ ಈಗ ಈ ಫೋನ್‌ ಖರೀದಿ ಮಾಡುವವರಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ರಿಯಲ್‌ಮಿ ನಾರ್ಜೊ 70 ಪ್ರೊ 5G ಖರೀದಿ ಮಾಡುವವರಿಗೆ ರಿಯಲ್‌ಮಿ ಬಂಫರ್ ಆಫರ್ ಘೋಷಣೆ ಮಾಡಿದೆ. ಈ ಮೂಲಕ ಗ್ರಾಹಕರು 4,299ರೂ. ಉಳಿತಾಯ ಮಾಡಬಹುದಾಗಿದೆ. ಈ ವಿಶೇಷ ಕೊಡುಗೆಗೆ ಅರ್ಲಿ ಬರ್ಡ್ ಸೇಲ್‌ ಎಂದು ಕರೆಯಲಾಗಿದೆ. ಹಾಗಿದ್ರೆ, ಈ ಆಫರ್ ಪಡೆಯುವುದು ಹೇಗೆ?, ಈ ಫೋನ್‌ನ ನಿರೀಕ್ಷಿತ ಫೀಚರ್ಸ್‌ ಏನು?, ಯಾವಾಗ ಲಾಂಚ್‌ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಲಾಂಚ್‌ ಆಗೋ ಮುನ್ನವೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಗೆ ಕೊಡುಗೆ!..

ರಿಯಲ್‌ಮಿ ನಾರ್ಜೊ 70 ಪ್ರೊ 5G ಸ್ಮಾರ್ಟ್‌ಫೋನ್: ರಿಯಲ್‌ಮಿ ಈ ವರ್ಷ ಭಾರತದಲ್ಲಿ ತನ್ನ ಮೂರನೇ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಅದುವೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್. ಈ ಫೋನ್ ಅನ್ನು ಫೋಟೋಗ್ರಫಿ ಸಂಬಂಧ ಹೆಚ್ಚು ಕೇಂದ್ರೀಕರಿಸಲಾಗಿದೆ. ಇನ್ನು ಈ ಫೋನ್ ಮಾರ್ಚ್ 19 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್‌ ಆಗಲಿದ್ದು, ಅಧಿಕೃತ ಲಾಂಚ್‌ಗೆ ಮುಂಚಿತವಾಗಿ, ಅರ್ಲಿ ಬರ್ಡ್‌ ಸೇಲ್‌ (Early Bird Sale) ಕೊಡುಗೆ ಘೋಷಣೆ ಮಾಡಲಾಗಿದೆ.

ರಿಯಲ್‌ಮಿ ಈ ವಿಶೇಷ ಏಲ್‌ ಅನ್ನು ಅಮೆಜಾನ್‌ ಹಾಗೂ ರಿಯಲ್‌ಮಿಯ ಅಧಿಕೃತ ಸೈಟ್‌ನಲ್ಲಿ ಘೋಷಣೆ ಮಾಡಿದೆ. ಆಸಕ್ತ ಖರೀದಿದಾರರು ಈ ಫೋನ್‌ ಖರೀದಿ ಮೇಲೆ 6 ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಪಡೆಯಬಹುದು. ಇದರ ಜೊತೆಗೆ 4299ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಅದರಲ್ಲೂ 2299ರೂ. ಮೌಲ್ಯದ ರಿಯಲ್‌ಮಿ ಬಡ್ಸ್ T300 ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವುದರಿಂದ ಈ ಕೊಡುಗೆ ಸಾಕಷ್ಟು ಜನರಿಗೆ ಇಷ್ಟವಾಗಲಿದೆ. ಜೊತೆಗೆ ಈ ಫೋನ್‌ ಎರಡು ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಲಾಂಚ್‌ ಆಗೋ ಮುನ್ನವೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಗೆ ಕೊಡುಗೆ!..

ರಿಯಲ್‌ಮಿ ನಾರ್ಜೊ 70 ಪ್ರೊ 5G ಸ್ಮಾರ್ಟ್‌ಫೋನ್ ನಿರೀಕ್ಷಿತ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ನ ಎಲ್ಲಾ ರೀತಿಯ ಫೀಚರ್‌ಸ್ ಇನ್ನೂ ಬಹಿರಂಗಗೊಳ್ಳದಿದ್ದರೂ, ಈ ಫೋನ್‌ನ ಕೆಲವು ಫೋಟೋಗ್ರಫಿ ಫೀಚರ್ಸ್‌ ಲೀಕ್‌ ಆಗಿವೆ. ಅಂದರೆ ಈ ಫೋನ್‌ನಲ್ಲಿ ಕಡಿಮೆ ಬೆಳಕಿನ ಛಾಯಾಗ್ರಹಣ ಫೀಚರ್ಸ್‌ ಇರಲಿದೆ. ಹಾಗೆಯೇ ಸೋನಿ IMX890 ಕ್ಯಾಮೆರಾ ಸೆನ್ಸರ್‌ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಲಿದ್ದು, ಈ ಮೂಲಕ ಫೋಟೋಗ್ರಫಿ ಪ್ರಿಯರಿಗೆ ನೆಚ್ಚಿನ ಫೋನ್‌ ಆಗಿರಲಿದೆ.

ಬೆಲೆಗೆ ಸಂಬಂಧಿಸಿದಂತೆ ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಅಂದರೆ 8GB RAM + 128GB ಮತ್ತು 8GB RAM +256GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ರಿಯಲ್‌ಮಿ ನಾರ್ಜೊ 60 ಪ್ರೊ 5G ಯಂತೆಯೇ ಸ್ಪರ್ಧಾತ್ಮಕ ಬೆಲೆಯನ್ನು ನಿರೀಕ್ಷೆ ಮಾಡಲಾಗಿದೆ. ಅಂದರೆ ಇದು 23,999 ರೂ.ಗಳ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗುತ್ತದೆ. ಈ ಮೂಲಕ ಈ ಫೋನ್ ಐಕ್ಯೂ Z9, ನಥಿಂಗ್ ಫೋನ್ 2a, ರೆಡ್ಮಿ ನೋಟ್ 13 Pro, ಮತ್ತು ರಿಯಲ್‌ಮಿ 12 ಪ್ರೊ 5G ಯಂತಹ ಫೋನ್‌ಗಳ ವಿರುದ್ಧ ತೊಡೆತಟ್ಟಿ ನಿಲ್ಲಲಿದೆ.

ಲಾಂಚ್‌ ಆಗೋ ಮುನ್ನವೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಗೆ ಕೊಡುಗೆ!..

ಕೆಲವೇ ದಿನಗಳಲ್ಲಿ ಈ ಫೋನ್ ಅನಾವರಣ ಆಗುತ್ತಿದ್ದು, ಈ ವಿಶೇಷ ಸೇಲ್‌ ಈ ಫೋನ್‌ ಬಗ್ಗೆ ಇನ್ನಷ್ಟು ಕ್ರೇಜ್‌ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಈ ಮೂಲಕ ಯಾರೆಲ್ಲಾ ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್ಫೋನ್‌ ಖರೀದಿ ಮಾಡಲು ಮುಂದಾಗಿದ್ದಾರೊ ಅವರು ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಬಹುದು.

Best Mobiles in India

English summary
Realme has announced a bumper offer for buyers of Realme Narzo 70 Pro 5G. Through this, customers can get a discount of Rs 4299.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+