Home
ಸುದ್ದಿಜಾಲ

Realme: ರಿಯಲ್‌ಮಿ P1 5G ಗೆ ಅರ್ಲಿ ಬರ್ಡ್ ಸೇಲ್‌ ಕೊಡುಗೆ! ಆಫರ್ ಮಿಸ್‌ ಮಾಡಿಕೊಳ್ಳಬೇಡಿ..

ರಿಯಲ್‌ಮಿ ಬಹುನಿರೀಕ್ಷಿತ ರಿಯಲ್‌ಮಿ P1 5G ಸ್ಮಾರ್ಟ್‌ಫೋನ್‌ (Realme P1 5G smartphone) ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದೆ. ಆದರೆ ಇದಕ್ಕೂ ಮೊದಲು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈ ಫೋನ್‌ ದೊಡ್ಡ ಕಮಾಲ್‌ ಮಾಡುತ್ತಿದ್ದು, ದೊಡ್ಡ ಅಲೆಯನ್ನೇ ಉಂಟು ಮಾಡಿದೆ.

ಹೌದು, ರಿಯಲ್‌ಮಿ P1 5G ಸರಣಿ ಫೋನ್‌ ಅನ್ನು ಮುಂದಿನ ವಾರ ಭಾರತದಲ್ಲಿ ಲಾಂಚ್‌ ಮಾಡಲಾಗುತ್ತದೆ. ಆದರೆ, ಲಾಂಚ್‌ ಆಗುವ ಮುನ್ನವೇ ಈ ಫೋನ್‌ ಸಂಬಂಧ ಅರ್ಲಿ ಬರ್ಡ್ ಸೇಲ್‌ (Early Bird Sale) ಕೊಡುಗೆ ಘೋಷಣೆ ಮಾಡಲಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ಭರ್ಜರಿ ಆಫರ್ ಪಡೆಯಬಹುದಾಗಿದೆ. ಹಾಗಿದ್ರೆ, ಈ ಫೋನ್‌ ಮೇಲೆ ಏನಿದೆ ಆಫರ್?, ಇದರ ನಿರೀಕ್ಷಿತ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ P1 5G ಗೆ ಅರ್ಲಿ ಬರ್ಡ್ ಸೇಲ್‌ ಕೊಡುಗೆ! ಆಫರ್ ಮಿಸ್‌ ಮಾಡಿಕೊಳ್ಳಬೇಡಿ..

ರಿಯಲ್‌ಮಿ P1 5G ಸರಣಿ ಮೇಲೆ ಅರ್ಲಿ ಬರ್ಡ್ ಸೇಲ್‌: ರಿಯಲ್‌ಮಿ P1 5G ಸರಣಿ ಫೋನ್‌ ಅನ್ನು ಮುಂದಿನ ವಾರ ಏಪ್ರಿಲ್ 15 ರಂದು ನಿಗದಿಪಡಿಸಲಾಗಿದೆ. ಉಡಾವಣೆಗೆ ಮುಂಚಿತವಾಗಿ, ಬ್ರ್ಯಾಂಡ್ ಅರ್ಲಿ ಬರ್ಡ್ ಸೇಲ್‌ ಅನ್ನು ಘೋಷಣೆ ಮಾಡಿದ್ದು, ರಿಯಲ್‌ಮಿ P1 5G ನಲ್ಲಿ ಗ್ರಾಹಕರು ಏನೆಲ್ಲಾ ಕೊಡುಗೆಗಳನ್ನು ಪಡೆಯಬಹುದು ಎಂಬುವ ವಿಷಯವನ್ನು ಪ್ರಕಟಿಸಲಾಗಿದೆ.

ರಿಯಲ್‌ಮಿ P1 5G ಅರ್ಲಿ ಬರ್ಡ್ ಸೇಲ್ ಸೇಲ್‌ 15 ರಂದು ಅಂದರೆ ಲಾಂಚ್ ದಿನದಂದು ನಡೆಯಲಿದೆ. ಇದು ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ ನಲ್ಲಿ ಸಂಜೆ 6:00 ಗಂಟೆಗೆ ಆರಂಭ ಆಗಲಿದ್ದು, ರಾತ್ರಿ 8:00 ರವರೆಗೆ ಇರಲಿದೆ. ಅರ್ಲಿ ಬರ್ಡ್ ಸೇಲ್ ಸಮಯದಲ್ಲಿ, ಗ್ರಾಹಕರು ರಿಯಲ್‌ಮಿ P1 5G ಯಲ್ಲಿ 2,000 ರೂ.ಗಳ ವರೆಗಿನ ಕೂಪನ್ ಅನ್ನು ಪಡೆಯಬಹುದು. ಈ ಕೂಪನ್ ರಿಯಾಯಿತಿಯನ್ನು ಸ್ಮಾರ್ಟ್‌ಫೋನ್‌ನ ಎಲ್ಲಾ ವೇರಿಯಂಟ್‌ಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ರಿಯಲ್‌ಮಿ P1 5G ಗೆ ಅರ್ಲಿ ಬರ್ಡ್ ಸೇಲ್‌ ಕೊಡುಗೆ! ಆಫರ್ ಮಿಸ್‌ ಮಾಡಿಕೊಳ್ಳಬೇಡಿ..

ರಿಯಲ್‌ಮಿ P1 5G ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ ಪ್ರಮುಖ ಫೀಚರ್ಸ್ ಈಗಾಗಲೇ ದೃಢವಾಗಿವೆ. ಈ ರಿಯಲ್‌ಮಿ P1 5G ಸ್ಮಾರ್ಟ್ ಫೋನ್ 6.67 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆಯಲಿದ್ದು, 120Hz ರಿಫ್ರೆಶ್ ರೇಟ್, 2000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ TUV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ವಿಶೇಷ ಡಿಸ್‌ಪ್ಲೇ ಫೀಚರ್ಸ್‌ ಪಡೆದ ಮೊದಲ ಮತ್ತು ಏಕೈಕ ಫೋನ್ ಎಂದು ರಿಯಲ್‌ಮಿ ತಿಳಿಸಿದೆ. ವಿಶೇಷ ಏನೆಂದರೆ ಇದು ರೈನ್‌ವಾಟರ್‌ ಟಚ್‌ ಎಂಬ ಫೀಚರ್ಸ್‌ ಅನ್ನೂ ಸಹ ಹೊಂದಿದೆ.

ಇದರೊಂದಿಗೆ ಈ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ7050 ಚಿಪ್‌ಸೆಟ್ ಅನ್ನು ಹೊಂದಿದ್ದು, ಈ ಫೋನ್‌ಗೆ ದೊಡ್ಡ ಶಕ್ತಿ ನೀಡುತ್ತದೆ ಮತ್ತು AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ಕೋರ್ ಹೊಂದಿರುವ ವಿಭಾಗದಲ್ಲಿ ಇದು ಅತ್ಯಂತ ವೇಗವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಫೋನ್‌ ಫೀನಿಕ್ಸ್ ರೆಡ್ ಮತ್ತು ಪೀಕಾಕ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಏಳು ಲೇಯರ್ ವಿಸಿ ಕೂಲಿಂಗ್ ಸಿಸ್ಟಮ್ ಮತ್ತು IP54 ರೇಟಿಂಗ್ ಅನ್ನು ಸಹ ಹೊಂದಿದೆ.

ರಿಯಲ್‌ಮಿ P1 5G ಗೆ ಅರ್ಲಿ ಬರ್ಡ್ ಸೇಲ್‌ ಕೊಡುಗೆ! ಆಫರ್ ಮಿಸ್‌ ಮಾಡಿಕೊಳ್ಳಬೇಡಿ..

ಇದರ ಜೊತೆಗೆ ಈ ಫೋನ್ 45W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ ಎಂದು ದೃಢೀಕರಿಸಲಾಗಿದೆ. ಅಲ್ಲದೆ ಈಗಾಗಲೇ ಶೇರ್‌ ಮಾಡಲಾದ ಟೀಸರ್‌ ಪ್ರಕಾರ ಈ ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ರಿಯಲ್‌ಮಿ P1 5G ಸರಣಿಯ ಬೆಲೆ 15,000 ರೂ.ಗಳಿಂದ ಆರಂಭ ಆಗಲಿದೆ ಎಂದು ತಿಳಿಸಲಾಗಿದೆ.

Best Mobiles in India

English summary
Realme P1 5G series phone will be launched in India next week. However, an Early Bird Sale offer has been announced for this phone before the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+