ಶಿಯೋಮಿಗೆ ಶಾಕ್!..ಸಂಸ್ಥೆಗೆ ಸೇರಿದ 5,551 ಕೋಟಿ ಜಪ್ತಿ ಮಾಡಿದ ED!

|

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ಶಿಯೋಮಿಗೆ ಭಾರತದ ಜಾರಿ ನಿರ್ದೇಶನಾಲಯವು (ED) ಬಲೆ ಬೀಸಿ ಶಾಕ್ ನೀಡಿದೆ. ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 5,551.27 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ. ಶಿಯೋಮಿ ಕಂಪನಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿ ಹಣವಿದ್ದು ಅಕ್ರಮವಾಗಿ ಅದನ್ನು ಹೊರಕ್ಕೆ ಕಳುಹಿಸಿದ್ದಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

ಶಿಯೋಮಿಗೆ ಶಾಕ್!..ಸಂಸ್ಥೆಗೆ ಸೇರಿದ 5,551 ಕೋಟಿ ಜಪ್ತಿ ಮಾಡಿದ ED!

1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 5,551.27 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ. ಈ ಹಣವು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ಅಕ್ರಮ ಹಣ ಹೊರಕ್ಕೆ ರವಾನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿಯೋಮಿಯ ಬ್ಯಾಂಕ್‌ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಕಂಪನಿಯ ವ್ಯವಹಾರ ಪ್ರಕ್ರಿಯೆಗಳು ಭಾರತೀಯ ವಿದೇಶಿ ವಿನಿಮಯ ಕಾನೂನುಗಳಿಗೆ ಅನುಗುಣವಾಗಿವೆಯೇ ಎಂದು ನಿರ್ಧರಿಸಲು ತನಿಖೆಯ ಭಾಗವಾಗಿ ಶಿಯೋಮಿ ಕಾರ್ಪ್‌ನ ಮಾಜಿ ಭಾರತೀಯ ಮುಖ್ಯಸ್ಥರನ್ನು ಸಂಸ್ಥೆಯು ಈ ತಿಂಗಳ ಆರಂಭದಲ್ಲಿ ವಿಚಾರಣೆಗೆ ಕರೆದಿತ್ತು ಎಂದು ಮೂಲಗಳು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಇಡಿ ಎರಡು ತಿಂಗಳಿನಿಂದ ಸಂಸ್ಥೆಯ ಮೇಲೆ ತನಿಖೆ ನಡೆಸುತ್ತಿದೆ. ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಅದು ತಿಳಿಸಿತ್ತು. ಈ ವಿಚಾರದ ಬಗ್ಗೆ ಕೇಳಿದಾಗ ಉತ್ತರಿಸಲು ಮನು ಕುಮಾರ್ ಜೈನ್ ನಿರಾಕರಿಸಿದ್ದಾರೆ.

ಶಿಯೋಮಿಗೆ ಶಾಕ್!..ಸಂಸ್ಥೆಗೆ ಸೇರಿದ 5,551 ಕೋಟಿ ಜಪ್ತಿ ಮಾಡಿದ ED!

ರಾಯಿಟರ್ಸ್ ವರದಿಯ ಪ್ರಕಾರ ಶಿಯೋಮಿ ಇಂಡಿಯಾ, ಗುತ್ತಿಗೆ ತಯಾರಕರು ಮತ್ತು ಚೀನಾದಲ್ಲಿ ಮೂಲ ಘಟಕದ ನಡುವೆ ಅಸ್ತಿತ್ವದಲ್ಲಿರುವ ವ್ಯವಹಾರ ರಚನೆಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ರಾಯಲ್ಟಿ ಪಾವತಿಗಳನ್ನು ಒಳಗೊಂಡಂತೆ ಶಿಯೋಮಿ ಇಂಡಿಯಾ ಮತ್ತು ಅದರ ಮೂಲ ಘಟಕದ ನಡುವಿನ ನಿಧಿಯ ಹರಿವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ರಾಯಿಟರ್ಸ್‌ಗೆ ಮೂಲವೊಂದು ತಿಳಿಸಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಹೇಳಿರುವಂತೆ ಶಿಯೋಮಿ ಕಂಪನಿಯು ಎಲ್ಲಾ ಭಾರತೀಯ ಕಾನೂನುಗಳಿಗೆ ಬದ್ಧವಾಗಿದೆ. ಅಲ್ಲದೇ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಪೂರೈಸಿದೆ ಎಂದು ತಿಳಿಸಿದೆ. ಅವರು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಲು ನಾವು ಅವರು ನಡೆಸುತ್ತಿರುವ ತನಿಖೆಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ ಎಂದಿದೆ. ಭಾರತದಲ್ಲಿ ಶಿಯೋಮಿ ಕಥೆ ತನಿಖೆ ಬಳಿಕ ತಿಳಿಯಲಿದೆ.

Best Mobiles in India

English summary
ED Seizes Rs 5551 Crore From Xiaomi in Bengaluru.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X