ಆಧಾರ್ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು: ಎಡ್ವರ್ಡ್‌ ಸ್ನೋಡೆನ್

Written By:

ಆಂಗ್ಲ ಪತ್ರಿಕೆ ದಿ ಟ್ರಿಬ್ಯೂನ್ ಕೇವಲ ರೂ.500ಕ್ಕೆ ಆಧಾರ್ ಕಾರ್ಡ್ ಮಾಹಿತಿಯನ್ನು ಮಾರಲಾಗುತ್ತಿದೆ ಎಂಬ ತನಿಖಾ ವರದಿ ಪ್ರಕಟಿಸಿದ ಬೆನ್ನಲೇ UIDAI ಮತ್ತು ಕೇಂದ್ರ ಸರಕಾರ ಮಾಧ್ಯಮಗಳಿಗೆ ಆಧಾರ್ ಮಾಹಿತಿಯೂ ಭದ್ರವಾಗಿದ್ದು, ಯಾರು ಸಹ ಆಧಾರ್ ಮಾಹಿತಿಯನ್ನು ಕದಿಯುವ ಸಾಧ್ಯತೆ ಇಲ್ಲ ಎಂದಿದ್ದವು.

ಆಧಾರ್ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು: ಎಡ್ವರ್ಡ್‌ ಸ್ನೋಡೆನ್

ಓದಿರಿ: ಸ್ಯಾಮ್‌ಸಂಗ್‌ನೊಂದಿಗೆ ಕೈ ಜೋಡಿಸಿದ ವೊಡಾಫೋನ್: ವಿಶೇಷ ಆಫರ್-ಭರ್ಜರಿ ಕ್ಯಾಷ್ ಬ್ಯಾಕ್..!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಕ್ಕೆ ನಿದ್ದೆಗೇಡಿಸಿರುವ ಎಡ್ವರ್ಡ್‌ ಸ್ನೋಡೆನ್, ಭಾರತ ಸರಕಾರ ಹೇಳಿಕೊಂಡಿರುವಂತೆ ಆಧಾರ್‌ ಡಾಟಾಬೇಸ್‌ ಸುರಕ್ಷಿತವಲ್ಲ ಎಂದಿದ್ದು, ಆಧಾರ್ ಮಾಹಿತಿಗಳನ್ನು ಹ್ಯಾಕರ್‌ಗಳು ಸುಲಭದಲ್ಲಿ ಕದಿಯಬಹುದಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವಿಟ್ ಮಾಡಿದ ಸ್ನೋಡೆನ್:

ಟ್ವಿಟ್ ಮಾಡಿದ ಸ್ನೋಡೆನ್:

ದೇಶದ ಖಾಸಗಿ ಮಾಹಿತಿಗಳ ಸುರಕ್ಷಿತವಾಗಿರಲು ಸರ್ಕಾರಗಳು ಕಾನೂನಿನ ರಕ್ಷಣೆ ನೀಡುತ್ತವೆ, ಆದರೆ ಇದು ಹ್ಯಾಕರ್ಸ್‌ಗಳಿಗೆ ತಡೆಯಲ್ಲ. ಕನ್ನ ಹಾಕುವುದು ಸುಲಭವಾಗಿದ್ದು, ಹ್ಯಾಕರ್ಸ್‌ಗಳು ಅದನ್ನು ಬಲ್ಲವರಾಗಿದ್ದಾರೆ ಎಂದು ಹೇಳಿದ್ದಾರೆ.

ಹಿಂದೆಯು ಆಗಿತ್ತು;

ಹಿಂದೆಯು ಆಗಿತ್ತು;

ಟೆಕ್ಕಿಯೊಬ್ಬ ಜಿಯೋದಿಂದ ಕೋಟಿ ಕೋಟಿ ಆಧಾರ್ ಮಾಹಿತಿಯನ್ನು ಕದ್ದು ತನ್ನದೇ ವೆಬ್‌ಸೈಟಿನಲ್ಲಿ ಪ್ರಕಟ ಮಾಡಿದ್ದ ಎನ್ನಲಾಗಿದೆ. ಈ ಘಟನೆ ಮಾಸುವ ಮುನ್ನವೇ ಸತ್ಯ ಆಂಗ್ಲ ಪತ್ರಿಕೆ ದಿ ಟ್ರಿಬ್ಯೂನ್ ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ ಆಧಾರ್ ಮಾಹಿತಿಗಳು ಮಾರಾಟವಾಗುತ್ತಿದೆ ಎಂದು ವರದಿ ಮಾಡಿತ್ತು.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ವಾಟ್ಸ್‌ಆಪ್- ಪೇಟಿಎಂ:

ವಾಟ್ಸ್‌ಆಪ್- ಪೇಟಿಎಂ:

ವಾಟ್ಸ್‌ಆಪ್‌ನಲ್ಲಿ ಎಜೆಂಟ್‌ಗಳು ಪೇಟಿಎಂ ಮೂಲಕ 500 ರೂ. ಸ್ವೀಕರಿಸಿ ಕೋಟ-ಕೋಟಿ ಭಾರತೀಯರ ಆಧಾರ್‌ ಮಾಹಿತಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಅಲ್ಲದೇ 300 ರೂ. ಹೆಚ್ಚಾಗಿ ಪಾವತಿಸಿದರೆ ಆಧಾರ್‌ ಕಾರ್ಡ್‌ ಪ್ರಿಂಟ್‌ ಮಾಡಬಲ್ಲ ಸಾಫ್ಟ್‌ವೇರ್ ಸಹ ದೊರೆಯುತ್ತಿದೆ ಎಂದು ವರದಿಯಲ್ಲಿ ಮಾಹಿತಿ ನೀಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Edward Snowden Hints Aadhaar Database Can Be Misused. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot