Home
ಸುದ್ದಿಜಾಲ

Air taxi: ಇನ್ಮುಂದೆ ಭಾರತದಲ್ಲಿ ಹಾರುವ ಏರ್ ಟ್ಯಾಕ್ಸಿಗಳ ಆರ್ಭಟ! ಬೆಂಗಳೂರಲ್ಲೂ ಈ ಸೇವೆ ಲಭ್ಯ

ಭಾರತ ಈಗಾಗಲೇ ಹಲವಾರು ವಿಭಾಗಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ಅಭಿವೃದ್ಧಿ ರಾಷ್ಟ್ರಗಳನ್ನೂ ಸಹ ಹಿಂದಿಕ್ಕಿದೆ. ಈ ಕಾರಣಕ್ಕೆ ಇಂದು ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಆಗಿದ್ದು, ಈ ಬೆಳವಣಿಗೆ ನಡುವೆ ಮತ್ತೊಂದು ಕ್ರಾಂತಿಗೆ ಮುಂದಾಗಿರುವ ಭಾರತ ಏರ್ ಟ್ಯಾಕ್ಸಿ (Air taxi) ಸೇವೆ ನೀಡಲು ಸಜ್ಜಾಗಿದೆ.

ಹೌದು, ಒಂದು ಕಾಲದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್‌ (Airplane, helicopter) ಎಂದರೆ ಹಲವರಿಗೆ ದೂರದ ವಿಷಯವಾಗಿತ್ತು. ಆದರೆ, ಈಗ ಹೆಲಿಕಾಪ್ಟರ್, ವಿಮಾನಗಳು ಸಹ ಬಾಡಿಗೆಗೆ ದೊರೆಯುತ್ತವೆ. ಅಷ್ಟರ ಮಟ್ಟಿಗೆ ಭಾರತ ಬದಲಾವಣೆ ಆಗಿದೆ. ಈ ಬದಲಾವಣೆಯ ಭಾಗವಾಗಿಯೇ ಭಾರತದಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭ ಆಗಲಿದೆ. ಈ ಮೂಲಕ ಜನರು ಇನ್ಮುಂದೆ ಆಟೋ ಹಾಗೂ ಇತರೆ ಟ್ಯಾಕ್ಸಿ ಬದಲಾಗಿ ಏರ್ ಟ್ಯಾಕ್ಸಿ ಮೂಲಕ ಆಕಾಶ ಮಾರ್ಗವಾಗಿ ಸಂಚಾರ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಏರ್ ಟ್ಯಾಕ್ಸಿ?, ಎಂದಿನಿಂದ ಆರಂಭ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಭಾರತದಲ್ಲಿ ಹಾರುವ ಏರ್ ಟ್ಯಾಕ್ಸಿಗಳ ಆರ್ಭಟ! ಬೆಂಗಳೂರಲ್ಲೂ ಈ ಸೇವೆ ಲಭ್ಯ

ಭಾರತದಲ್ಲಿ ಏರ್ ಟ್ಯಾಕ್ಸಿ: ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಕಂಪನಿ ಹಾಗೂ ಅಮೆರಿಕದ ಆರ್ಚರ್ ಏವಿಯೇಷನ್ ​​ಭಾರತದ ಫ್ಲೈಯಿಂಗ್ ಕಾರ್ ಡ್ರೀಮ್ ಪ್ರಾಜೆಕ್ಟ್ (Flying Car Dream Project) ನನಸು ಮಾಡಲು ಕೈ ಜೋಡಿಸಿವೆ. ಈ ಕಾರ್ಯಕ್ಕಾಗಿ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದ್ದು, ಈ ಮೈತ್ರಿಕೂಟವು 2026 ರ ವೇಳೆಗೆ ಹಾರುವ ಕಾರುಗಳ ಸೇವೆ ನೀಡಲಿವೆ ಎನ್ನಲಾಗಿದೆ. ವಿಶೇಷ ಏನೆಂದರೆ ಈ ಟ್ಯಾಕ್ಸಿಗಳು ವಿಮಾನ ಮತ್ತು ಹೆಲಿಕಾಪ್ಟರ್‌ನ ಎರಡರ ಮಿಶ್ರಣದ ಶೈಲಿ ಪಡೆದುಕೊಳ್ಳಲಿವೆ.

ಈಗಾಗಲೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇಗ ತಲುಪಲು ನೀವು ಉಬರ್ ಅಥವಾ ಓಲಾದಲ್ಲಿ ಕಾರನ್ನು ಹೇಗೆ ಬುಕ್‌ ಮಾಡುತ್ತೀರೋ ಅದೇ ರೀತಿಯಲ್ಲಿ ಈ ಸೇವೆ ಲಭ್ಯ ಇರಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಕಂಪೆನಿಯು ಇದಕ್ಕೆ ಏರ್ ಟ್ಯಾಕ್ಸಿ ಎಂದು ಉಲ್ಲೇಖಿಸಿದೆ. ಪರಿಣಾಮ ಜನರು ಈ ಸೇವೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಇದು ವಿದ್ಯುತ್ ಚಾಲಿತ ಏರ್ ಟ್ಯಾಕ್ಸಿಯಾಗಿದ್ದು(Electric powered air taxi), ದೇಶದ ಪ್ರಮುಖ ನಗರಗಳ ಟ್ರಾಫಿಕ್ ಜಾಮ್ ಮತ್ತು ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ನೀಡಲಿದೆ.

ಇವುಗಳ ಹಾರಾಟ ಹೇಗೆ?: ಈ ಹಾರುವ ವಾಹನಗಳನ್ನು eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವಾಹನಗಳು ಎಂದು ಕರೆಯಲಾಗುತ್ತದೆ. ಇವು ಹೆಲಿಕಾಪ್ಟರ್‌ನಂತೆ ಲಂಬವಾಗಿ ಟೇಕಾಫ್ ಆಗುವುದಲ್ಲದೆ ಲಂಬವಾಗಿ ಲ್ಯಾಂಡ್ ಆಗಲಿವೆ. ಪರಿಣಾಮ ವಿಮಾನಗಳಂತಹ ರನ್‌ವೇಗಳ ಅಗತ್ಯವಿಲ್ಲದೆ ಸ್ವತಂತ್ರವಾಗಿ ಎಲ್ಲಾದರೂ ಸಹ ಲ್ಯಾಂಡ್‌ ಆಗಲಿವೆ. ಇದಕ್ಕಾಗಿ ಕೇವಲ ಒಂದು ತೆರೆದ ಸ್ಥಳ ಇದ್ದರೆ ಸಾಕು.

ಇನ್ಮುಂದೆ ಭಾರತದಲ್ಲಿ ಹಾರುವ ಏರ್ ಟ್ಯಾಕ್ಸಿಗಳ ಆರ್ಭಟ! ಬೆಂಗಳೂರಲ್ಲೂ ಈ ಸೇವೆ ಲಭ್ಯ

ಗಮನಿಸಬೇಕಾದ ವಿಷಯ ಏನೆಂದರೆ ಏರ್ ಟ್ಯಾಕ್ಸಿ ಒಂದು ಸಮಯದಲ್ಲಿ ನಾಲ್ಕು ಪ್ರಯಾಣಿಕರು ಮತ್ತು ಪೈಲಟ್ ಸೇರಿದಂತೆ ಐದು ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದ್ರೆ ಬರೋಬ್ಬರಿ 100 ಮೈಲಿವರೆಗೆ ಸಂಚಾರ ಮಾಡಬಹುದು. ಹಾಗೆಯೇ ಭಾರತದಲ್ಲಿ ಒಟ್ಟು 200 ಕ್ಕೂ ಹೆಚ್ಚು ಏರ್ ಟ್ಯಾಕ್ಸಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಎಲ್ಲೆಲ್ಲಿ ಈ ಸೇವೆ?: ಇನ್ನು ಮೊದಲ ಹಂತದಲ್ಲಿ ಈ ಏರ್ ಟ್ಯಾಕ್ಸಿ ಸೇವೆ ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಆರಂಭ ಆಗಲಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಭಾರತದ ಇತರ ಪ್ರಮುಖ ನಗರಗಳಲ್ಲಿ ಸೇವೆಯನ್ನು ಪ್ರಾರಂಭಿಸಲಾಗುತ್ತದಂತೆ. ಅಂದರೆ ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿನ್‌ನಂತಹ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಕಂಪನಿಯು ಯುಎಸ್‌ನಲ್ಲಿ ಇವಿಟಿಒಎಲ್ ವಿಮಾನಗಳ ಪರೀಕ್ಷೆಯನ್ನು ಪ್ರಾರಂಭಿಸಲು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಮಾಣೀಕರಣವನ್ನು ಪಡೆಯಲಾಗಿದೆ. ಇದು 2026 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಕಳೆದ ತಿಂಗಳು ಅಬುಧಾಬಿ ಇನ್ವೆಸ್ಟ್‌ಮೆಂಟ್ ಆಫೀಸ್‌ನೊಂದಿಗೂ ಸಹ ತಿಳುವಳಿಕೆ ಪತ್ರಕ್ಕೂ ಸಹಿ ಹಾಕಿದೆ.

ಇನ್ಮುಂದೆ ಭಾರತದಲ್ಲಿ ಹಾರುವ ಏರ್ ಟ್ಯಾಕ್ಸಿಗಳ ಆರ್ಭಟ! ಬೆಂಗಳೂರಲ್ಲೂ ಈ ಸೇವೆ ಲಭ್ಯ

ಇವುಗಳಿಂದ ಆಗುವ ಲಾಭ ಏನು?: ಈ ಟ್ಯಾಕ್ಸಿಗಳು ಆಕಾಶದಲ್ಲಿ ಹಾರಾಟ ಮಾಡುವುದರಿಂದ ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳಲ್ಲಿನ ಸಂಚಾರ ದಟ್ಟೆಣೆಯಿಂದ ತಲುಪಬೇಕಾದ ಸ್ಥಳಕ್ಕೆ ಹೋಗಲು ದೀರ್ಘ ಸಮಯ ಬೇಕು. ಅಂದರೆ ದೆಹಲಿಯ ನಿರ್ದಿಷ್ಟ ಪ್ರದೇಶವನ್ನು ರಸ್ತೆಯ ಮೂಲಕ ತಲುಪಲು 60 ನಿಮಿಷದಿಂದ 90 ನಿಮಿಷ ಬೇಕಾದರೆ ಈ ಟ್ಯಾಕ್ಸಿಗಳು ಅದೇ 17 ಮೈಲಿ ಪ್ರದೇಶವನ್ನು ತಲುಪಲು ಕೇವಲ 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Best Mobiles in India

English summary
Interglobe Enterprises Company and American Archer Aviation have joined hands to realize India's Flying Car Dream Project. Through this, Air Taxi service will be available in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+