Home
ಸುದ್ದಿಜಾಲ

Elista: ಎಲಿಸ್ಟಾ ಎಕ್ಸ್‌ಪ್ಲೋರ್‌ ಸರಣಿ ಸ್ಮಾರ್ಟ್‌ಟಿವಿಗಳು ಲಾಂಚ್‌! ವಿಶೇಷ ಫೀಚರ್ಸ್‌, ಬೆಲೆ ಎಷ್ಟು?

ಎಲ್ಇಡಿ ಟಿವಿ, ವಾಷಿಂಗ್ ಮೆಷಿನ್, ಕೂಲರ್, ಸ್ಪೀಕರ್, ಹೆಡ್‌ಫೋನ್, ಯುಪಿಎಸ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳಿಗೆ ಭಾರತದಲ್ಲಿ ಹೆಸರುವಾಸಿಯಾಗಿರುವ ಎಲಿಸ್ಟಾ ಅತ್ಯುತ್ತಮ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ. ಈ ನಡುವೆ ಎಲಿಸ್ಟಾ (Elista) ವಿವಿಧ ವೇರಿಯಂಟ್‌ನ ಸ್ಮಾರ್ಟ್‌ಟಿವಿಗಳನ್ನು (smart TV)ಅನಾವರಣ ಮಾಡಿದೆ.

ಹೌದು, ಟೆಕ್ನೋಡೋಮ್ ನ ಬ್ರ್ಯಾಂಡ್ ಆಗಿರುವ ಎಲಿಸ್ಟಾ (TeknoDome's brand Elista) ಭಾರತದಲ್ಲಿ ವೆಬ್‌ಓಎಸ್ ಟಿವಿಯಿಂದ ರನ್‌ ಆಗುವ ಎಲಿಸ್ಟಾ 75 ಇಂಚಿನ QLED 4K ಟಿವಿಯ ಇತ್ತೀಚಿನ ಲಾಂಚ್‌ ನಂತರ ಈಗ ತನ್ನ ಮೊದಲ ಸಾಲಿನ ಸ್ಮಾರ್ಟ್ ಎಲ್‌ಇಡಿ ಟಿವಿಗಳನ್ನು (LED TV) ಪರಿಚಯಿಸಿದೆ. ಈ ಸ್ಮಾರ್ಟ್‌ಟಿವಿಗಳು ಗೂಗಲ್‌ ಟಿವಿ ಮೂಲಕ ರನ್‌ ಆಗಲಿವೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಗಳ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಈ ಟಿವಿಗಳ ಬೆಲೆ ಎಷ್ಟು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಎಲಿಸ್ಟಾ ಎಕ್ಸ್‌ಪ್ಲೋರ್‌ ಸರಣಿ ಸ್ಮಾರ್ಟ್‌ಟಿವಿಗಳು ಲಾಂಚ್‌! ವಿಶೇಷ ಫೀಚರ್ಸ್‌

ಎಲಿಸ್ಟಾ ಸ್ಮಾರ್ಟ್‌ಟಿವಿ: ಎಲಿಸ್ಟಾ ಇದೀಗ ಎಕ್ಸ್‌ಪ್ಲೋರ್ ಸ್ಮಾರ್ಟ್ ಎಲ್‌ಇಡಿ ಟಿವಿ ಸರಣಿ ವಿಭಾಗದಲ್ಲಿ ವಿವಿಧ ಡಿಸ್‌ಪ್ಲೇ ಗಾತ್ರಗಳಲ್ಲಿ (32" HD, 43" FHD ಮತ್ತು 43″, 50", 55″ ಮತ್ತು 65″ 4K) ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಿದೆ. ಎಲಿಸ್ಟಾ ಜಿಟಿವಿ ಸರಣಿ ಸ್ಮಾರ್ಟ್‌ಟಿವಿಗಳು, ಗೂಗಲ್‌ ಟಿವಿಯಲ್ಲಿ ರನ್ ಆಗಲಿದ್ದು, ನೀವು ವೀಕ್ಷಣೆ ಮಾಡುವ ಕಂಟೆಂಟ್‌ ಆಧಾರದ ಮೇಲೆ ವೈಯಕ್ತೀಕರಿಸಿದ ಶಿಫಾರಸು ಆಯ್ಕೆಗಳನ್ನು ನೀಡುತ್ತವೆ.

ಇದರೊಂದಿಗೆ ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ನಿಮ್ಮ ವೀಕ್ಷಣೆ ಲಿಸ್ಟ್‌ ಅನ್ನು ನೀವು ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದ್ದು, ಇದರೊಂದಿಗೆ ಈ ಟಿವಿಗಳಲ್ಲಿ ಮಕ್ಕಳಿಗಾಗಿ ಕಿಡ್ಸ್‌ ಮೋಡ್‌ ಆಯ್ಕೆಯನ್ನೂ ಸಹ ನೀಡಲಾಗಿದೆ. ಪರಿಣಾಮ ಮಕ್ಕಳು ಸುರಕ್ಷಿತವಾಗಿ ಸ್ಮಾರ್ಟ್‌ಟಿವಿ ವೀಕ್ಷಣೆ ಮಾಡಬಹುದಾಗಿದೆ. ಇನ್ನು ಈ ವಿಭಾಗದಲ್ಲಿ ಎಲಿಸ್ಟಾ ಜಿಟಿವಿ-65UILD, HDR10 ಬೆಂಬಲದೊಂದಿಗೆ ದೊಡ್ಡ 65 UHD ಬೆಜೆಲ್-ಲೆಸ್ ಡಿಪ್ಲೇ ಹೊಂದಿದ್ದು, ವರ್ಧಿತ ಸ್ಟ್ರೀಮಿಂಗ್ ಅನುಭವಕ್ಕಾಗಿ ಡಾಲ್ಬಿ ಆಡಿಯೊವನ್ನು ಸೌಲಭ್ಯ ಪಡೆದಿದೆ.

ಎಲಿಸ್ಟಾ ಎಕ್ಸ್‌ಪ್ಲೋರ್‌ ಸರಣಿ ಸ್ಮಾರ್ಟ್‌ಟಿವಿಗಳು ಲಾಂಚ್‌! ವಿಶೇಷ ಫೀಚರ್ಸ್‌

ಜೊತೆಗೆ ಜಿಟಿವಿ-55UILD, ಜಿಟಿವಿ ಜಿಟಿವಿ 43FILD ಮತ್ತು ಜಿಟಿವಿ ಜಿಟಿವಿ 32HILD ಮಾದರಿಗಳು ಮಾತ್ರ ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಸಂಯೋಜಿತ ಸೌಂಡ್ ಬಾರ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಈ ಎಲಿಸ್ಟಾ ಎಕ್ಸ್‌ಪ್ಲೋರ್ ಸರಣಿಯ ಸ್ಮಾರ್ಟ್ ಎಲ್‌ಇಡಿ ಟಿವಿಗಳು ಬ್ಲೂಟೂತ್ ಆವೃತ್ತಿ 5.1, ಡ್ಯುಯಲ್ ಬ್ಯಾಂಡ್ ವೈ-ಫೈ , ಆಪಲ್‌ ಟಿವಿ ಮತ್ತು ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ಅನ್ನು ಬೆಂಬಲಿಸುತ್ತವೆ.

ಇಷ್ಟೇ ಅಲ್ಲದೆ 3x ಹೆಚ್‌ಡಿಎಮ್‌ಐ, 1x RF, 2x ಯುಎಸ್‌ಬಿ, ಮತ್ತು 1x AV In ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಬಹುಮುಖ ಪ್ಲೇಸ್‌ಮೆಂಟ್ ಆಯ್ಕೆಗಳನ್ನು ನೀಡಲಾಗಿದ್ದು, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಗೋಡೆಗೆ ತೂಗುಹಾಕಲು ಹಾಗೂ ಟೇಬಲ್-ಟಾಪ್ ಸ್ಟ್ಯಾಂಡ್‌ಗಳ ಮೇಲೆ ಬಳಕೆ ಮಾಡಲು ಅನುವು ಮಾಡಿಕೊಡಲಾಗಿದೆ.

ಎಲಿಸ್ಟಾ ಎಕ್ಸ್‌ಪ್ಲೋರ್‌ ಸರಣಿ ಸ್ಮಾರ್ಟ್‌ಟಿವಿಗಳು ಲಾಂಚ್‌! ವಿಶೇಷ ಫೀಚರ್ಸ್‌

ಎಲ್ಲರಿಗೂ ಟಿವಿ ವೀಕ್ಷಣೆಯ ಅನುಭವವನ್ನು ಮರು ವ್ಯಾಖ್ಯಾನಿಸುವ ನಮ್ಮ ಬದ್ಧತೆಗೆ ಬದ್ಧರಾಗಿ ಇಂಡಿಯಾದಲ್ಲಿ ನಮ್ಮ ಇತ್ತೀಚಿನ ಜಿಟಿವಿ ಸ್ಮಾರ್ಟ್ ಟಿವಿ ಲೈನ್-ಅಪ್ ಅನ್ನು ಅನಾವರಣಗೊಳಿಸಲು ಸಂತೋಷಪಡುತ್ತೇವೆ. ಇದು ಏಳು ಉನ್ನತ ಕಾರ್ಯಕ್ಷಮತೆಯ ಸ್ಮಾರ್ಟ್ ಟಿವಿಗಳನ್ನು ಒಳಗೊಂಡಿದೆ. ಗೂಗಲ್ ಧ್ವನಿ ಆಜ್ಞೆಗಳ ತಡೆರಹಿತ ಏಕೀಕರಣದೊಂದಿಗೆ ನವೀನ ಗೂಗಲ್‌ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ಕಂಟ್ರೋಲ್‌ ಮಾಡುತ್ತದೆ ಎಂದು ಎಲಿಸ್ಟಾದ ಸಿಇಒ ಪವನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಎಲಿಸ್ಟಾ ಎಕ್ಸ್‌ಪ್ಲೋರ್‌ ಸರಣಿ ಸ್ಮಾರ್ಟ್‌ಟಿವಿಗಳು ಲಾಂಚ್‌! ವಿಶೇಷ ಫೀಚರ್ಸ್‌

ಎಲಿಸ್ಟಾ ಸ್ಮಾರ್ಟ್‌ಟಿವಿ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಟಿವಿಗಳಲ್ಲಿ ಎಲಿಸ್ಟಾ ಎಲ್‌ಇಡಿ-ಜಿಟಿವಿ-32" HILD ಟಿವಿಗೆ 16,999ರೂ., ಎಲಿಸ್ಟಾ ಎಲ್‌ಇಡಿ-ಜಿಟಿವಿ 43" FILED ಗೆ 27,500 ರೂ., ಎಲಿಸ್ಟಾ ಎಲ್‌ಇಡಿ-ಜಿಟಿವಿ 43" UILD ಗೆ 31,500ರೂ., ಎಲಿಸ್ಟಾ ಎಲ್‌ಇಡಿ-ಜಿಟಿವಿ 50" UILED ಗೆ 39,990 ರೂ., ಎಲಿಸ್ಟಾ ಎಲ್‌ಇಡಿ-ಜಿಟಿವಿ-55" UILED 42,990ರೂ. ಹಾಗೂ ಎಲಿಸ್ಟಾ ಎಲ್‌ಇಡಿ-ಜಿಟಿವಿ-65" UILD ಗೆ 62,990 ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಟಿವಿಗಳನ್ನು ಎಲ್ಲಾ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
TeknoDome's brand Elista has now introduced its first line of smart LED TVs in India after the recent launch of the Elista 75 inch QLED 4K TV running on webOS TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+