Home
ಸುದ್ದಿಜಾಲ

ಟ್ವಿಟರ್‌ಗೆ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ: ಇನ್ಮುಂದೆ ಮಸ್ಕ್‌ ಕೆಲಸ ಏನು?

ಟ್ವಿಟ್ಟರ್‌ನಲ್ಲಿ ಈವರೆಗೂ ಸಿಇಒ ವಿಚಾರ ಸಂಬಂಧ ವಿವಿಧ ಚರ್ಚೆಗಳು ಭಾರೀ ಮುನ್ನೆಯಲ್ಲಿದ್ದವು. ಜೊತೆಗೆ ಮಾಲೀಕ ಮಸ್ಕ್‌ ಅವರು ಈ ಹುದ್ದೆ ಸಂಬಂಧ ವಿವಿಧ ಹೇಳಿಕೆ ನೀಡಿಕೊಂಡೇ ಬರುತ್ತಿದ್ದರು. ಆದರೆ, ಕೊನೆಗೂ ಹೊಸ ಸಿಇಒ ನೇಮಕ ಆಗಿದೆ ಎಂದು ತಿಳಿದುಬಂದಿದ್ದು, ಮುಂದಿನ ದಿನಗಳಲ್ಲಿ ಟ್ವಿಟ್ಟರ್‌ನಲ್ಲಿ ಏನೆಲ್ಲಾ ಬದಲಾಗಲಿದೆ ಎಂದು ಎದುರು ನೋಡಬೇಕಿದೆ.

ಹೌದು, ಹೊಸ ಟ್ವಿಟರ್ ಸಿಇಒ ಲಿಂಡಾ ಯಾಕರಿನೊ ಎಂದು ಎಲಾನ್‌ ಮಸ್ಕ್ ಅವರು ಖಚಿತಪಡಿಸಿದ್ದಾರೆ. ಜೊತೆಗೆ ಇವರು 6 ವಾರಗಳಲ್ಲಿ ತಮ್ಮ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾಕರಿನೊ ಅವರು ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ತಮ್ಮ ಕೆಲಸ ಕೇಂದ್ರೀಕರಿಸುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ಈ ಹೊಸ ಸಿಇಒ ಯಾರು?, ಹಾಗೂ ಅವರ ಹಿನ್ನೆಲೆ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟ್ವಿಟರ್‌ಗೆ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ: ಇನ್ಮುಂದೆ ಮಸ್ಕ್‌ ಕೆಲಸ ಏನು?

ಟ್ವಿಟರ್ ಗೆ ಹೊಸ ಸಾರಥಿ: ಕಳೆದ ವರ್ಷ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿದ್ದರು. ಅಂದಿನಿಂದ ಇಂದಿನವರೆಗೂ ಟ್ವಿಟ್ಟರ್‌ಗೆ ಸರಿಯಾದ ಸಾರಥಿ ಯಾರೂ ಇರಲಿಲ್ಲ. ಮಸ್ಕ್‌ ಅವರೇ ಸ್ವತಃ ವಿವಿಧ ರೀತಿಯ ಹಾಗೂ ಹಲವರಿಗೆ ಇಷ್ಟವಾಗದ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದರು. ಇದು ಬಳಕೆದಾರರು ಕೆಂಡಾಮಂಡಲ ಆಗಲು ಕಾರಣ ಆಗುತ್ತಿತ್ತು.

ಆದರೀಗ ಎಲಾನ್‌ ಮಸ್ಕ್ ಅವರು ಲಿಂಡಾ ಯಾಕರಿನೊ ಅವರು ಹೊಸ ಟ್ವಿಟ್ಟರ್ ಸಿಇಒ ಅವರನ್ನು ನೇಮಿಸಿದ್ದಾರೆ ಎನ್ನುವ ವಿಷಯ ಖಚಿತವಾಗಿದೆ. ಯಾಕರಿನೊ ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ವಿಷಯದಲ್ಲಿ ಕೆಲಸ ಮಾಡಲಿದ್ದು, ಮಸ್ಕ್ ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಹೆಚ್ಚು ಗಮನಹರಿಸುತ್ತಾನೆ ಎಂದು ತಿಳಿದುಬಂದಿದೆ. ಇನ್ನು ಶುಕ್ರವಾರ ಸಂಜೆ ಟ್ವೀಟ್ ಮೂಲಕ ಮಸ್ಕ್ ಹೊಸ ಟ್ವಿಟರ್ ಸಿಇಒ ಹೆಸರನ್ನು ಪ್ರಕಟಿಸಿದ್ದಾರೆ.

ಟ್ವಿಟರ್‌ಗೆ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ: ಇನ್ಮುಂದೆ ಮಸ್ಕ್‌ ಕೆಲಸ ಏನು?

ಲಿಂಡಾ ಯಾಕರಿನೊ ಅವರನ್ನು ಟ್ವಿಟರ್‌ನ ಹೊಸ ಸಿಇಒ ಆಗಿ ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಲಿಂಡಾ ಯಾಕರಿನೊ ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತಾರೆ. ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುತ್ತೇನೆ. ಈ ಪ್ಲಾಟ್‌ಫಾರ್ಮ್ ಅನ್ನು ಎಕ್ಸ್‌ ಆಗಿ ಪರಿವರ್ತಿಸಲು ಲಿಂಡಾ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್‌ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹಾಗೆಯೆ ನಾನು ಎಕ್ಸ್‌ /ಟ್ವಿಟ್ಟರ್‌ ಗಾಗಿ ಹೊಸ ಸಿಇಒ ಅವರನ್ನು ನೇಮಿಸಿಕೊಂಡಿದ್ದೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ. ನನ್ನ ಪಾತ್ರವು ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಟಿಒ ಆಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಷಯವನ್ನು ಗಮನಿಸಿದರೆ ಹೊಸ ಟ್ವಿಟರ್ ಸಿಇಒಗೆ ಮಸ್ಕ್ ಎಲ್ಲಾ ಅಧಿಕಾರವನ್ನು ನೀಡಲು ಸಿದ್ಧರಿಲ್ಲ ಎಂಬುದನ್ನು ಇದು ತೋರಿಸುತ್ತದೆ.

ಲಿಂಡಾ ಯಾಕರಿನೊ ಯಾರು?: ಲಿಂಡಾ ಯಾಕರಿನೊ ಅವರು ಮಾಧ್ಯಮ ಉದ್ಯಮದಲ್ಲಿ ತಮ್ಮದೇ ಆದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರು NBCUniversal ಟಿವಿಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಜೊತೆಗೆ ವಿವಿಧ ನಾಯಕತ್ವದ ಸ್ಥಾನಗಳನ್ನು ನಿರ್ವಹಣೆ ಮಾಡಿದ ಅನುಭವ ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ಈ ದೂರದರ್ಶನದ ಎಲ್ಲಾ ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿದ್ದರು.

ಟ್ವಿಟರ್‌ಗೆ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ: ಇನ್ಮುಂದೆ ಮಸ್ಕ್‌ ಕೆಲಸ ಏನು?

ಮೊದಲ ಮಹಿಳೆ: ಆರು ವಾರಗಳಲ್ಲಿ ಟ್ವಿಟ್ಟರ್‌ಗೆ ಸೇರ್ಪಡೆ ಆಗಲಿರುವ ಇವರು ಸಿಇಒ ಮತ್ತು ತಂತ್ರಜ್ಞಾನೇತರ ಹಿನ್ನೆಲೆಯಿಂದ ಬಂದ ಮೊದಲ ಮಹಿಳೆಯಾಗಿ ಗುರುತಿಸಿಕೊಳ್ಳಲಿದ್ದಾರೆ. ಯಾಕೆಂದರೆ ಈ ಹಿಂದೆ ಇದ್ದಂತಹ ಎಲ್ಲಾ ಮಾಜಿ-ಟ್ವಿಟರ್ ಸಿಇಒಗಳು ಸಹ ತಂತ್ರಜ್ಞಾನದ ಹಿನ್ನೆಲೆಯಿಂದ ಬಂದವರೇ ಆಗಿದ್ದರು. ಇನ್ನು ಕೊನೆಗೂ ಟ್ವಿಟ್ಟರ್‌ಗೆ ಹೊಸ ಸಾರಥಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ಹೊಸ ಬದಲಾವಣೆ ಆಗಲಿವೆ ಕಾದುನೋಡೋಣ.

Best Mobiles in India

English summary
Elon Musk has confirmed that the new Twitter CEO is Linda Yacarino who will be joining her job in 6 weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+