ಎಲಾನ್ ಮಸ್ಕ್‌ರ ಸ್ಪೇಸ್‌ಎಕ್ಸ್‌ಗೆ 14 ವರ್ಷದ ಹೊಸ ಸಾಫ್ಟ್‌ವೇರ್ ಇಂಜಿನಿಯರ್ ನೇಮಕ!
ವೇಗವಾಗಿ ಓಡುತ್ತಿರುವ ಜಗತ್ತಿನ ಜೊತೆಗೆ ಅಷ್ಟೇ ವೇಗವಾಗಿ ತಂತ್ರಜ್ಞಾನ ಸಹ ಅಭಿವೃದ್ಧಿಯಾಗುತ್ತಿವೆ. ಈ ನಡುವೆ ಕೇವಲ 14ರ ಹರೆಯದಲ್ಲೇ ಇಲ್ಲೋರ್ವ ಬಾಲಕ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ (SpaceX) ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುವ ಅವಕಾಶ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ಜ್ಞಾನಕ್ಕೆ ವಯಸ್ಸಿನ ಅಗತ್ಯ ಇಲ್ಲ ಎನ್ನುವುದಕ್ಕೆ ಈ ಬಾಲಕ ಸಾಕ್ಷಿಯಾಗಿದ್ದಾನೆ. ಅದರಲ್ಲೂ ಇಡೀ ಜಗತ್ತೇ ದಿಟ್ಟಿಸಿ ನೋಡುವ ಸ್ಪೇಸ್ ಎಕ್ಸ್ ನಲ್ಲಿ ಕೆಲಸ ಮಾಡುವುದು ಎಂದರೆ ಸುಲಭದ ಮಾತಲ್ಲ.ಆದರೆ,ಇಷ್ಟು ಸಣ್ಣ ವಯಸ್ಸಿಗೆ ಈ ಬಾಲಕ ಇಲ್ಲಿ ಕೆಲಸ ಪಡೆದುಕೊಂಡಿದ್ದಾನೆ ಅಂದ್ರೆ ನೀವು ನಂಬಲೇಬೇಕು.ಹಾಗಿದ್ರೆ,ಯಾರು ಈ ಚತುರ ಬಾಲಕ?,ಈತನಿಗೆ ಸ್ಪೇಸ್ ಎಕ್ಸ್ ನಲ್ಲಿ ಕೆಲಸ ಸಿಕ್ಕರೂ ಲಿಂಕ್ಡ್‌ಇನ್ ನಲ್ಲಿ ಅನರ್ಹರಾಗಿದ್ದು ಹೇಗೆ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಈ ಲೇಖನ ಓದಿರಿ.

ಕೈರನ್ ಕ್ವಾಜಿ: ಈ ಬಾಲಕನ ಹೆಸರು ಕೈರನ್ ಕ್ವಾಜಿ(Kairan Quazi ). ಈತ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಇನ್ನು ಕೈರನ್ ಕ್ವಾಜಿ 9 ನೇ ವಯಸ್ಸಿಗೆ ಫುಲ್‌ಟೈಮ್ ಗಣಿತ ಎಎಸ್ ಪದವಿ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದು, 14 ನೇ ವಯಸ್ಸಿನಲ್ಲಿ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಈ ಪದವಿಯೊಂದಿಗೆ ಎಲಾನ್ ಮಸ್ಕ್ ನೇತೃತ್ವದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಕಂಪನಿಯಾದ ಸ್ಪೇಸ್‌ಎಕ್ಸ್‌ನಲ್ಲಿ ಉದ್ಯೋಗವನ್ನೂ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ.
ಇನ್ನು ಈ ಕೈರನ್ ಕ್ವಾಜಿ ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಸ್ಪೇಸ್‌ಎಕ್ಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಕ್ಕಾಗಿ ಪೋಸ್ಟ್ ಮಾಡಿದ್ದಾರೆ.ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು,ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.ಹಾಗೆಯೇ ನಾನು ಸ್ಪೇಸ್‌ಎಕ್ಸ್‌ನಲ್ಲಿ ಸ್ಟಾರ್‌ಲಿಂಕ್ ಎಂಜಿನಿಯರಿಂಗ್ ತಂಡದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ.ನನ್ನ ವಯಸ್ಸಿನ ಬಗ್ಗೆ ಕಾಳಜಿ ವಹಿಸದ ಅಪರೂಪದ ಕಂಪನಿಗಳಲ್ಲಿ ಇದು ಒಂದಾಗಿದೆ ಎಂದು ಎಲೋನ್ ಮಸ್ಕ್ ಮತ್ತು ಸ್ಪೇಸ್‌ಎಕ್ಸ್ ಅನ್ನು ಕೊಂಡಾಡಿದ್ದಾರೆ.
ಈ ನಡುವೆ ಶಾಕಿಂಗ್ ಆಗುವ ವಿಷಯ ಏನೆಂದರೆ ಇದ್ದಕ್ಕಿದ್ದಂತೆ ಕೈರನ್ ಕ್ವಾಜಿ ಅವರ ಲಿಂಕ್ಡ್‌ಇನ್ ಖಾತೆಯನ್ನು ನಿರ್ಬಂಧಿಸಲಾಗಿದೆ. ಎಲ್ಲರಿಂದ ಮೆಚ್ಚುಗೆಯ ಸುರಿಮಳೆಯ ಪ್ರತಿಕ್ರಿಯೆ ಪಡೆಯುತ್ತಿದ್ದ ಇವರಿಗೆ ಲಿಂಕ್ಡ್‌ಇನ್ ಖಾತೆ ನಿರ್ಬಂಧ ಆದೊಡನೆ ಒಂದು ಕ್ಷಣ ಗಾಭರಿಕೊಂಡಿದ್ದಾರೆ. ಆದರೆ, ನಂತರ ಅವರು ಲಿಂಕ್ಡ್‌ಇನ್‌ನಲ್ಲಿ ಏನಾಗಿದೆ, ಯಾಕೆ ಖಾತೆ ನಿರ್ಬಂಧ ಆಗಿದೆ ಎಂದು ಕಂಡುಕೊಂಡು ಅದರ ವಿರುದ್ಧ ತಮ್ಮದೇ ಆದರ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಎಲೋನ್ ಮಸ್ಕ್ ಈ ಚಿಕ್ಕ ವಯಸ್ಸಿನ ಉದ್ಯೋಗಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಲಿಂಕ್ಡ್‌ಇನ್ ಮಾತ್ರ ಇವರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಂಡಿದ್ದು, ಕೈರನ್ ಕ್ವಾಜಿಗೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಉದ್ಯೋಗವನ್ನು ಹುಡುಕುವಷ್ಟು ವಯಸ್ಸಾಗಿಲ್ಲ, ಅವರು ಇನ್ನೂ ಚಿಕ್ಕವರು. ಹಾಗಾಗಿ ಅವರ ಲಿಂಕ್ಡ್‌ಇನ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಕ್ವಾಜಿಗೆ ಇದ್ದ ಗೊಂದಲ ಕಡಿಮೆ ಆಗಿದೆ.
ಇನ್ನು ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್‌ನಲ್ಲಿ ಉದ್ಯೋಗವನ್ನು ಹುಡುಕಲು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂಬ ಮಾಹಿತಿ ಬಗ್ಗೆ ಅರಿತುಕೊಂಡ ಅವರು ಇದಾದ ಬಳಿಕ ತನ್ನ ಇನ್‌ಸ್ಟಾಗ್ರಾಮ್ ಗೆ ಬಂದು ಲಿಂಕ್ಡ್‌ಇನ್ ತೆಗೆದುಕೊಂಡ ಕ್ರಮ ಖಂಡಿತಾ ಅನ್ಯಾಯ,ಅಸಂಬದ್ಧ ಎಂದು ಹರಿಹಾಯ್ದಿದ್ದಾರೆ.ಅಪೇಕ್ಷಿತ ಇಂಜಿನಿಯರಿಂಗ್ ಉದ್ಯೋಗಗಳಲ್ಲಿ ಒಂದನ್ನು ಪಡೆಯಲು ನಾನು ಅರ್ಹನಾಗಿದ್ದೇನೆ. ಆದರೆ, ಲಿಂಕ್ಡ್‌ಇನ್ ಸೈಟ್ ಅನ್ನು ಪ್ರವೇಶಿಸಲು ಅರ್ಹತೆ ಹೊಂದಿಲ್ಲವೇ? ಇದು ಲಿಂಕ್ಡ್‌ಇನ್‌ನ ನೀತಿಗಳು ಎಷ್ಟು ಹಿಂದುಳಿದಿವೆ ಎಂಬುದನ್ನು ಪ್ರತಿಯೊಬ್ಬರಿಗೂ ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಈ ಕೋಪವನ್ನು ಕಡಿಮೆ ಮಾಡಿಕೊಳ್ಳದ ಈ ಸಣ್ಣ ವಯಸ್ಸಿನ ಉದ್ಯೋಗಿ, ಲಿಂಕ್ಡ್‌ಇನ್ ಬಳಕೆದಾರರೇ, ನಿಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ನನಗಾಗಿ ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಬಹುದೇ? ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಲಿಂಕ್ಡ್‌ಇನ್‌ನಲ್ಲಿನ ತನ್ನ ಅನುಯಾಯಿಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನುಸರಿಸಲು ಕೇಳಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಸಂಸ್ಥೆಯಲ್ಲಿ ಕೆಲಸ ಪಡೆದರೂ ಸಹ ಕೆಲಸ ಹುಡುಕುವ ಪ್ಲಾಟ್‌ಫಾರ್ಮ್‌ನಲ್ಲಿ ಇವರು ಅನರ್ಹರಾಗಿದ್ದಾರೆ.


Click it and Unblock the Notifications








