ಎಕ್ಸ್‌ನಲ್ಲಿ ಎರಡು ಹೊಸ ಚಂದಾದಾರಿಕೆ ಪ್ಲ್ಯಾನ್ ಪ್ರಾರಂಭ: ಬೆಲೆ 244ರೂ.ಗಳಿಂದ ಆರಂಭ
ಎಲಾನ್ ಮಸ್ಕ್ ಅವರು ಎಕ್ಸ್‌ನಲ್ಲಿ(X) ನಿರಂತರವಾಗಿ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಈ ನಡುವೆ ಹೊಸದೊಂದು ನ್ಯೂಸ್ ನೀಡಿದ್ದಾರೆ. ಅಂದರೆ ಹೊಸ ಅಗ್ಗದ ಚಂದಾದಾರಿಕೆಯನ್ನು ಆರಂಭಿಸಲಾಗಿದೆ. ಈ ಮೂಲಕ ನೀವು ಜಾಹೀರಾತು ಮುಕ್ತ ಸೇವೆ ಪಡೆಯಲು ಹಣ ಪಾವತಿ ಮಾಡಬೇಕಿದೆ.
ಹೌದು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಎಕ್ಸ್‌ನಲ್ಲಿ ಎರಡು ಹೊಸ ಪ್ಲ್ಯಾನ್ ಪರಿಚಯಿಸಲಾಗಿದೆ. ಈ ಪ್ಲ್ಯಾನ್‌ಗಳು ಅತ್ಯಂತ ಕಡಿಮೆ ಬೆಲೆಯ ಪ್ಲ್ಯಾನ್‌ಗಳಾಗಿವೆ ಎಂದು ಎಕ್ಸ್ ಹೇಳಿಕೊಂಡಿದೆ. ಇದರೊಂದಿಗೆ ಸಂಪೂರ್ಣ ಜಾಹೀರಾತು ಮುಕ್ತ ಅನುಭವವನ್ನು ಪಡೆದುಕೊಳ್ಳಲು ಬಳಕೆದಾರರು ಹೊಸ ಬೇಸಿಕ್ ಹಾಗೂ ಪ್ರೀಮಿಯಂ + ಪ್ಲ್ಯಾನ್(Premium + Plan) ಅನ್ನು ಸಹ ಆಯ್ಕೆ ಮಾಡಬಹುದಾಗಿದೆ. ಹಾಗಿದ್ರೆ, ಈ ಪ್ಲ್ಯಾನ್‌ಗಳ ಬೆಲೆ ಹಾಗೂ ಸೌಲಭ್ಯಗಳೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಎಲಾನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಎಕ್ಸ್‌ನಲ್ಲಿ ಕಳೆದ ಹಲವು ದಿನಗಳಿಂದ ಹೊಸ ಪ್ಲ್ಯಾನ್ ತರಬಹುದು ಎಂಬ ವರದಿಗಳಿದ್ದವು. ಕೊನೆಗೂ ಈ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಲಾಗಿದ್ದು, ಜಾಹೀರಾತು ಇಲ್ಲದ ಸೇವೆಯನ್ನು ಅನುಭವಿಸಬಹುದಾಗಿದೆ. ಅಂದರೆ ಕಂಪನಿಯು ನಿಮಗೆ ಮೂಲ ಯೋಜನೆಯನ್ನು 243ರೂ.ಗಳ ಮಾಸಿಕ ಶುಲ್ಕದಲ್ಲಿ ನೀಡಲಿದ್ದು, ಇದು ವೆಬ್ ಆವೃತ್ತಿಗೆ ಸೀಮಿತವಾಗಿದೆ. ಇದರಲ್ಲಿ ಬಳಕೆದಾರರು ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಈ ಯೋಜನೆಯು ಪೋಸ್ಟ್ ಎಡಿಟಿಂಗ್, ಪೋಸ್ಟ್ ರದ್ದುಗೊಳಿಸುವಿಕೆ ಮತ್ತು ಇತರ ಫೀಚರ್ಸ್ ಅನ್ನು ಹೊಂದಿರಲಿದೆ.
ಈ ನಡುವೆ ಈಗಾಗಲೇ ಅಸ್ತಿತ್ವದಲ್ಲಿ ಇರುವ 650ರೂ.ಗಳ ಮಾಸಿಕ ಶುಲ್ಕದಲ್ಲಿ ವಿಶೇಷ ಫೀಚರ್ಸ್‌ಗಳನ್ನು ಸಹ ಅನುಭವಿಸಬಹುದಾಗಿದೆ. ಇದರಲ್ಲಿ ನೀವು ಎಲ್ಲಾ ಪ್ರೀಮಿಯಂ ಫೀಚರ್ಸ್ ಪಡೆಬಹುದಾಗಿದ್ದು, ಅದಾಗ್ಯೂ ಈ ಯೋಜನೆಯಲ್ಲಿ ನೀವು ಕೆಲವು ಜಾಹೀರಾತುಗಳನ್ನು ಮಾತ್ರ ನೋಡುತ್ತೀರಿ. ಆದರೆ, ಇವು ಮೂಲ ಪ್ಲ್ಯಾನ್‌ಗಿಂತ ಕಡಿಮೆಯಿರುತ್ತವೆ.

ಈ ನಡುವೆ ಹೊಸದಾಗಿ ಎರಡನೇ ಪ್ಲ್ಯಾನ್ ಆಗಿ ಪ್ರಾರಂಭ ಆಗಿರುವ ಪ್ರೀಮಿಯಂ ಪ್ಲಸ್ ಪ್ಲ್ಯಾನ್‌ನಲ್ಲಿ ಸಾಕಷ್ಟು ಸೌಲಭ್ಯ ಪಡೆಯಬಹುದಾಗಿದೆ. ಅಂದರೆ ಇನ್ನು ನಿಮಗೆ ಒಂದೇ ಒಂದು ಜಾಹೀರಾತು ಸಹ ಕಾಣಿಸಿಕೊಳ್ಳಬಾರದು ಎಂದರೆ ಈ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು 1300 ರೂ.ಗಳ ಮಾಸಿಕ ಶುಲ್ಕ ಪಾವತಿ ಮಾಡಬೇಕಿದೆ. ಇದನ್ನು ಕಂಪನಿಯು ಪ್ರೀಮಿಯಂ + ಎಂದು ಹೆಸರಿಸಿದೆ. ಇತರ ಪ್ರೀಮಿಯಂ ಪ್ಲ್ಯಾನ್‌ಗಳು ಅಥವಾ ಪರಿಶೀಲಿಸದ ಬಳಕೆದಾರರಿಗೆ ಹೋಲಿಸಿದರೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹೊಸ ಪ್ರೀಮಿಯಂ ಪ್ಲಸ್ ಮತ್ತು ಬೇಸಿಕ್ ಪ್ಲ್ಯಾನ್ ವೆಬ್ ಆವೃತ್ತಿಗೆ ಮಾತ್ರ ಲಭ್ಯ ಇದೆ.
ಇನ್ನು ಎಲಾನ್ ಮಸ್ಕ್ ಅವರು ಈ ಹಿಂದೆ ಟ್ವಿಟ್ಟರ್ (Twitter) ಎಂದು ಕರೆಯಲಾಗುತ್ತಿದ್ದ ಎಕ್ಸ್ ಅನ್ನು $44 ಬಿಲಿಯನ್‌ಗೆ ಖರೀದಿ ಮಾಡಿದ್ದರು. ಇದಾದ ನಂತರದಲ್ಲಿ ತೀವ್ರತರವಾದ ಬದಲಾವಣೆಗಳನ್ನು ಮಾಡುವ ಮೂಲಕ ನಿತ್ಯವೂ ಸುದ್ದಿಯಲ್ಲಿದ್ದಾರೆ. ಅಂದರೆ ಇವರು ಅಧಿಕಾರ ಪಡೆದ ನಂತರ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದರು, ಉಚಿತವಾಗಿ ಲಭ್ಯವಾಗುತ್ತಿದ್ದ ಎಕ್ಸ್ ಅನ್ನು ಈಗ ಹಣ ಕೊಟ್ಟು ಸೇವೆ ಪಡೆಯುವಂತೆ ಮಾಡಿದ್ದಾರೆ. ಇದರಿಂದ ಲಾಭ ಪಡೆದುಕೊಳ್ಳಲು ಸದಾ ಒಂದಿಲ್ಲೊಂದು ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ.

ಈ ನಡುವೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಆಡಿಯೋ ವಿಡಿಯೋ ಕರೆ ಫೀಚರ್ಸ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಅಂದರೆ ನೀವು ಈಗಾಗಲೇ ಬಳಕೆ ಮಾಡುತ್ತಿರುವ ವಾಟ್ಸಾಪ್ ನಂತೆಯೇ ನೀವು ಈ ಪ್ಲಾಟ್‌ಫಾರ್ಮ್‌ನಲ್ಲಿ ಕರೆ ಮಾಡಬಹುದಾಗಿದೆ. ಆದಾಗ್ಯೂ, ಅನೇಕ ಜನರು ಈ ಫೀಚರ್ಸ್ ಅನ್ನು ಇಷ್ಟಪಡುವುದಿಲ್ಲ. ವಾಸ್ತವವಾಗಿ, ಎಕ್ಸ್ ನ ಸ್ವರೂಪವು ವಾಟ್ಸಾಪ್ ಗಿಂತ ಭಿನ್ನವಾಗಿದೆ.


Click it and Unblock the Notifications








