Home
ಸುದ್ದಿಜಾಲ

ನಿಮ್ಮ ಮನೆಯಲ್ಲಿ ಸ್ಮಾರ್ಟ್‌ಟಿವಿ ಇದೆಯೇ; ಮಸ್ಕ್‌ ನೀಡಿದ್ರು ಗುಡ್‌ನ್ಯೂಸ್‌!

ಎಲಾನ್‌ ಮಸ್ಕ್‌ ಅವರು ಒಂದಲ್ಲಾ ಒಂದು ವಿಷಯದಲ್ಲಿ ಯಾವಾಗಲೂ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ಈ ನಡುವೆ ಮತ್ತೊಂದು ಹೊಸ ಸುದ್ದಿ ನೀಡಿರುವ ಅವರು ಯೂಟ್ಯೂಬ್‌ಗೆ ನಡುಕ ಹುಟ್ಟುವಂತೆ ಮಾಡಿದ್ದಾರೆ. ಈ ಮೂಲಕ ತಮ್ಮದೇ ಆದ ವಿಡಿಯೋ ಆಪ್ ಅನ್ನು ಪರಿಚಯಿಸಲಿದ್ದಾರೆ.

ಹೌದು, ಮಸ್ಕ್‌ ಅವರು ಟ್ವಿಟ್ಟರ್‌ ಅನ್ನು ಖರೀದಿ ಮಾಡಿದಾಗಿನಿಂದ ಒಂದಲ್ಲಾ ಒಂದು ಬೆಳವಣಿಗೆ ಜರುಗುತ್ತಲೇ ಇವೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರವೂ ಹೌದು. ಅದರಂತೆ ಈಗ ಸ್ಮಾರ್ಟ್‌ಟಿವಿ ಬಳಕೆ ಮಾಡುವವರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಈ ಮೂಲಕ ತಮ್ಮದೇ ಆದ ಟ್ವಿಟ್ಟರ್‌ ಆಪ್‌ ಅನ್ನು ಪರಿಚಯಿಸಲು ಮುಂದಾಗಿದ್ದಾರೆ. ಹಾಗಿದ್ರೆ, ಏನಿದು ಟ್ವಿಟ್ಟರ್‌ ಆಪ್‌, ಮಸ್ಕ್‌ ಯಾಕೆ ಈ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ನಿಮ್ಮ ಮನೆಯಲ್ಲಿ ಸ್ಮಾರ್ಟ್‌ಟಿವಿ ಇದೆಯೇ; ಮಸ್ಕ್‌ ನೀಡಿದ್ರು ಗುಡ್‌ನ್ಯೂಸ್‌!

ಹೊಸ ನಿರ್ಧಾರ ಮಾಡಿದ ಮಸ್ಕ್‌: ಟ್ವಿಟ್ಟರ್‌ ಬಳೆದಾರರೊಬ್ಬರು ಸ್ಮಾರ್ಟ್ ಟಿವಿಗಾಗಿ ಟ್ವಿಟ್ಟರ್‌ ವಿಡಿಯೋ ಅಪ್ಲಿಕೇಶನ್ ಅಗತ್ಯವಿದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಾನು ಒಂದು ಗಂಟೆಯವರೆಗೆ ವಿಡಿಯೋವನ್ನು ನೋಡಲು ಸಾಧ್ಯವಿಲ್ಲ ಎಂದೂ ಸಹ ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಸ್ಕ್‌ ಇದು ಬರುತ್ತಿದೆ ಎಂದು ಸಣ್ಣದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಯೂಟ್ಯೂಬ್‌ಗೆ ಸವಾಲು ಎಸೆದಿದ್ದಾರೆ.

ಅದರಂತೆ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಹೊಸ ಪ್ರೋಗ್ರಾಂ ಅನ್ನು ಕಾರ್ಯಗತಗೊಳಿಸಲಿದ್ದು, ಅದು ಕ್ರಿಯೇಟರ್ಸ್‌ಗೆ ಹಣವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಮಸ್ಕ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಅಂದರೆ ಟ್ವಿಟ್ಟರ್‌ನಲ್ಲಿ ಕ್ರಿಯೇಟರ್ಸ್‌ ಪೋಸ್ಟ್ ಮಾಡಿದ ಟ್ವೀಟ್‌ಗಳಿಂದ ಬರುವ ಆದಾಯವನ್ನು ಅವರಿಗೆ ನೀಡಲು ಕಂಪನಿ ನಿರ್ಧರಿಸಿದೆ. ಇದಕ್ಕಾಗಿ 5 ಮಿಲಿಯನ್ ಡಾಲರ್ ವಿನಿಯೋಗಿಸಲಾಗಿದೆ ಎಂದು ಎಲಾನ್ ಮಸ್ಕ್‌ ತಿಳಿಸಿದ್ದಾರೆ.

ಜೊತೆಗೆ ಇದಕ್ಕಾಗಿ ನೀವು ಕ್ರಿಯೇಟರ್ಸ್‌ಗಳನ್ನ ಪರಿಶೀಲಿಸಲಾಗುತ್ತದೆ. ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ಜಾಹೀರಾತುಗಳನ್ನು ನೀಡಲಾಗುವುದು ಎಂದು ಮಸ್ಕ ಸ್ಪಷ್ಟನೆ ನೀಡಿದ್ದಾರೆ.
ಅದೇ ರೀತಿ, ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಪರಿಶೀಲಿಸಿದ ಸ್ಟೇಟಸ್‌ ಅನ್ನು ನೀಡಲು ಬ್ಲೂ ಚಂದಾದಾರಿಕೆಯನ್ನು ಘೋಷಿಸಲಾಗಿದೆ. ಪಾವತಿಸುವವರಿಗೆ ಇದು ಪರಿಶೀಲಿಸಿದ ಸ್ಟೇಟಸ್‌ ಆಗಿದ್ದು, ಇದರ ಜೊತೆಗೆ ಈ ಟ್ವಿಟರ್ ಹೊಸ ಹೊಸ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲಿದೆ ಎಂದಿದ್ದಾರೆ.

ಸ್ಮಾರ್ಟ್ ಟಿವಿಗಳಿಗಾಗಿ ಹೊಸ ವಿಡಿಯೋ ಆಪ್‌ಅನ್ನು ಪರಿಚಯಿಸುವ ಬಗ್ಗೆ ಟ್ವಿಟ್ಟರ್‌ ಹೆಚ್ಚು ಉತ್ಸಾಹಭರಿತವಾಗಿದ್ದು, ವಿಡಿಯೋ ಕಂಟೆಂಟ್‌ ಮೇಲೆ ಹೆಚ್ಚುತ್ತಿರುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಟ್ವಿಟರ್ ತನ್ನ ಸ್ವಂತ ಲೈವ್-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್, ಪೆರಿಸ್ಕೋಪ್‌ನ ಪರಿಚಯವನ್ನು ಒಳಗೊಂಡಿರುವ ವಿಡಿಯೋಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದು, ಈ ಮೂಲಕ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಮತ್ತು ವಿತರಿಸುವ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇನ್ನು ಮಸ್ಕ್ ಅವರು ಟ್ವಿಟರ್‌ನಲ್ಲಿ ದೀರ್ಘ ವೀಡಿಯೊಗಳನ್ನು ಪೋಸ್ಟ್ ಮಾಡುವ ಆಯ್ಕೆಯನ್ನು ಸಹ ನೀಡಿದ್ದಾರೆ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ 2 ಗಂಟೆಗಳವರೆಗೆ ಹೆಚ್‌ಡಿ ವಿಡಿಯೋ ಕಂಟೆಂಟ್‌ ಅನ್ನು ಅಪ್‌ಲೋಡ್ ಮಾಡಬಹುದು. ಅದರಂತೆ ಕೆಲವು ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಚಲನಚಿತ್ರಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದ್ದಾರೆ. ಓರ್ವ ಬಳಕೆದಾರರಂತೂ ಜಾನ್ ವಿಕ್ 4 ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಮ್ಮ ಮನೆಯಲ್ಲಿ ಸ್ಮಾರ್ಟ್‌ಟಿವಿ ಇದೆಯೇ; ಮಸ್ಕ್‌ ನೀಡಿದ್ರು ಗುಡ್‌ನ್ಯೂಸ್‌!

ದೀರ್ಘಾವಧಿಯ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ನೀಡಿದ ನಂತರ, ನ್ಯಾಷನಲ್ ಮ್ಯೂಸಿಕ್ ಪಬ್ಲಿಕ್ ಅಸೋಸಿಯೇಷನ್ ​​ಟ್ವಿಟರ್ ವಿರುದ್ಧ ಮೊಕದ್ದಮೆ ಹೂಡಿದ್ದು, ಮತ್ತು ಪ್ರತಿ ಹಾಡಿಗೆ 1 ಕೋಟಿ ರೂ.ಗಿಂತ ಹೆಚ್ಚಿನ ಹಾನಿಯನ್ನು ನೀಡುವಂತೆ ಒತ್ತಾಯಿಸಿದೆ. ಈ ಮೂಲಕ ಟ್ವಿಟ್ಟರ್‌ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದೆ.

Best Mobiles in India

English summary
Ever since Musk bought Twitter, things have continued to grow. In the meantime, they are going to introduce Twitter video on smart TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+