Home
ಸುದ್ದಿಜಾಲ

ಮಾಂತ್ರಿಕ 'ಮಸ್ಕ್': ಬಾಹ್ಯಾಕಾಶದಲ್ಲಿ ಅದ್ಭುತ.. ರಾಜಕೀಯದಲ್ಲಿ ಸೂಪರ್‌ಸ್ಟಾರ್.. ಜಗತ್ತು ಕೇಳುತ್ತಿದೆ 'ಮಸ್ಕ್ ಯಾರು'?

Elon Musk's Space Triumph: ಎಲಾನ್ ಮಸ್ಕ್ ಯಾರಿಗೆ ಗೊತ್ತಿಲ್ಲ ಹೇಳಿ. ಎಲಾನ್ ಮಸ್ಕ್ ಎಕ್ಸ್‌ನ ಮುಖ್ಯಸ್ಥ. ಸ್ಪೇಸ್‌ಎಕ್ಸ್ (SpaceX) ಮುಖ್ಯಸ್ಥ.. ಟೆಸ್ಲಾದ ಸಂಪೂರ್ಣ ಮಾಲೀಕ ಮತ್ತು ಸ್ಟಾರ್‌ಲಿಂಕ್‌ನ ಮುಖ್ಯಸ್ಥರೂ ಹೌದು. ನಿನ್ನೆಯವರೆಗೂ ಇದೆಲ್ಲವೂ. ಪ್ರಸ್ತುತ, ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನ ಯಶಸ್ಸಿನೊಂದಿಗೆ ಎಲಾನ್ ಮಸ್ಕ್ (Elon Musk) ಅವರು ನಾಸಾವನ್ನು (NASA) ಮೀರಿದ ಖ್ಯಾತಿಯನ್ನು ಗಳಿಸಿದ್ದಾರೆ. ಹೌದು, ಎಲಾನ್ ಮಸ್ಕ್ ಅವರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತಂದಿದ್ದಾರೆ. ಇದರೊಂದಿಗೆ, ಇಡೀ ಜಗತ್ತು ಮತ್ತೊಮ್ಮೆ 'ಎಲಾನ್ ಮಸ್ಕ್' ಯಾರು? ಎಂದು ಕೇಳುತ್ತಿದೆ.

ಹೌದು, ಎಲಾನ್ ಮಸ್ಕ್ ಸಾಮಾನ್ಯ ವ್ಯಕ್ತಿಯಲ್ಲ. ಎಲಾನ್ ಮಸ್ಕ್ ಅವರು ಬಾಹ್ಯಾಕಾಶದಲ್ಲಿ ಅದ್ಭುತಗಳನ್ನು ಮಾಡಿದರು. ಅವರು ತಂತ್ರಜ್ಞಾನದೊಂದಿಗೆ ಆಟವಾಡಿದರು. ಅಸಾಧ್ಯವೆನಿಸಿದುದನ್ನು ಮಸ್ಕ್ ಸಾಧ್ಯವಾಗಿಸಿದರು. ಟ್ರಂಪ್ ಅವರ ಗೆಲುವಿನೊಂದಿಗೆ, ಅವರು ಅಮೆರಿಕದ ರಾಜಕೀಯದಲ್ಲಿ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದರು. ಇದೀಗ, ಮಸ್ಕ್ ಅವರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ತಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Elon Musk: ಬಾಹ್ಯಾಕಾಶದಲ್ಲಿ ಅದ್ಭುತ, ರಾಜಕೀಯದಲ್ಲಿ ಶೈನ್.. ಯಾರು ಈ ಮಸ್ಕ್?

ಜೂನ್ 2024 ರಲ್ಲಿ ಗಗನಯಾತ್ರಿಗಳು ಮಿಷನ್ ಕ್ರೂ 9 ಯೋಜನೆಯ ಭಾಗವಾಗಿ ಬೋಯಿಂಗ್ ಸ್ಟಾರ್‌ಲೈನರ್ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಹೋದರು. ನಾಸಾ ಪ್ರಕಾರ, ಇವರ ಬಾಹ್ಯಾಕಾಶ ಪ್ರಯಾಣವು ಒಂದು ವಾರ ಇರುತ್ತದೆ. ಆದರೆ, ಇವರು ಪ್ರಯಾಣಿಸುತ್ತಿದ್ದ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ತಾಂತ್ರಿಕ ಸಮಸ್ಯೆ ಉದ್ಭವಿಸಿತು. ಇದರೊಂದಿಗೆ, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಭೂಮಿಗೆ ಮರಳಿದರು. ಆದರೆ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಸಿಕ್ಕಿಹಾಕಿಕೊಂಡರು. ಇವರನ್ನು ಭೂಮಿಗೆ ಕರೆತರಲು ನಾಸಾ ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ, ಅದು ಯಶಸ್ವಿಯಾಗಲಿಲ್ಲ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರೋಬ್ಬರಿ 9 ತಿಂಗಳು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡರು. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ (Donald Trump), ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನೀತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಕರೆತರಲು ಎಲಾನ್ ಮಸ್ಕ್ ಸಹಾಯ ಕೇಳಿದ್ದರು. ಅದರಂತೆ, ಎಲಾನ್ ಮಸ್ಕ್ ಮಧ್ಯಪ್ರವೇಶಿಸಿ ಸ್ಪೇಸ್‌ಎಕ್ಸ್ ಕಾರ್ಯಾಚರಣೆಯೊಂದಿಗೆ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತಂದಿದ್ದಾರೆ.

ಸ್ಪೇಸ್‌ಎಕ್ಸ್‌ಗೆ ಧನ್ಯವಾದ ಅರ್ಪಿಸಿದ 'ನಾಸಾ'

ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಉಡಾವಣೆ ಯಶಸ್ವಿಯಾಗಿದೆ. ಗಗನಯಾತ್ರಿಗಳಾದ ಸುನೀತಾ ಮತ್ತು ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಾಗಿದೆ ಎಂದು ನಾಸಾ ಘೋಷಿಸಿದೆ. ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿ ಪ್ರಯತ್ನಗಳಿಂದಾಗಿ ಸುರಕ್ಷಿತ ಇಳಿಯುವಿಕೆ ಸಾಧ್ಯವಾಯಿತು. ಈ ಸಂದರ್ಭದಲ್ಲಿ ನಾಸಾ ಸ್ಪೇಸ್‌ಎಕ್ಸ್‌ಗೆ ಧನ್ಯವಾದ ಅರ್ಪಿಸಿದೆ. ಗಗನಯಾತ್ರಿಗಳು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನೂ ಗಗನಯಾತ್ರಿಗಳು ಕೆಲವು ದಿನಗಳವರೆಗೆ ನಾಸಾದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಲಾಗಿದೆ.

ಟ್ರಂಪ್ ಗೆಲುವಿನಲ್ಲಿ ಎಲಾನ್ ಮಸ್ಕ್ ಪಾತ್ರ ಅಪಾರ

ಡೊನಾಲ್ಡ್ ಟ್ರಂಪ್ (Donald Trump) ಗೆಲುವಿಗೆ ಎಲಾನ್ ಮಸ್ಕ್ ಹೆಚ್ಚು ಶ್ರಮಿಸಿದ್ದಾರೆ. ಅವರು ತಮ್ಮ ಅನುಯಾಯಿಗಳೊಂದಿಗೆ ಪ್ರಚಾರವನ್ನು ನಡೆಸಿದ್ದರು. ಎಲಾನ್ ಮಸ್ಕ್ ಅವರ ಕಾರ್ಯತಂತ್ರ ಮತ್ತು ಪ್ರತಿತಂತ್ರ ಅದ್ಭುತವಾಗಿತ್ತು. ಈ ಮೂಲಕ ಟ್ರಂಪ್‌ಗೆ ಸಾರ್ವಜನಿಕ ವಿರೋಧವನ್ನು ಅನುಕೂಲಕರವಾಗಿ ಪರಿವರ್ತಿಸಿದರು. ಹಾಗೆಯೇ ಟ್ರಂಪ್ ರಿಪಬ್ಲಿಕನ್ ಪಕ್ಷದ ಗೆಲುವಿನಲ್ಲಿ ಮಸ್ಕ್‌ ಮೇಲುಗೈ ಸಾಧಿಸಿದರು. ಇದರೊಂದಿಗೆ, ಮಸ್ಕ್ ರಾಜಕೀಯದಲ್ಲೂ ಶೈನ್ ಆದರು. ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸ್ಥಾಪಿಸಲಾದ ಸರ್ಕಾರಿ ದಕ್ಷತೆ ಇಲಾಖೆಯಲ್ಲಿ ಎಲಾನ್ ಮಸ್ಕ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಮತ್ತು ಇಲಾಖೆಗಳಲ್ಲಿ ವ್ಯರ್ಥ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನ್ಯಾಯ ಇಲಾಖೆ ಕೆಲಸ ಮಾಡುತ್ತಿದೆ.

ಬಾಹ್ಯಾಕಾಶ ಪ್ರಯಾಣ ಕಾರಿನಲ್ಲಿ ಪ್ರಯಾಣಿಸುವಷ್ಟೇ ಸುಲಭ

ಎಲಾನ್ ಮಸ್ಕ್ ಅವರು ಟೆಸ್ಲಾ ಕಾರುಗಳ ಉತ್ಪಾದನೆಯಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುವುದು ಕಾರಿನಲ್ಲಿ ಪ್ರಯಾಣಿಸುವಷ್ಟೇ ಸುಲಭ ಎನ್ನುವುದು ಮಸ್ಕ್ ಅವರ ಉದ್ದೇಶವಾಗಿದೆ. ಈ ಹಿಂದೆ ಬಾಹ್ಯಾಕಾಶ ಸಂಸ್ಥೆಗಳು ರಾಕೆಟ್‌ಗಳನ್ನು ಮರುಬಳಕೆ ಮಾಡುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಆದರೆ, ಎಲಾನ್ ಮಸ್ಕ್ ವಿಭಿನ್ನವಾಗಿ ಯೋಚಿಸಿದರು. ರಾಕೆಟ್‌ಗಳನ್ನು ಮರುಬಳಕೆ ಮಾಡಲು ತಂತ್ರಜ್ಞಾನವನ್ನು ಪರಿಚಯಿಸಿದರು. ಉಡಾವಣೆಯ ಸಮಯದಲ್ಲಿ ರಾಕೆಟ್‌ನಿಂದ ಬೇರ್ಪಟ್ಟ 71 ಮೀಟರ್ ಬೂಸ್ಟರ್, 30 ನಿಮಿಷಗಳ ಬಳಿಕ ಉಡಾವಣಾ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯಿತು. ಹೀಗಾಗಿ, ಸ್ಪೇಸ್‌ಎಕ್ಸ್ ಹೊಸ ಇತಿಹಾಸವನ್ನು ಸೃಷ್ಟಿಸಿತು.

ಬಿದ್ದ ಸ್ಥಳದಿಂದಲೇ ಮತ್ತೆ ಪುಟಿದೇಳುವ ಮಾಂತ್ರಿಕ

ಒಟ್ಟಾರೆಯಾಗಿ, ನಾವು ಎಲಾನ್ ಮಸ್ಕ್ ಬಗ್ಗೆ ಯೋಚಿಸಿದಾಗ, ಟೆಸ್ಲಾ (Tesla) ನೆನಪಾಗುತ್ತದೆ. ಈ ಕಂಪನಿಯು ಕೆಲವು ವರ್ಷಗಳ ಹಿಂದೆ ದಿವಾಳಿಯ ಅಂಚಿನಲ್ಲಿತ್ತು. ಎಲಾನ್ ಮಸ್ಕ್ ಅಧ್ಯಾಯ ಮುಗಿದುಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಎಲಾನ್ ಮಸ್ಕ್ ಎದೆಗುಂದಲಿಲ್ಲ. ಅವರು ಬಿದ್ದ ಸ್ಥಳದಿಂದಲೇ ಮತ್ತೆ ಪುಟಿದೇಳುತ್ತಿದ್ದಾರೆ. ಟೆಸ್ಲಾ ಕಂಪನಿಯನ್ನು ಮಸ್ಕ್ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ಸೋಲು ಮತ್ತು ಗೆಲುವನ್ನು ಒಂದೇ ಮನೋಭಾವದಿಂದ ಸ್ವೀಕರಿಸುತ್ತಾ ಮುಂದುವರಿಯುತ್ತಿದ್ದಾರೆ.

ಸುನಿತಾ ವಿಲಿಯಮ್ಸ್ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ವಾಸ ಮುಗಿದಿದ್ದು, ಸುರಕ್ಷಿತವಾಗಿ ಭೂಮಿಗೆ ವಾಪಾಸಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್‌ ಅವರನ್ನು ಸ್ವಾಗತಿಸಿದ್ದಾರೆ. ಧೈರ್ಯ ಮತ್ತು ಅಪರಿಮಿತ ಮಾನವ ಚೈತನ್ಯದ ಪರೀಕ್ಷೆಯಾಗಿದೆ. ಸುನೀತಾ ವಿಲಿಯಮ್ಸ್ ಮತ್ತು #Crew9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ. ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಸುನೀತಾ ವಿಲಿಯಮ್ಸ್‌ಗೆ ಮೋದಿ ಭಾವನಾತ್ಮಕ ಪತ್ರ

9 ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಕಳೆದು ಇದೀಗ ಭೂಮಿಗೆ ವಾಪಸಾಗಿರುವ ಭಾರತ ಮೂಲದ ಗಗನ ಯಾತ್ರಿ ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ಸುನಿತಾ ವಿಲಿಯಮ್ಸ್‌ ಅವರನ್ನು 'ಭಾರತದ ಹೆಮ್ಮೆಯ ಪುತ್ರಿ' ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಭಾರತಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ. ನಿಮ್ಮನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಮಾರ್ಚ್ 1 ರಂದೇ ಪತ್ರ ಬರೆದಿದ್ದಾರೆ.

ಸುನೀತಾ ವಿಲಿಯಮ್ಸ್ ಆರೋಗ್ಯ ಈಗ ಹೇಗಿದೆ?

ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹೋಗಿದ್ದು 8 ದಿನಗಳಿಗೆ ಮಾತ್ರ. ಆದರೆ, ಅನಿರೀಕ್ಷಿತ ಸಂದರ್ಭಗಳಿಂದಾಗಿ 286 ದಿನ ಅಲ್ಲಿಯೇ ಉಳಿಯಬೇಕಾಯಿತು. ಆದರೆ, ಸುನೀತಾ ವಿಲಿಯಮ್ಸ್ ಎದೆಗುಂದಲಿಲ್ಲ. ಐಸಿಸಿನಲ್ಲಿ (ISS) ಪ್ರತಿದಿನ ತಮ್ಮ ಕರ್ತವ್ಯ ಮುಂದುವರಿಸಿದರು. ಅನೇಕ ಸವಾಲು ಮತ್ತು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ, ಅವರು ಮುನ್ನುಗ್ಗಿದರು. ಕ್ಯಾಪ್ಸುಲ್‌ನಿಂದ ಹೊರಬಂದ ಬಳಿಕ, ಸೈಚರ್‌ನಿಂದಲೇ ಕೈ ಬೀಸಿ ಮುಗುಳ್ನಕ್ಕರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮುಂದಿನ 45 ದಿನಗಳ ಕಾಲ ಸುನೀತಾ ವಿಲಿಯಮ್ಸ್ ಅಲ್ಲಿಯೇ ಇರುತ್ತಾರೆ.

FAQs
GizBot Technology
Best Mobiles in India

English summary
Elon Musk's Space Triumph: Elon Musk has done wonders in space
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+