ಫೋನ್‌ಗಳಿಗಷ್ಟೇ ಅಲ್ಲ.. ಮೆದುಳಿಗೂ ಚಿಪ್‌ ಹಾಕಿಕೊಳ್ಳಬಹುದು?; ಎಲಾನ್‌ ಮಸ್ಕ್‌ ಪ್ಲ್ಯಾನ್‌!

|

ನೀವು ಸುಮ್ಮನೆ ಕಾಲಹರಣ ಮಾಡಲು ಮಲಗಿದ್ದಾಗ ತಂತ್ರಜ್ಞಾನ ವಿಷಯದಲ್ಲಿ ತಲೆಯಲ್ಲಿ ಏನೋನೋ ಆಲೋಚನೆಗಳು ಮೂಡುತ್ತವೆ ಎಂದಿಟ್ಟುಕೊಳ್ಳಿ. ಅದರಲ್ಲೂ ಇವೆಲ್ಲಾ ನಿಜವಾದರೆ ಎಷ್ಟು ಚಂದ ಅಲ್ವಾ ಎಂದೂ ಸಹ ಹಲವರು ಅಂದುಕೊಂಡಿರಬಹುದು. ಅದರೂ ಅದೇಗೆ ಸಾಧ್ಯ ಇದೆಲ್ಲ ಎನ್ನುವ ಪ್ರಶ್ನೆಯನ್ನೂ ಆ ವೇಳೆ ಹಾಕಿಕೊಂಡಿರಬಹುದು. ಆದರೆ, ಇದಕ್ಕೆಲ್ಲ ಎಲಾನ್‌ ಮಸ್ಕ್‌ ಉತ್ತರ ನೀಡಿದ್ದಾರೆ. ಈ ಕಾರಣಕ್ಕೆ ಬ್ರೈನ್‌ ಚಿಪ್‌ ತಯಾರು ಮಾಡಿದ್ದು, ಸುಮ್ಮನೆ ಮನಸ್ಸಿನಲ್ಲಿ ಅಂದಕೊಳ್ಳುವ ವಿಷಯವನ್ನು ನಿಮ್ಮ ಕಂಪ್ಯೂಟರ್‌ ಅರ್ಥ ಮಾಡಿಕೊಳ್ಳುತ್ತದೆ.

ಟ್ವಿಟ್ಟರ್‌

ಹೌದು, ಟ್ವಿಟ್ಟರ್‌ ಮಾಲೀಕ ಎಲಾನ್‌ ಮಸ್ಕ್‌ ಈಗಂತೂ ಪ್ರತಿದಿನ ಒಂದಲ್ಲಾ ಒಂದು ಸಾಹಸಗಳಿಗೆ ಕೈಹಾಕಿ ಸುದ್ದಿಯಾಗುತ್ತಿದ್ದಾರೆ. ಇಷ್ಟುದಿನ ಟ್ವಿಟ್ಟರ್‌ ಬ್ಲೂಟಿಕ್ ಚಂದಾದಾದಾರಿಕೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು, ನಂತರ ಆಪಲ್‌ ಹಾಗೂ ಗೂಗಲ್‌ನಿಂದ ಟ್ವಿಟ್ಟರ್‌ ಅನ್ನು ಹೊರದಬ್ಬುವ ಮಾತುಗಳು ಎಲ್ಲೆಡೆ ಕೇಳಿಬಂದಿದ್ದವು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಗ ಎಲಾನ್‌ ಮಸ್ಕ್‌ ಮಾನವನ ಮೆದುಳಲ್ಲಿ ಈ ಚಿಪ್ ಪರೀಕ್ಷಿಸಲು ಮುಂದಾಗಿದ್ದಾರೆ.

ಶೀಘ್ರದಲ್ಲೇ ಪರೀಕ್ಷೆಗೆ ತಯಾರಿ

ಶೀಘ್ರದಲ್ಲೇ ಪರೀಕ್ಷೆಗೆ ತಯಾರಿ

ಎಲಾನ್‌ ಮಸ್ಕ್ ಶೀಘ್ರದಲ್ಲೇ ಮಾನವರಲ್ಲಿ ಬ್ರೈನ್ ಚಿಪ್ ಅನ್ನು ಪರೀಕ್ಷಿಸಲು ಮುಂದಾಗಿದ್ದು, ಈ ಚಿಪ್‌ ಮಸ್ಕ್‌ ಅವರ ಸ್ಟಾರ್ಟ್ ಅಪ್ ನ್ಯೂರಾಲಿಂಕ್ ನಿರ್ಮಿಸಿದ ಇಂಟರ್‌ಫೇಸ್ ಆಗಿದೆ. ಇದು ಬಳಕೆದಾರರು ತಮ್ಮ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ನಾನೂ ಸಹ ಚಿಪ್‌ ಅಳವಡಿಸಿಕೊಳ್ಳುತ್ತೇನೆ?

ನಾನೂ ಸಹ ಚಿಪ್‌ ಅಳವಡಿಸಿಕೊಳ್ಳುತ್ತೇನೆ?

ಟೆಕ್ ಬಿಲಿಯನೇರ್ ಆಗಿರುವ ಮಸ್ಕ್ ಅವರು ಕಂಪ್ಯೂಟರ್‌ನೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಸಾಧನವನ್ನು ತಯಾರು ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಅದರಲ್ಲೂ ಸಹ ಇನ್ನೇನು ಆರು ತಿಂಗಳಲ್ಲಿ ಇದು ಲಭ್ಯವಾಗಲಿದೆಯಂತೆ. ಹಾಗೆಯೇ ಈ ಚಿಪ್‌ಗಳಲ್ಲಿ ಒಂದನ್ನು ಸ್ವತಃ ತಾವೇ ಬಳಕೆ ಮಾಡಲು ಮಸ್ಕ್‌ ಮುಂದಾಗಿದ್ದಾರೆ. ಈ ಸಂಬಂಧ ನಮ್ಮ ಹೆಚ್ಚಿನ ದಾಖಲೆಗಳನ್ನು ಎಫ್‌ಡಿಎ (ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಗೆ ಸಲ್ಲಿಸಿದ್ದೇವೆ. ಅವರು ಅನುಮತಿ ನೀಡಿದರೆ ಸುಮಾರು ಆರು ತಿಂಗಳಲ್ಲಿ ನಾವು ಮಾನವರಲ್ಲಿ ನಮ್ಮ ಮೊದಲ ನ್ಯೂರಾಲಿಂಕ್ ಅನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

2019 ರಲ್ಲಿ ಪ್ರತಿಜ್ಞೆ ಮಾಡಿದ್ದ ಮಸ್ಕ್‌

2019 ರಲ್ಲಿ ಪ್ರತಿಜ್ಞೆ ಮಾಡಿದ್ದ ಮಸ್ಕ್‌

ಜುಲೈ 2019 ರಲ್ಲಿ, ನ್ಯೂರಾಲಿಂಕ್ ಸಂಸ್ಥೆಯು 2020 ರಲ್ಲಿ ಮಾನವರ ಮೇಲೆ ತನ್ನ ಮೊದಲ ಪರೀಕ್ಷೆಗಳನ್ನು ಮಾಡಲು ಸಾಧ್ಯವಾಗುತ್ತದೆ ಹೇಳಿದ್ದರು. ಅದರಂತೆ ನಾಣ್ಯದ ಗಾತ್ರದ ಮೂಲಮಾದರಿಗಳನ್ನು ಮಂಗಗಳ ತಲೆಬುರುಡೆಯಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ಮೂಲಕ ಪ್ರಮುಖ ವಿಷಯಗಳು ತಿಳಿದುಬಂದಿದೆ.

ಕೋತಿಗಳು ವಿಡಿಯೋ ಗೇಮ್‌ ಆಡುತ್ತವೆ

ಕೋತಿಗಳು ವಿಡಿಯೋ ಗೇಮ್‌ ಆಡುತ್ತವೆ

ಈ ಪ್ರಯೋಗದಿಂದ ತಿಳಿದುಬಂದ ಮಾಹಿತಿ ಏನೆಂದರೆ ಕೋತಿಗಳು ವಿಡಿಯೋ ಗೇಮ್‌ ಆಡುತ್ತವೆ ಎಂಬುದು. ಹಾಗೆಯೇ ನ್ಯೂರಾಲಿಂಕ್ ಇಂಪ್ಲಾಂಟ್ ಮೂಲಕ ಡಿಸ್‌ಪ್ಲೇ ಮೇಲೆ ಕರ್ಸರ್ ಅನ್ನು ಚಲಿಸಲು ಅವು ಮುಂದಾಗಿವೆ ಎಂದು ಕಂಡುಕೊಂಡಿದ್ದಾರೆ. ಇದರ ನಡುವೆಯೇ ಮಾನವರಲ್ಲಿ ದೃಷ್ಟಿ ಮತ್ತು ಚಲನಶೀಲತೆಯನ್ನು ಪುನಃಸ್ಥಾಪಿಸಲು ಕಂಪೆನಿಯು ಇಂಪ್ಲಾಂಟ್‌ಗಳನ್ನು ಬಳಸಲು ಮುಂದಾಗಿದೆ.

ಕೈ ಇಲ್ಲದಿದ್ದರೂ ಫೋನ್‌ ಬಳಸಬಹುದು

ಕೈ ಇಲ್ಲದಿದ್ದರೂ ಫೋನ್‌ ಬಳಸಬಹುದು

ಸ್ನಾಯುಗಳ ಅಸ್ವಸ್ಥತೆ ಹೊಂದಿರುವ ವ್ಯಕ್ತಿ. ಅದರಲ್ಲೂ ಎರಡೂ ಕೈ ಏನೂ ಕೆಲಸ ಮಾಡದಿರುವ ವ್ಯಕ್ತಿ ಇತರೆ ಸಾಮಾನ್ಯ ವ್ಯಕ್ತಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗದ ವೇಗದಲ್ಲಿ ಆತ ಫೋನ್‌ ಅನ್ನು ಬಳಕೆ ಮಾಡುವ ಹಾಗೆ ಮಾಡುತ್ತೇವೆ. ಹಾಗೆಯೇ ಬೆನ್ನುಹುರಿ ತುಂಡಾಗಿರುವ ಯಾರಿಗಾದರೂ ಪೂರ್ಣ ದೇಹದ ಕಾರ್ಯವನ್ನು ಪುನಃಸ್ಥಾಪಿಸಲು ಸಾಧ್ಯವಾಗುವ ಹಾಗೆ ನಾವು ಮಾಡುತ್ತೇವೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ಈ ಪರೀಕ್ಷೆ ಯಶಸ್ವಿಯಾದರೆ ಯಾರ್ಯಾರಿಗೆ ಲಾಭ

ಈ ಪರೀಕ್ಷೆ ಯಶಸ್ವಿಯಾದರೆ ಯಾರ್ಯಾರಿಗೆ ಲಾಭ

ಈಗಾಗಲೇ ಕೋತಿಗಳಲ್ಲಿ ಯಶಸ್ಸು ಕಂಡಿರುವ ಈ ಪ್ಲ್ಯಾನ್‌ ಮುಂದೆ ಮಾನವರಿಗೆ ಬಳಸಬಹುದು ಎಂದು ಅನುಮತಿ ಸಿಕ್ಕರೆ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಮರೆವಿನ ರೋಗ, ಬೆನ್ನುಹುರಿ ಹೊಂದಿರುವ ಜನರು ಸೇರಿದಂತೆ ಇನ್ನಿತರರಿಗೆ ಇದು ಲಾಭವಾಗಲಿದೆ. ಈ ಮೂಲಕ ಯಂತ್ರಗಳ ಜೊತೆ ಅವರು ಮೆದುಳಿನಿಂದಲೇ ಸಂವಹನ ನಡೆಸಬಹುದಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಈ ಬ್ರೈನ್ ಚಿಪ್ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ಎಲೆಕ್ಟ್ರೋಡ್ ವೈರ್‌ಗಳನ್ನು ಹೊಂದಿದ್ದು, ಈ ಎಲೆಕ್ಟ್ರೋಡ್ ವೈರ್‌ಗಳು ಮೆದುಳಿನ ಭಾಗದೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲಿವೆ. ಹೀಗಾಗಿ ಯಾರು ಈ ಚಿಪ್‌ ಅನ್ನು ಹೊಂದಿರುವರೋ ಅವರು ಅಂದುಕೊಂಡಂತೆ ಸಂಬಂಧಿಸಿದ ಡಿವೈಸ್‌ಗಳ ಜೊತೆ ಸಂವಹನ ನಡೆಸಬಹುದಾಗಿದೆ. ಈ ಎಲೆಕ್ಟ್ರೋಡ್ ವೈರ್‌ ಮೆದುಳಿಗೆ ಬರುವ ಸಂದೇಶವನ್ನು ಸಂಗ್ರಹ ಮಾಡಿಕೊಂಡು ಮೆದುಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿರುತ್ತವೆ.

Best Mobiles in India

English summary
Elon Musk Hopes To Test Brain Chip In Humans Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X