Home
ಸುದ್ದಿಜಾಲ

SmartWatch: ಎಂಡೆಫೊ ಎನ್ಫಿಟ್‌ ನಿಯೋ, ಎನ್ಫಿಟ್‌ ನಿಯೋ ಪ್ರೊ ಸ್ಮಾರ್ಟ್‌ವಾಚ್‌ ಲಾಂಚ್‌: ಬೆಲೆ ಎಷ್ಟು?

ಮ್ಯೂಸಿಕ್‌ ಪ್ರಿಯರಿಗೆ ಎಂಡೆಫೊ (Endefo) ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದೆ. ಈಗಾಗಲೇ ಸ್ಮಾರ್ಟ್‌ ಸ್ಪೀಕರ್‌, ಇಯರ್‌ಬಡ್ಸ್‌, ನೆಕ್‌ಬ್ಯಾಂಡ್‌ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಸೆಳೆದಿದೆ. ಈ ನಡುವೆ ಎಂಡೆಫೊ ಹೊಸ ಸ್ಮಾರ್ಟ್‌ವಾಚ್‌ಗಳನ್ನು (SmartWatch) ಅನ್ನು ಅನಾವರಣ ಮಾಡಿದೆ.

ಹೌದು, ಎಂಡೆಫೊ ಇದೀಗ ಎನ್ಫಿಟ್‌ ನಿಯೋ ಹಾಗೂ ಎನ್ಫಿಟ್‌ ನಿಯೋ ಪ್ರೊ (Endefo Enfit NEO, Endefo Enfit NEO PRO) ಎಂಬ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದೆ. ಈ ವಾಚ್‌ಗಳು ಅತ್ಯುತ್ತಮ ಡಿಸ್‌ಪ್ಲೇ ಹಾಗೂ ಉತ್ತಮ ಆರೋಗ್ಯ ಸಂಬಂಧಿ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಎಂಡೆಫೊ ಎನ್ಫಿಟ್‌ ನಿಯೋ, ಎನ್ಫಿಟ್‌ ನಿಯೋ ಪ್ರೊ ಸ್ಮಾರ್ಟ್‌ವಾಚ್‌ ಲಾಂಚ್‌ ...

ಎನ್ಫಿಟ್‌ ನಿಯೋ ಫೀಚರ್ಸ್‌: ಈ ಸ್ಮಾರ್ಟ್‌ವಾಚ್‌ 1.9 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಬ್ಲೂಟೂತ್ ಕರೆ ಸೌಲಭ್ಯ ಮತ್ತು 135+ ಸ್ಪೋರ್ಟ್ಸ್ ಮೋಡ್‌ನೊಂದಿಗೆ ಪ್ಯಾಕ್‌ ಆಗಿದೆ. ಜೊತೆಗೆ ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಮತ್ತು ರಕ್ತದ ಆಮ್ಲಜನಕದ ಟ್ರ್ಯಾಕಿಂಗ್ ಅನ್ನು ಸಹ ಮಾಡಲಿದ್ದು, ಕ್ಯಾಮೆರಾ ಕಂಟ್ರೋಲ್‌, ಬಹು ಭಾಷಾ ಬೆಂಬಲ, ಡ್ಯುಯಲ್-ಸ್ಕ್ರೀನ್ ಕಾರ್ಯನಿರ್ವಹಣೆ, ವಾಯ್ಸ್‌ ಅಸಿಸ್ಟೆಂಟ್‌ ಮತ್ತು ವಿವಿಧ ಯುಐ ಮೋಡ್‌ಗಳ ಆಯ್ಕೆ ಪಡೆದಿದೆ.

ಎನ್ಫಿಟ್‌ ನಿಯೋ ಪ್ರೊ ಫೀಚರ್ಸ್‌: ಸ್ಮಾರ್ಟ್‌ವಾಚ್‌ 2.01 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದೂ ಸಹ ಬ್ಲೂಟೂತ್ ಕರೆ ಸೌಲಭ್ಯ ಪಡೆದಿದೆ. ಜೊತೆಗೆ ಇದು 135+ ಸ್ಪೋರ್ಟ್ಸ್ ಮೋಡ್‌ ಆಯ್ಕೆ ಮತ್ತು 200+ ವಾಚ್ ಫೇಸ್‌ ಆಯ್ಕೆ ಹೊಂದಿದ್ದು, ರಕ್ತದೊತ್ತಡ ಮತ್ತು ರಕ್ತದ ಆಮ್ಲಜನಕದ ಮೇಲ್ವಿಚಾರಣೆ, ಕ್ಯಾಮರಾ ಕಂಟ್ರೋಲ್‌ ಮತ್ತು ಬಹು ಭಾಷಾ ಬೆಂಬಲದ ಸೌಲಭ್ಯ ಪಡೆದಿದೆ.

ಈ ಎರಡೂ ವಾಚ್‌ಗಳಲ್ಲಿ ಇರುವ ಪ್ರಮುಖ ಭಿನ್ನತೆ ಏನೆಂದರೆ ಡಿಸ್‌ಪ್ಲೇ ಗಾತ್ರ. ಅದನ್ನು ಹೊರತುಪಡಿಸಿದರೆ ಹೆಚ್ಚೇನು ಬದಲಾವಣೆ ಇಲ್ಲ. ಜೊತೆಗೆ ಎರಡೂ ವಾಚ್‌ಗಳು ಸಹ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಈ ಮೂಲಕ ಕ್ಷಣ ಕ್ಷಣದ ಮಾಹಿತಿಯನ್ನು ಹಾಗೂ ನಿಮ್ಮ ಆರೋಗ್ಯವನ್ನು ವಿಚಾರಣೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಬಹುಭಾಷಾ ಬೆಂಬಲ ಹಾಗೂ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿವೆ.

ಈ ಸ್ಮಾರ್ಟ್‌ವಾಚ್‌ಗಳ ಬಿಡುಗಡೆಯ ಬಗ್ಗೆ ಎಂಡೆಫೊದ ಸಿಇಒ ಅನೀಫ್ ತಾಸ್ ಮಾಹಿತಿ ನೀಡಿ, ನಮ್ಮ ಹೊಸ ಸ್ಮಾರ್ಟ್ ವಾಚ್ ಮಾದರಿಗಳಾದ ಎನ್ಫಿಟ್‌ ನಿಯೋ ಮತ್ತು ಎನ್ಫಿಟ್‌ ನಿಯೋ ಪ್ರೊ ಅನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. ಹಾಗೆಯೇ ಫ್ಯಾಷನ್ ಮತ್ತು ತಂತ್ರಜ್ಞಾನ ಎರಡನ್ನೂ ಗೌರವಿಸುವ ನಮ್ಮ ಕ್ರಿಯಾತ್ಮಕ ಗ್ರಾಹಕರಿಗೆ ವೆಚ್ಚ-ಪರಿಣಾಮಕಾರಿ ಮತ್ತು ಸಮಕಾಲೀನ ಫಿಟ್‌ನೆಸ್ ಹಾಗೂ ಜೀವನಶೈಲಿ ಗ್ಯಾಜೆಟ್‌ಗಳನ್ನು ತಲುಪಿಸಿದ್ದೇವೆ. ನಾವು ವರ್ಷಾಂತ್ಯಕ್ಕೆ ಇನ್ನೂ ಹೆಚ್ಚಿನ ಲಾಂಚ್‌ಗಳು ಮತ್ತು ಮಾರಾಟಗಳಿಗೆ ಸಿದ್ಧವಾಗುತ್ತಿದ್ದೇವೆ ಎಂದಿದ್ದಾರೆ.

ಎಂಡೆಫೊ ಎನ್ಫಿಟ್‌ ನಿಯೋ, ಎನ್ಫಿಟ್‌ ನಿಯೋ ಪ್ರೊ ಸ್ಮಾರ್ಟ್‌ವಾಚ್‌ ಲಾಂಚ್‌ ...

ಎನ್ಫಿಟ್‌ ನಿಯೋ ವಾಚ್‌ಗಳ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ಗಳಲ್ಲಿಎನ್ಫಿಟ್‌ ನಿಯೋ ಸ್ಮಾರ್ಟ್‌ವಾಚ್‌ಗೆ 6,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ನೀವು ಈಗ ಲಾಂಚ್‌ ಕೊಡುಗೆ ಭಾಗವಾಗಿ 1,999 ರೂ. ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಎನ್ಫಿಟ್‌ ನಿಯೋ ಪ್ರೊ ಗೆ 7,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದನ್ನೂ ಸಹ 2,499 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಇಂದಿನಿಂದ ಈ ಸ್ಮಾರ್ಟ್ ವಾಚ್‌ಗಳು ಸಂಗೀತ ಮೊಬೈಲ್ಸ್, ಸುಪ್ರೀಮ್ ಪ್ಯಾರಡೈಸ್, ಲಾಟ್ ಮೊ, ನಂದಿಲತ್ ಡಿಜಿಟಲ್, ಐಡಿಯಲ್ ಗೃಹೋಪಯೋಗಿ ವಸ್ತುಗಳು, ಈಸಿ ಸ್ಟೋರ್, ಗಲ್ಫ್ ಓನ್ ಡಿಜಿಟಲ್ ಸೇರಿದಂತೆ 2000 ಕ್ಕೂ ಹೆಚ್ಚು ರಿಟೇಲರ್‌ ಸ್ಟೋರ್‌ಗಳಲ್ಲಿ ಲಭ್ಯ ಇವೆ.

Best Mobiles in India

English summary
Endefo has now unveiled two new smartwatches, Enfit Neo and Enfit Neo Pro. These watches have got the best display and the best health related features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+