Home
ಸುದ್ದಿಜಾಲ

ನೌಕರರಿಗೆ ಗುಡ್‌ನ್ಯೂಸ್‌: ಕೊನೆಗೂ EPFO ಬಡ್ಡಿದರದಲ್ಲಿ ಹೆಚ್ಚಳ!

ಇಪಿಎಫ್‌ಒ (EPFO) ಇಂದಿನ ಸಭೆಯಲ್ಲಿ 2022-23 ರ ಉದ್ಯೋಗಿಗಳ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಶೇ. 8.15 ಬಡ್ಡಿ ದರವನ್ನು ನಿಗದಿಪಡಿಸಿದೆ. ಮಾರ್ಚ್ 2022 ರಲ್ಲಿ, ಇಪಿಎಫ್‌ಒ (EPFO) ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ 2020-21 ರಲ್ಲಿ ಶೇಕಡಾ 8.5 ರಿಂದ 2021-22 ರ ಇಪಿಎಫ್‌ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕಡಿಮೆ ಶೇಕಡಾ 8.1 ಕ್ಕೆ ಇಳಿಸಿತ್ತು. 1977-78ರ ನಂತರ ಇಪಿಎಫ್ ಬಡ್ಡಿ ದರ ಶೇ.8 ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆಯಾಗಿತ್ತು.

ನೌಕರರ ಭವಿಷ್ಯ ನಿಧಿ ಸಂಘಟನೆಯ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಮಂಗಳವಾರ ನಡೆದ ತನ್ನ ಸಭೆಯಲ್ಲಿ 2022-23 ಕ್ಕೆ ಇಪಿಎಫ್‌ನಲ್ಲಿ ಶೇಕಡಾ 8.15 ಬಡ್ಡಿದರವನ್ನು ನಿರ್ಧರಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. CBT ಯ ನಿರ್ಧಾರದ ನಂತರ, 2022-23 ರ ಇಪಿಎಫ್‌ (EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.

ನೌಕರರಿಗೆ ಗುಡ್‌ನ್ಯೂಸ್‌: ಕೊನೆಗೂ EPFO ಬಡ್ಡಿದರದಲ್ಲಿ ಹೆಚ್ಚಳ!

ಸರ್ಕಾರದ ಅನುಮೋದನೆಯ ನಂತರ, 2022-23 ರ ಇಪಿಎಫ್‌ (EPF) ಮೇಲಿನ ಬಡ್ಡಿ ದರವನ್ನು ಇಪಿಎಫ್‌ಒ ಐದು ಕೋಟಿಗೂ ಅಧಿಕ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ. ನೀವೇನಾದರೂ PF ಬ್ಯಾಲೆನ್ಸ್ ಚೆಕ್ ಮಾಡಬೇಕಿದ್ದರೆ, ಈ ಮುಂದಿನ ಕ್ರಮ ಅನುಸರಿಸಿ:

* ಅಧಿಕೃತ EPFO ವೆಬ್‌ಸೈಟ್‌ಗೆ ಭೇಟಿ ನೀಡಿ epfindia.gov.in.
* ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ಉಲ್ಲೇಖಿಸಲಾದ 'ಸರ್ವೀಸ್‌' ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದ ಅಡಿಯಲ್ಲಿ, 'ಉದ್ಯೋಗಿಗಳಿಗಾಗಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ, ಹೊಸ ಪೇಜ್ ತೆರೆಯುತ್ತೆ, 'ಸರ್ವೀಸ್‌' ಆಯ್ಕೆಯಲ್ಲಿ ಕಾಣಿಸುವ 'ಸದಸ್ಯ ಪಾಸ್‌ಬುಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* 'ಸದಸ್ಯ ಪಾಸ್‌ಬುಕ್' ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್‌ಗೆ ನಿರ್ದೇಶಿಸಲಾಗುತ್ತದೆ.
* ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್‌ಗೆ ಉತ್ತರಿಸಿ. ನಂತರ 'ಲಾಗಿನ್' ಕ್ಲಿಕ್ ಮಾಡಿ.
* ಇದರ ನಂತರ, ಚಂದಾದಾರರನ್ನು ಮುಖ್ಯ EPF ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ಮಾಹಿತಿ ಕಾಣಬಹುದು.

ನೌಕರರಿಗೆ ಗುಡ್‌ನ್ಯೂಸ್‌: ಕೊನೆಗೂ EPFO ಬಡ್ಡಿದರದಲ್ಲಿ ಹೆಚ್ಚಳ!

EPFOನ ವೆಬ್​​ಸೈಟ್ ಮೂಲಕ ಹಣ ಪಡೆದುಕೊಳ್ಳಲು ಈ ಕ್ರಮ ಅನುಸರಿಸಿ:
ಹಂತ 1. ಮೊದಲು epfindia.gov.in ಗೆ ಲಾಗಿನ್ ಮಾಡಿ.
ಹಂತ 2. ವೆಬ್​ಸೈಟ್​ನ ಮುಖಪುಟದ ಬಲ ಮೂಲೆಯಲ್ಲಿ ಆನ್​ಲೈನ್ ಮುಂಗಡ ಕ್ಲೈಮ್​​ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಹಂತ 3. ಸೇವೆಗಳಿಗೆ ಹೋಗಿ, ಕ್ಲೈಮ್ ಫಾರ್ಮ್-31,19,10C ಮತ್ತು 10D ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ನಂಬರ್​ ನಮೂದಿಸಿ, ಪರಿಶೀಲನೆ ಮಾಡಬೇಕು.
ಹಂತ 4. ಆನ್​ಲೈನ್​ ಕ್ಲೈಮ್​ಗಾಗಿ ಮುಂದುವರಿಕೆ ಕ್ಲಿಕ್ ಮಾಡ್ಬೇಕು. ಇದಾದ ಬಳಿಕ ಪಿಎಫ್ ಅಡ್ವಾನ್ಸ್​ ಆಯ್ಕೆ ಮಾಡಿ, ಹಣ ಪಡೆದುಕೊಳ್ಳುವ ಕಾರಣ ನಮೂದಿಸಬೇಕು.

ನೌಕರರಿಗೆ ಗುಡ್‌ನ್ಯೂಸ್‌: ಕೊನೆಗೂ EPFO ಬಡ್ಡಿದರದಲ್ಲಿ ಹೆಚ್ಚಳ!

ಹಂತ 5. ಇದಾದ ಬಳಿಕ ನಿಮಗೆ ಬೇಕಾದ ಮೊತ್ತ ಭರ್ತಿ ಮಾಡಿ, ಚೆಕ್​ನ ಸ್ಕ್ಯಾನ್ ಮಾಡಿದ ಪ್ರತಿ ಅಪ್ಲೋಡ್ ಮಾಡಬೇಕು.
ಹಂತ 6. ಅರ್ಜಿದಾರನ ಪೂರ್ಣ ವಿಳಾಸ ನೀಡುವುದು ಕಡ್ಡಾಯ.
ಹಂತ 7. ಗೆಟ್​ ಆಧಾರ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಆಧಾರ್​ ಕಾರ್ಡ್​​ಗೆ ನೋಂದಣಿ ಮಾಡಿರುವ ಮೊಬೈಲ್​ ನಂಬರ್​ಗೆ ಬರುವ OTP ನಮೂದಿಸಬೇಕು.
ಹಂತ 8. ಇದಾದ ಬಳಿಕ ನಿಮ್ಮ ಖಾತೆಗೆ ಹಣ ಬರಲಿದೆ.

Best Mobiles in India

English summary
Retirement fund body EPFO fixed 8.15 per cent rate of interest on employees' provident fund (EPF) deposits for 2022-23 at its meeting on Tuesday. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+