Home
ಸುದ್ದಿಜಾಲ

ನೌಕರರಿಗೆ ಸಿಹಿ ಸುದ್ದಿ!..ATM ಮೂಲಕವೇ ಸುಲಭವಾಗಿ ನಿಮ್ಮ PF ಹಣ ವಿತ್‌ಡ್ರಾ ಮಾಡಬಹುದು!

ಪಿಎಫ್‌ ಹಣ ಖಾಸಗಿ ಉದ್ಯೋಗಿಗಳ ಪಾಲಿಗೆ ಆರ್ಥಿಕ ಭದ್ರತೆಯಂತೆ ಇದ್ದು, ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಇನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ( EPFO ) ಹಲವು ಉಪಯುಕ್ತ ಸೇವೆಗಳನ್ನು ಜಾರಿ ಮಾಡಿದೆ. ಆದ್ರೆ ಇದೀಗ EPFO 3.0 ಅಪ್‌ಡೇಟ್ ಮಾಡಲು ಕೇಂದ್ರವು ಸಜ್ಜಾಗಿದೆ. ಕೆಲವೇ ದಿನಗಳಲ್ಲಿ EPFO ಚಂದಾದಾರರಿಗೆ ಕೆಲವು ನೂತನ ಪ್ರಯೋಜನಗಳನ್ನು ಘೋಷಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಹೌದು, ಭವಿಷ್ಯ ನಿಧಿ ಸಂಸ್ಥೆ (EPFO) ಅಪ್‌ಡೇಟ್‌ ಆಗುವ ಹಂತದಲ್ಲಿ ಇದ್ದು, ಹೊಸ ಯೋಜನೆಗಳು ಘೋಷಿಸಬಹುದು. ಅವುಗಳಲ್ಲಿ EPF ಖಾತೆದಾರರಿಗೆ ATM ನಿಂದ ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನೀಡಬಹುದು ಎಂದು ವರದಿಗಳಾಗಿವೆ. ಹಾಗೆಯೇ ಉದ್ಯೋಗಿಗಳು ತಮ್ಮ ಉಳಿತಾಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯ ನಿಧಿಗೆ ದೇಣಿಗೆ ( Contribution ) ನೀಡುವ ವ್ಯವಸ್ಥೆ ನಿರೀಕ್ಷಿಸಲಾಗಿದೆ.

ನೌಕರರಿಗೆ ಸಿಹಿ ಸುದ್ದಿ!..ATM ಮೂಲಕವೇ ಸುಲಭವಾಗಿ ನಿಮ್ಮ PF ಹಣ ವಿತ್‌ಡ್ರಾ ಮಾಡಿ!

EPFO 3.0 ಅನ್ನು ತರಲು ಸರ್ಕಾರವು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದು, ಇದು EPF ಸದಸ್ಯರಿಗೆ ಹಲವು ನೂತನ ಪ್ರಕಟಣೆಗಳನ್ನು ತರಲಿದೆ ಎನ್ನಲಾಗಿದೆ. ಆ ಪೈಕಿ ATM ಮೂಲಕ ಪಿಎಫ್‌ ಹಣವನ್ನು ವಿತ್‌ಡ್ರಾ ಮಾಡುವ ಸೌಲಭ್ಯ ಹಾಗೂ ಭವಿಷ್ಯ ನಿಧಿಗೆ ಉದ್ಯೋಗಿ ದೇಣಿಗೆ (Contribution) ಮಿತಿಗಳನ್ನು ಹೆಚ್ಚಿಸುವುದು ಪ್ರಮುಖ ಹೈಲೈಟ್‌ ಗಳಾಗಿ ಗುರುತಿಸಿಕೊಳ್ಳಲಿವೆ. ಅಂದಹಾಗೆ ಸದ್ಯ ಭವಿಷ್ಯ ನಿಧಿಗೆ ಉದ್ಯೋಗಿಯ ದೇಣಿಗೆ ಶೇ. 12 ಮಿತಿ ಹೊಂದಿದೆ.

ಹೊಸ ಅಧಿಸೂಚನೆಯಂತೆ, ನೌಕರರು ತಮ್ಮ ಉಳಿತಾಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ತಮ್ಮ EPF ಖಾತೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಜಮಾ ಮಾಡಬಹುದು ಎನ್ನಲಾಗಿದೆ. ಸದಸ್ಯರಿಗೆ ( ನೌಕರರಿಗೆ ) ಸಾಧ್ಯವಾದಷ್ಟು ಉಳಿಕೆ ಮಾಡುವ ಆಯ್ಕೆಯನ್ನು ಒದಗಿಸುವುದು ಇದರ ಗುರಿ ಎನ್ನಲಾಗಿದೆ.

ಅಲ್ಲದೇ ಈ EPF ಖಾತೆಯ ಮೊತ್ತವನ್ನು ನಿವೃತ್ತಿಯಾಗುವ ಸದಸ್ಯರಿಗೆ (ನೌಕರರಿಗೆ) ಹೆಚ್ಚಿನ ಪಿಂಚಣಿಗಾಗಿ ಆಯ್ಕೆಯಾಗಿ ಸಹ ಪರಿವರ್ತಿಸಬಹುದು. ಆದಾಗ್ಯೂ, ಉದ್ಯೋಗದಾತರು / ಕಂಪನಿಗಳ ದೇಣಿಗೆಯಲ್ಲಿ (Contribution) ಯಾವುದೇ ಮಹತ್ತರ ಬದಲಾವಣೆ ಇರುವುದಿಲ್ಲ.

EPFO ಸದಸ್ಯರಿಗೆ (ನೌಕರರಿಗೆ) ATM ಮೂಲಕ ಪಿಎಫ್‌ ಹಣ ವಿತ್‌ಡ್ರಾ ಮಾಡುವ ಗಿಫ್ಟ್‌ ಅನ್ನು ಸರ್ಕಾರವು ಘೋಷಣೆ ಮಾಡುವ ನಿರೀಕ್ಷೆ ಇದೆ. EPFO ಸದಸ್ಯರಿಗೆ ಡೆಬಿಟ್ ಕಾರ್ಡ್‌ನಂತೆ (ATM) ಎಟಿಎಂ ಕಾರ್ಡ್ ನೀಡಲಾಗುತ್ತದೆ ಎನ್ನಲಾಗಿದೆ. EPFO ಸದಸ್ಯರಿಗೆ ಭವಿಷ್ಯ ನಿಧಿಯಲ್ಲಿ ಠೇವಣಿ ( PF ) ಇಟ್ಟಿರುವ ಮೊತ್ತದ ಶೇ.50 ರಷ್ಟು ಹಣವನ್ನು ವಿತ್‌ಡ್ರಾ (Withdraw) ಮಾಡಲು ಅವಕಾಶ ನೀಡಲಾಗಿದೆ.

ಅಂದಹಾಗೆ 2025 ರ ಹೊಸ ವರ್ಷದಲ್ಲಿ EPFO ​​ಯ ಹೊಸ ನೀತಿಯನ್ನು ಸರ್ಕಾರ ಘೋಷಣೆ ಮಾಡುವ ಸಾಧ್ಯತೆಗಳು ಇವೆ. EPFO ​​3.0 ಅನ್ನು ಮೇ / ಜೂನ್ 2025 ರಲ್ಲಿ ಜಾರಿಗೆ ತರುವ ನಿರೀಕ್ಷೆಗಳು ಇವೆ ಎಂದು ಮೂಲಗಳು ತಿಳಿಸಿವೆ.

Best Mobiles in India

English summary
EPFO New Plan: Easy Provident Fund Withdrawal Details, Withdraw PF Using ATMs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+