Home
ಸುದ್ದಿಜಾಲ

ನೀವು EPFO ಖಾತೆ ಹೊಂದಿದ್ದೀರಾ?.. ಹಾಗಿದ್ರೆ ಈ ನಂಬರ್‌ ನಿಮ್ಮ ಬಳಿ ಇರಲಿ!

ನೌಕರರ ಪಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಆರ್ಥಿಕ ಶಕ್ತಿ ಇದ್ದಂತೆ. ಈ ಸಂಸ್ಥೆಯು ಸಂಘಟಿತ ವಲಯದ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಮತ್ತು ನಿವೃತ್ತಿ ನೆರವು ಒದಗಿಸುವ ಸಾಮಾಜಿಕ ಭದ್ರತಾ ಸೇವೆಯಾಗಿದೆ. ಇನ್ನು ಇಪಿಎಫ್‌ಓ (EPFO) ಉದ್ಯೋಗಿಗಳಿಗೆ ನೆರವಾಗಲು ಹಲವು ಅಗತ್ಯ ಸೇವೆಗಳನ್ನು ನೀಡಿದೆ. ಆ ಪೈಕಿ ಸಂಸ್ಥೆಯ ಈ ನಂಬರ್ ನೌಕರರಿಗೆ ಉಪಯುಕ್ತ.

ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ನೆರವಾಗಲೆಂದು ಸಹಾಯವಾಣಿ ಸಂಖ್ಯೆಯನ್ನು ಹೊಂದಿದೆ. EPFO ಸಂಸ್ಥೆಯ ಸಹಾಯವಾಣಿ ಸಂಖ್ಯೆ 14470 ಗೆ ಕರೆ ಮಾಡುವ ಮೂಲಕ ನೌಕರರು EPFO ​​ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು ಎಂದು ಸಂಸ್ಥೆಯು ಎಕ್ಸ್‌ನಲ್ಲಿ (ಟ್ವಿಟರ್) ಟ್ವಿಟ್‌ ಮೂಲಕ ತಿಳಿಸಿದೆ.

ನೀವು EPFO ಖಾತೆ ಹೊಂದಿದ್ದೀರಾ?.. ಹಾಗಿದ್ರೆ ಈ ನಂಬರ್‌ ನಿಮ್ಮ ಬಳಿ ಇರಲಿ!

ಸಹಾಯವಾಣಿ ಸಂಖ್ಯೆ 14470 ಗೆ ಕರೆ ಮಾಡುವ ಮೂಲಕ ಭವಿಷ್ಯ ನಿಧಿ ಕೊಡುಗೆಗಳು, ವಿತ್‌ಡ್ರಾ ಮಾಹಿತಿ ಬಗ್ಗೆ, ಟ್ರಾನ್ಸ್‌ಫರ್‌ ಮಾಹಿತಿ ಹಾಗೂ ಇತರೆ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ತ್ವರಿತವಾಗಿ ಮಾಹಿತಿ ಪಡೆಯಲು ಈ ಸಹಾಯವಾಣಿ ಉಪಯುಕ್ತ ಎನಿಸಲಿದೆ.

ಸಹಾಯವಾಣಿ ಸಂಖ್ಯೆ 14470 :
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯ 14470 ಈ ಸಹಾಯವಾಣಿ ಸಂಖ್ಯೆಯು ನೌಕರರಿಗೆ ಅವರ ಖಾತೆಯ ಪಿಎಫ್‌ ಮಾಹಿತಿ, ಪೆನ್ಶನ್‌ ಮಾಹಿತಿ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆಯಲು ನೆರವಾಗಲಿದೆ. ಈ ಸಹಾಯವಾಣಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಈ ಸಹಾಯವಾಣಿಯು ಹಿಂದಿ, ಗುಜರಾತಿ, ಕನ್ನಡ, ಮರಾಠಿ, ತಮಿಳ, ತೆಲಗು, ಬೆಂಗಾಳಿ, ಅಸಾಮಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಲಭ್ಯ.

ಉಮಂಗ್ ಆಪ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು :
ಇಪಿಎಫ್‌ಒ ಉಮಾಂಗ್ ಎಂಬ ಸರ್ಕಾರದ ಕೇಂದ್ರೀಕೃತ ಮೊಬೈಲ್ ಆಪ್‌ ಆಗಿದ್ದು, ಇದು ವಿವಿಧ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ನೌಕರರು ತಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.

ಉಮಾಂಗ್ ಆಪ್‌ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್‌ ಮಾಡಲು ಹೀಗೆ ಮಾಡಿ :

ಹಂತ 1 : ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಆಪ್‌ ಸ್ಟೋರ್‌ನಿಂದ ಉಮಾಂಗ್‌ ಆಪ್‌ ಇನ್‌ಸ್ಟಾಲ್‌ ಮಾಡಿ

ಹಂತ 2 : ನಿಮ್ಮ ಮೊಬೈಲ್‌ನಲ್ಲಿ ಉಮಾಂಗ್ ಆಪ್‌ ತೆರೆಯಿರಿ ಹಾಗೂ ನಿಮ್ಮ ಆದ್ಯತೆಯ ಭಾಷೆಯನ್ನು ಸೆಟ್ ಮಾಡಿ.

ಹಂತ 3 : ಅಲ್ಲದೆ, 'ಎಂಡ್ ಟು ಎಂಡ್ ಪರವಾನಗಿ ಒಪ್ಪಂದ' ದ ನಿಯಮಗಳು ಹಾಗೂ ಷರತ್ತುಗಳನ್ನು ಓದಿ.

ಹಂತ 4 : ನಿಮ್ಮ ಮೊಬೈಲ್ ನಂಬರ್‌ ಅನ್ನು ಚೆಕ್ ಮಾಡಿ ಮತ್ತು ನೋಂದಾಯಿಸಿ.

ಹಂತ 5 : ಕೆಳಭಾಗದಲ್ಲಿರುವ 'ಎಲ್ಲಾ ಸೇವೆಗಳು' ಆಯ್ಕೆಯ ಅನ್ನು ಸೆಲೆಕ್ಟ್ ಮಾಡಿ.

ಹಂತ 6 : ಅಲ್ಲಿರುವ ಆಯ್ಕೆಗಳ ಲಿಸ್ಟ್‌ನಿಂದ 'EPFO' ಅನ್ನು ಸರ್ಚ್‌ ಮಾಡಿರಿ ಹಾಗೂ ಸೆಲೆಕ್ಟ್‌ ಮಾಡಿ.

ಹಂತ 7 : ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್‌ ಮಾಡಲು 'ಪಾಸ್‌ಬುಕ್ ವೀಕ್ಷಿಸಿ' ಆಯ್ಕೆಯನ್ನು ಸೆಲೆಕ್ಟ್‌ ಮಾಡಿರಿ.

ಹಂತ 8 : ಬಳಿಕ UAN ಅನ್ನು ಎಂಟ್ರಿ ಮಾಡಿ ಮತ್ತು 'OTP ಪಡೆಯಿರಿ' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 9 : ನಂತರ OTP ಅನ್ನು ನಮೂದಿಸಿ ಮತ್ತು 'ಸಬ್‌ಮಿಟ್‌' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಇಪಿಎಫ್ ಬ್ಯಾಲೆನ್ಸ್‌ನೊಂದಿಗೆ ಪಾಸ್‌ಬುಕ್ ಅನ್ನು ಸ್ಕ್ರೀನ್‌ ಮೇಲೆ ಕಾಣಿಸಲಾಗುತ್ತದೆ.

Best Mobiles in India

English summary
EPFO helpline: You can get all the information related to EPFO by calling this number. here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+