ನೌಕರರಿಗೆ ಸಿಹಿಸುದ್ದಿ: ನಿಮ್ಮ PF ಖಾತೆ ಬ್ಯಾಲೆನ್ಸ್‌ ಚೆಕ್‌ ಮಾಡುವ ಸಮಯ ಬಂದಿದೆ!

|

ಪಿಎಫ್‌ (PF) ಮೊತ್ತ ಉದ್ಯೋಗಿಗಳ ಪಾಲಿಗೆ ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವಿನ ಖಾತೆ ಇದ್ದಂತೆ. ಇದೀಗ ಉದ್ಯೋಗಿ ಭವಿಷ್ಯ ನಿಧಿ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, ನೌಕರರ ಖಾತೆಗಳಿಗೆ (2021-22) ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಾರಂಭಿಸಲಿದೆ ಎಂದು ವರದಿಯಾಗಿದೆ.

ವರದಿಯಾಗಿದೆ

ಹೌದು, ಕೇಂದ್ರ ಸಂಸ್ಥೆಯು 2021-22 ರ ಬಡ್ಡಿದರಗಳನ್ನು ಕ್ರೆಡಿಟ್ ಮಾಡಲು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಫಲಾನುಭವಿಗಳು ತಮ್ಮ ಖಾತೆಗಳಲ್ಲಿ ಮೊತ್ತವನ್ನು ಎಂದು ನಿರೀಕ್ಷಿಸಬಹುದು. ಅಂದಹಾಗೆ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯು ಈ ವರ್ಷದ ಮಾರ್ಚ್‌ನಲ್ಲಿ 8.1 ಶೇಕಡಾ ಬಡ್ಡಿದರವನ್ನು ನೀಡುವುದಾಗಿ ಘೋಷಿಸಿತ್ತು.

ಇಪಿಎಫ್‌ಒ ಬಡ್ಡಿ

ಸಂಸ್ಥೆಯು ಕಳೆದ ತಿಂಗಳ ಅಕ್ಟೋಬರ್ 31 ರಂದು, ಇಪಿಎಫ್‌ಒ ಬಡ್ಡಿಯನ್ನು ಕ್ರೆಡಿಟ್ ಮಾಡುವ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದೆ ಆದರೆ ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದೆ. ಉದ್ಯೋಗಿ ಭವಿಷ್ಯ ನಿಧಿ (EPFO) ಖಾತೆಗಳಿಗೆ ಬಡ್ಡಿಯನ್ನು ಜಮಾ ಆಗಿದೆಯಾ ಚೆಕ್ ಮಾಡಿ ನೋಡಿ. ನಿಮ್ಮ ಪಿಎಫ್‌ ಖಾತೆಯ ಪಾಸ್‌ಬುಕ್‌ (PassBook) ಚೆಕ್ ಮಾಡಲು ಈ ಮುಂದಿನ ಕ್ರಮಗಳನ್ನು ಅನುಸರಿಸಿ.

PF ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:

PF ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:

* ಅಧಿಕೃತ EPFO ವೆಬ್‌ಸೈಟ್‌ಗೆ ಭೇಟಿ ನೀಡಿ epfindia.gov.in.
* ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ಉಲ್ಲೇಖಿಸಲಾದ 'ಸರ್ವೀಸ್‌' ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದ ಅಡಿಯಲ್ಲಿ, 'ಉದ್ಯೋಗಿಗಳಿಗಾಗಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ, ಹೊಸ ಪೇಜ್ ತೆರೆಯುತ್ತೆ, 'ಸರ್ವೀಸ್‌' ಆಯ್ಕೆಯಲ್ಲಿ ಕಾಣಿಸುವ 'ಸದಸ್ಯ ಪಾಸ್‌ಬುಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* 'ಸದಸ್ಯ ಪಾಸ್‌ಬುಕ್' ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್‌ಗೆ ನಿರ್ದೇಶಿಸಲಾಗುತ್ತದೆ.
* ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್‌ಗೆ ಉತ್ತರಿಸಿ. ನಂತರ 'ಲಾಗಿನ್' ಕ್ಲಿಕ್ ಮಾಡಿ.
* ಇದರ ನಂತರ, ಚಂದಾದಾರರನ್ನು ಮುಖ್ಯ EPF ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ಮಾಹಿತಿ ಕಾಣಬಹುದು.

ಎಸ್‌ಎಮ್‌ಎಸ್‌ ಮೂಲಕ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ?

ಎಸ್‌ಎಮ್‌ಎಸ್‌ ಮೂಲಕ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ?

ಪ್ರತಿಯೊಬ್ಬ EPFO ​​ಸದಸ್ಯರು ತಮ್ಮದೆ UAN ( ಸಾರ್ವತ್ರಿಕ ಖಾತೆ ಸಂಖ್ಯೆ) ಹೊಂದಿದ್ದಾರೆ. PF ಖಾತೆಯ ಬಾಕಿಯನ್ನು ತಿಳಿಯಲು, ನೌಕರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಯಿಂದ 7738299899 ಗೆ ' EPFOHO UAN ENG ' ಗೆ SMS ಕಳುಹಿಸಬಹುದು. ಈ ಮೂಲಕ ನೌಕರರು ಅವರ ಪಿಎಫ್‌ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ. ಉಮಂಗ್ ಆಪ್ ಮೂಲಕವು ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದು.

EPFOನ ವೆಬ್​​ಸೈಟ್ ಮೂಲಕ ಹಣ ಪಡೆದುಕೊಳ್ಳಲು ಈ ಕ್ರಮ ಅನುಸರಿಸಿ:

EPFOನ ವೆಬ್​​ಸೈಟ್ ಮೂಲಕ ಹಣ ಪಡೆದುಕೊಳ್ಳಲು ಈ ಕ್ರಮ ಅನುಸರಿಸಿ:

ಹಂತ 1. ಮೊದಲು epfindia.gov.inಗೆ ಲಾಗಿನ್ ಮಾಡಿ.
ಹಂತ 2. ವೆಬ್​ಸೈಟ್​ನ ಮುಖಪುಟದ ಬಲ ಮೂಲೆಯಲ್ಲಿ ಆನ್​ಲೈನ್ ಮುಂಗಡ ಕ್ಲೈಮ್​​ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಹಂತ 3. ಸೇವೆಗಳಿಗೆ ಹೋಗಿ, ಕ್ಲೈಮ್ ಫಾರ್ಮ್-31,19,10C ಮತ್ತು 10D ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ನಂಬರ್​ ನಮೂದಿಸಿ, ಪರಿಶೀಲನೆ ಮಾಡಬೇಕು.

ಕ್ಲೈಮ್

ಹಂತ 4. ಆನ್​ಲೈನ್​ ಕ್ಲೈಮ್​ಗಾಗಿ ಮುಂದುವರಿಕೆ ಕ್ಲಿಕ್ ಮಾಡ್ಬೇಕು. ಇದಾದ ಬಳಿಕ ಪಿಎಫ್ ಅಡ್ವಾನ್ಸ್​ ಆಯ್ಕೆ ಮಾಡಿ, ಹಣ ಪಡೆದುಕೊಳ್ಳುವ ಕಾರಣ ನಮೂದಿಸಬೇಕು.
ಹಂತ 5. ಇದಾದ ಬಳಿಕ ನಿಮಗೆ ಬೇಕಾದ ಮೊತ್ತ ಭರ್ತಿ ಮಾಡಿ, ಚೆಕ್​ನ ಸ್ಕ್ಯಾನ್ ಮಾಡಿದ ಪ್ರತಿ ಅಪ್ಲೋಡ್ ಮಾಡಬೇಕು.
ಹಂತ 6. ಅರ್ಜಿದಾರನ ಪೂರ್ಣ ವಿಳಾಸ ನೀಡುವುದು ಕಡ್ಡಾಯ.

OTP

ಹಂತ 7. ಗೆಟ್​ ಆಧಾರ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಆಧಾರ್​ ಕಾರ್ಡ್​​ಗೆ ನೋಂದಣಿ ಮಾಡಿರುವ ಮೊಬೈಲ್​ ನಂಬರ್​ಗೆ ಬರುವ OTP ನಮೂದಿಸಬೇಕು.
ಹಂತ 8. ಇದಾದ ಬಳಿಕ ಒಂದು ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಇದರ ಜೊತೆಗೆ UMANG ವೆಬ್​​ಸೈಟ್ ಮೂಲಕ ಹಣ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
EPFO to Credit Interest to PF Accounts Soon: Details Here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X