Home
ಸುದ್ದಿಜಾಲ

ಇ-ಶ್ರಮ ಪೋರ್ಟಲ್‌ನಲ್ಲಿ ಹೊಸ ಫೀಚರ್ಸ್: ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ!

ಭಾರತ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ಅನ್ನು ನಿರ್ವಹಿಸುವ ಉದ್ದೇಶದಿಂದ ಇ-ಶ್ರಮ ಪೋರ್ಟಲ್ ಅನ್ನು ಈ ಹಿಂದೆಯೇ ಪರಿಚಯಿಸಲಾಗಿದ್ದು, ಇದೀಗ ಈ ಪೋರ್ಟಲ್‌ನಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ ಮಾಡಲಾಗಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ.

ಹೌದು, ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು ಇ-ಶ್ರಮ ಪೋರ್ಟಲ್‌ನಲ್ಲಿ (eShram portal) ಹೊಸ ಫೀಚರ್ಸ್‌ಗಳಿಗೆ ಚಾಲನೆ ನೀಡಿದ್ದು, ಮಕ್ಕಳ ಶಿಕ್ಷಣ ಮತ್ತು ಮಹಿಳಾ ಕೇಂದ್ರಿತ ಯೋಜನೆಗಳ ಪ್ರಯೋಜನವನ್ನು ಇದು ಒದಗಿಸಲಿದೆ. ಇದಿಷ್ಟೇ ಅಲ್ಲದೆ ಉದ್ಯೋಗಾವಕಾಶಗಳು, ಕೌಶಲ್ಯ, ಶಿಷ್ಯವೃತ್ತಿ, ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಇ-ಶ್ರಮ ಪೋರ್ಟಲ್‌ನಲ್ಲಿ ಹೊಸ ಫೀಚರ್ಸ್: ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ!

ಇ-ಶ್ರಮ ಪೋರ್ಟಲ್‌ನಲ್ಲಿನ ಹೊಸ ಫೀಚರ್ಸ್‌ ಏನು?: ಇ ಶ್ರಮ ಪೋರ್ಟಲ್‌ನಲ್ಲಿ ಈಗಾಗಲೇ ಅಸಂಘಟಿತ ಕಾರ್ಮಿಕರ ಸಂಬಂಧ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತಿದ್ದವು. ಹಾಗೂ ಅವರಿಗೆ ಅಗತ್ಯವಾದ ಸರ್ಕಾರಿ ಯೋಜನೆಗಳ ವಿವರ ಸಹ ಇತ್ತು. ಆದರೆ, ಅವರಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದಾಗಿ ಈ ಫೀಚರ್ಸ್‌ ಸೇರಿಸಲಾಗಿದ್ದು, ಅಸಂಘಟಿತ ಕಾರ್ಮಿಕರ ನೋಂದಣಿಯನ್ನು ಇದು ಸುಲಭಗೊಳಿಸುತ್ತದೆ ಎಂದು ತಿಳಿದುಬಂದಿದೆ.

ಹಾಗೆಯೇ ವಲಸೆ ಕಾರ್ಮಿಕರ ಕುಟುಂಬದ ವಿವರಗಳನ್ನು ಸೆರೆಹಿಡಿಯುವ ಫೀಚರ್ಸ್‌ ಅನ್ನು ಲಭ್ಯವಾಗಿಸಿದ್ದು, ಅವರ ಮಕ್ಕಳ ಶಿಕ್ಷಣ ಮತ್ತು ಮಹಿಳಾ ಕೇಂದ್ರಿತ ಯೋಜನೆಗಳ ಪ್ರಯೋಜನವನ್ನು ಇದು ನೀಡಲಿದೆ. ಹಾಗೂ ಉದ್ಯೋಗಾವಕಾಶಗಳು, ಕೌಶಲ್ಯ, ಶಿಷ್ಯವೃತ್ತಿ, ಪಿಂಚಣಿ ಯೋಜನೆ, ಡಿಜಿಟಲ್ ಕೌಶಲ್ಯ ಮತ್ತು ರಾಜ್ಯಗಳ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ತಿಳಿಸಲಾಗಿದೆ.

ಇದರೊಂದಿಗೆ ಇ-ಶ್ರಮ ಫಲಾನುಭವಿಗಳ ಡೇಟಾವನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸುರಕ್ಷಿತ ರೀತಿಯಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಇನ್ನೂ ಈ ವ್ಯಾಪ್ತಿಯೊಳಗೆ ಬಾರದ ನೋಂದಣಿದಾರರನ್ನು ಗುರುತಿಸಲು ಡೇಟಾದ ಮ್ಯಾಪಿಂಗ್ ಕಾರ್ಯವನ್ನೂ ಪ್ರಾರಂಭಿಸಿದೆ. ಹಾಗಿದ್ರೆ, ಇದರಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುವುದು ಎಂಬುದನ್ನು ಹಂತಹಂತವಾಗಿ ತಿಳಿಯೋಣ ಬನ್ನಿ.

ಹಂತ 1 : ಇ-ಶ್ರಮದಲ್ಲಿ ನೋಂದಣಿ ಮಾಡಿಕೊಳ್ಳಲು ಮೊದಲು ಇ-ಶ್ರಮ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://eshram.gov.in/ ಲಿಂಕ್ ಅನ್ನು ಬಳಕೆ ಮಾಡಬಹುದು. ಬಳಿಕ 'ಇ-ಶ್ರಮ‌ನಲ್ಲಿ ನೋಂದಣಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಇ-ಶ್ರಮ ಪೋರ್ಟಲ್‌ನಲ್ಲಿ ಹೊಸ ಫೀಚರ್ಸ್: ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ!

ಹಂತ 2: ಇದಾದ ನಂತರ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಫೋನ್ ಸಂಖ್ಯೆಯನ್ನು ಅಗತ್ಯ ಸ್ಥಳದಲ್ಲಿ ಭರ್ತಿ ಮಾಡಬೇಕು. ಬಳಿಕ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸೆಂಡ್‌ ಓಟಿಪಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇದರಲ್ಲಿ ನಿಮಯಗಳು ಕಾಣಿಸಿಕೊಳ್ಳುತ್ತವೆ ಅದನ್ನು ಸರಿಯಾಗಿ ಓದಿಕೊಂಡು ಮುಂದುವರೆಬೇಕು.

ಹಂತ 3: ಈ ವಿಭಾಗದಲ್ಲಿ ನೀವು ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದರ ಜೊತೆಗೆ ವಿವಿಧ ದಾಖಲೆಗಳನ್ನೂ ಸಹ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇದೆಲ್ಲಾ ಆದ ನಂತರ ಅರ್ಜಿ ಸಲ್ಲಿಸಿ ಮೇಲೆ ಕ್ಲಿಕ್‌ ಮಾಡಿ. ನಂತರ ನಿಮಗೆ ಅಗತ್ಯವಾಗಿ ಬೇಕಾದ ಅರ್ಜಿಯನ್ನು ಪ್ರಿಂಟ್‌ ಮಾಡಿ ನಿಮ್ಮಲ್ಲಿ ಇರಿಸಿಕೊಳ್ಳಿ. ಇಷ್ಟು ಹಂತಗಳನ್ನು ಅನುಸರಿಸಿದರೆ ನಿಮ್ಮ ನೋಂದಣಿ ಪ್ರಕ್ರಿಯೆ ಮುಗಿದಂತೆ.

ಯಾರೆಲ್ಲಾ ನೋಂದಣಿ ಮಾಡಬಹುದು?: ಇ-ಶ್ರಮ‌ ದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರೆ 15 ವರ್ಷ ತುಂಬಿರಬೇಕು ಹಾಗೂ 59 ಮೀರಿರಬಾರದು. ಇದರೊಂದಿಗೆ ನಿಮ್ಮ ಹೆಸರು ಹಾಗೂ ವಿವರ ಇಪಿಎಫ್ಓ, ಇಎಸ್‌ಐಸಿ ಅಥವಾ ಎನ್‌ಪಿಎಸ್‌ ನಲ್ಲಿ ಇರಬಾರದು. ಅಂದರೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಇ-ಶ್ರಮ ಪೋರ್ಟಲ್‌ನಲ್ಲಿ ಹೊಸ ಫೀಚರ್ಸ್: ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ!

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ರಚಿಸಲು 26 ನೇ ಆಗಸ್ಟ್ 2021 ರಂದು ಇ-ಶ್ರಮ ಪೋರ್ಟಲ್ ಅನ್ನು ಆರಂಭಿಸಿತ್ತು. ಅಂದಿನಿಂದ ಈವರೆಗೆ ಅಂದರೆ, 21 ಏಪ್ರಿಲ್ 2023 ರವರೆಗೆ 28.87 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದು, ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇದರಿಂದ ಪ್ರಯೋಜನ ಏನು?: ಮೇಲೆ ತಿಳಿಸಿದ ಸರ್ಕಾರಿ ಸೌಲಭ್ಯಗಳೊಂದಿಗೆ ಇ-ಶ್ರಮ ಕಾರ್ಡ್ ಹೊಂದಿರುವ ಅಸಂಘಟಿತ ಕಾರ್ಮಿಕರು 60 ವರ್ಷ ಪೂರೈಸಿದ ನಂತರ ತಿಂಗಳಿಗೆ 3,000ರೂ. ಗಳನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ. ಹಾಗೆಯೇ 2,00,000ರೂ.ಗಳ ಮರಣ ವಿಮೆ ಮತ್ತು ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ 1,00,000ರೂ.ಗಳ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಹಲವು ಸೌಲಭ್ಯ ಸಹ ಲಭ್ಯ.

Best Mobiles in India

English summary
Union Labor Minister Bhupender Yadav launched new features on the eShram portal. It will further benefit child education and women centric projects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+