ರೈಲುಗಳಲ್ಲಿ ಲಭ್ಯವಾಗಲಿದೆ ಉಚಿತ ವೈಫೈ ಸೇವೆ!

|

ಭಾರತ ಸರ್ಕಾರ ಇನ್ನು ನಾಲ್ಕೈದು ವರ್ಷಗಳಲ್ಲಿ ದೇಶದ ಪ್ರತಿ ರೈಲುಗಳಲ್ಲಿ ವೈಫೈ ಸೇವೆಯನ್ನು ನೀಡುವ ಯೋಜನೆ ಮಾಡಿದೆ. ಮತ್ತು ಇದರ ಜೊತೆಗೆ ಮುಂದಿನ ಐದು ವರ್ಷದಲ್ಲಿ ಭಾರತೀಯ ರೈಲ್ವೆಯನ್ನು ಶೇ.100% ಸಂಪೂರ್ಣ ಇಲೆಕ್ಟ್ರಿಕ್ ಮಾಡುವ ಯೋಜನೆ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.

ವೈಫೈ ಸೇವೆ

ಚಲಿಸುವ ರೈಲುಗಳಲ್ಲಿ ವೈಫೈ ಸೇವೆಯನ್ನು ನೀಡುವುದು ಸುಲುಭದ ತಂತ್ರಜ್ಞಾನವಲ್ಲ. ಈ ಸೇವೆಯನ್ನು ಜಾರಿಗೆ ತರಲು ಸಾಕಷ್ಟು ಬಂಡಾವಾಳ ಅಗತ್ಯವಾಗುತ್ತದೆ. ವೈಫೈ ಸೇವೆ ಲಭ್ಯತೆಗಾಗಿ ರೈಲುಗಳಲ್ಲಿ ಅಗತ್ಯ ಟವರ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದಕ್ಕಾಗಿ ವಿದೇಶಿ ತಂತ್ರಜ್ಞಾನದ ಅಗತ್ಯವಿದ್ದು, ಹಾಗೆಯೇ ವಿದೇಶಿ ಹೂಡಿಕೆದಾರರನ್ನು ನಿಯೋಜಿಸುವ ಪ್ಲ್ಯಾನ್ ಇದೆ ಎಂದು ಅವರು ತಿಳಿಸಿದ್ದಾರೆ.

ಸಿಸಿಟಿವಿ (CCTV)

ಮುಂದಿನ ಐದು ವರ್ಷಗಳಲ್ಲಿ ರೈಲಿನ ಪ್ರತಿ ಭೋಗಿಯಲ್ಲಿಯೂ ಸಿಸಿಟಿವಿ (CCTV) ಕ್ಯಾಮೆರಾ ಅಳವಡಿಸುವ ಯೋಜನೆವು ಸಹ ಇದೆ. ರೈಲಿನಲ್ಲಿ ವೈಫೈ ಅಳವಡಿಕೆಯ ಮಾಡುವುದರಿಂದ ಸಿಸಿಟಿವಿ ಕ್ಯಾಮೆರಾಗಳಿಗೆ ಅತ್ಯುತ್ತಮ ಸಿಗ್ನಲ್ ಸಹ ಲಭ್ಯವಾಗಲಿದೆ. ಇನ್ನು ಸಿಸಿಟಿವಿ ಕ್ಯಾಮೆರಾಗಳು ಲೈವ್ ಪುಟೇಜ್‌ ಪೋಲಿಸ್‌ ಸ್ಟೇಷನ್‌ನಲ್ಲಿ ಕಾಣುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅನ್ನುವ ಅಂಶಗಳನ್ನು ಹೇಳಿದ್ದಾರೆ.

ರೈಲ್ವೆ ಸ್ಟೇಷನ್‌

ಕೇಲವು ರೈಲ್ವೆ ಸ್ಟೇಷನ್‌ಗಳಲ್ಲಿ ಈಗಾಗಾಲೇ ವೈಫೈ ಸೌಲಭ್ಯ ಕಲ್ಪಿಸಲಾಗಿದ್ದು, ಬರುವ 2020 ವರ್ಷದಲ್ಲಿ ಇನ್ನು ಹೆಚ್ಚಿನ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ವಿಸ್ತರಿಸುವ ಯೋಜನೆಗಳನ್ನು ಇವೆ. ಪ್ರಸ್ತುತ 5150 ರೈಲ್ವೆ ನಿಲ್ದಾಣಗಳು ವೈಫೈ ಸಂಪರ್ಕ ಪಡೆದಿದ್ದು, ಮುಂದಿನ ವರ್ಷದ ವೇಳೆಗೆ ಸುಮಾರು 6,500 ರೈಲ್ವೆ ನಿಲ್ದಾಣಗಳಿಗೆ ವೈಫೈ ಸೇವೆಯನ್ನು ಒದಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

NBCC

ಕೇಂದ್ರ ಸರ್ಕಾರವು ರೈಲ್ವೆ ನಿಲ್ದಾಣಗಳಿಗೆ ಮಾಡರ್ನ ಸ್ಪರ್ಶ ನೀಡಲು ಮುಂದಾಗಿದ್ದು, ಭೂಪಾಲ್‌ ನಿಲ್ದಾಣದಂತೆ ಈಗಾಗಲೇ NBCCಯು (National Buildings Construction Corporation) ಸುಮಾರು 12-13 ರೈಲ್ವೆ ನಿಲ್ದಾಣಗಳ ಮಾಡರ್ನ್ ಟಚ್‌ ನೀಡುವ ಕಾರ್ಯದಲ್ಲಿ ತೊಡಗಿದೆ. ಹಾಗೆಯೇ ನಿಲ್ದಾಣಗಳು ಕಾಂಪ್ಲೆಕ್ಸ್ ಮಾದರಿಯಲ್ಲಿರಲಿದ್ದು, ವಾಣಿಜ್ಯ ಮಳಿಗೆ, ಶಾಪಿಂಗ್ ಮಾಲ್, ಹಾಗೂ ಇತರೆ ಸೌಲಭ್ಯಗಳನ್ನು ಹೊಂದಿರಲಿವೆ.

Best Mobiles in India

English summary
Government of India is planning to provide Wi-Fi services inside trains in the next four to four-and-a-half years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X