Subscribe to Gizbot

ರಾಜ್ಯ ಚುನಾವಣೆ: ಸೋತ ಮೇಲೆ EVM ಹ್ಯಾಕ್ ಆಗಿದೆ ಅನ್ನೋ ಹಾಗೇ ಇಲ್ಲ..!

Written By:

ರಾಜ್ಯ ವಿಧಾನಸಭೆ ಚುನಾವಣೆಯೂ ಹತ್ತಿರ ಬರುತ್ತಿದ್ದು, ಮೇ 12ರಂದು ನಡೆಯಲಿರುವ ಮತದಾನ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಚುನಾವಣಾ ಆಯೋಗವು ದಕ್ಷವಾಗಿ, ಪಾರದರ್ಶಕವಾಗಿ ಚುನಾವಣೆಯನ್ನು ನಡೆಸುವ ಸಲುವಾಗಿ ಈ ಬಾರಿ ಇವಿಎಂ ಯಂತ್ರವನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದರೊಂದಿಗೆ ವಿವಿಪ್ಯಾಟ್ (ಮತ ಖಾತರಿ ಯಂತ್ರ)ವನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ರಾಜ್ಯ ಚುನಾವಣೆ: ಸೋತ ಮೇಲೆ EVM ಹ್ಯಾಕ್ ಆಗಿದೆ ಅನ್ನೋ ಹಾಗೇ ಇಲ್ಲ..!

ವಿವಿಧ ರಾಜಕೀಯ ಪಕ್ಷಗಳು ಈ ಯಂತ್ರಗಳ ಬಳಕೆಯ ಕುರಿತು ಅನುಮಾನವನ್ನು ವ್ಯಕ್ತಪಡಿಸಿವೆ, ಅಲ್ಲದೇ ಕಳೆದ ಕೆಲವು ಚುನಾವಣೆಗಳಲ್ಲಿ ಸೋತ ಮೇಲೆ ಇವಿಎಂ ಹ್ಯಾಕ್ ಆಗಿದೆ ಎನ್ನುವ ವಾದವನ್ನು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮತದಾನದಲ್ಲಿ ಬಳಕೆಯಾಗುತ್ತಿರುವ ಸಿಂಪಲ್ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಓದಿರಿ: ಕೊನೆಗೂ ಫ್ಲಿಪ್‌ಕಾರ್ಟ್‌ ಖರೀದಿಸಿದ ವಾಲ್‌ಮಾರ್ಟ್: ಮಾರಾಟವಾದ ಬೆಲೆ ಎಷ್ಟು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇವಿಎಂ ಮತ್ತು ವಿವಿಪ್ಯಾಟ್:

ಇವಿಎಂ ಮತ್ತು ವಿವಿಪ್ಯಾಟ್:

ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿಪ್ಯಾಟ್) ಈ ಬಾರಿ ರಾಜ್ಯದ 224 ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಬಳಸಲಾಗುತ್ತಿದ್ದು, ಈ ಹಿಂದೆ ನಡೆದಂತಹ ಉಪಚುನಾವಣೆಗಳಲ್ಲಿ ಇದನ್ನು ಚುನಾವಣಾ ಆಯೋಗವು ಯಶಸ್ವಿಯಾಗಿ ಈ ಯಂತ್ರಗಳನ್ನು ಬಳಕೆ ಮಾಡಿದೆ ಎನ್ನಲಾಗಿದೆ. ಇವುಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ಈಗಾಗಲೇ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದೆ.

ಮೊದಲ ಬಾರಿಗೆ ವಿವಿಪ್ಯಾಟ್

ಮೊದಲ ಬಾರಿಗೆ ವಿವಿಪ್ಯಾಟ್

ದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ವನ್ನು ಹ್ಯಾಕ್ ಮಾಡಲಾಗಿತ್ತು ಎಂದು ವಿವಿಧ ರಾಜಕೀಯ ಪಕ್ಷಗಳು ‍ದೂರಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿಪ್ಯಾಟ್) ಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲು ಮುಂದಾಗಿದೆ.

ವಿವಿ ಪ್ಯಾಟ್ ಉಪಯೋಗ:

ವಿವಿ ಪ್ಯಾಟ್ ಉಪಯೋಗ:

ಮತದಾರಿಗೆ ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಸಂದೇಹ ನಿವಾರಿಸಿ, ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ವಿವಿ ಪ್ಯಾಟ್ ಸಹಾಯವನ್ನು ಮಾಡಲಿದೆ.

ಮುದ್ರಿತ ಪ್ರತಿ:

ಮುದ್ರಿತ ಪ್ರತಿ:

ಮತದಾರರು ಮತ ಚಲಾಯಿಸಿದ ನಂತರದಲ್ಲಿ ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ತಮ್ಮ ಮತ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯಲ್ಲಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ ತಾವು ಒತ್ತಿದ್ದು ಮತ್ತು ಅಲ್ಲಿ ಮುದ್ರಿತವಾಗಿರುವುದು ಒಂದೆ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

7 ಸೆಕೆಂಡ್ ವರೆಗೂ ಲಭ್ಯ:

7 ಸೆಕೆಂಡ್ ವರೆಗೂ ಲಭ್ಯ:

ಮತ ಚಲಾಯಿಸಿದ ನಂತರದಲ್ಲಿ ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ತಮ್ಮ ಮತ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ನಲ್ಲಿ ಮುದ್ರಿತವಾಗಿ 7 ಸೆಕೆಂಡುಗಳವರೆಗೆ ಮತದಾರರ ವೀಕ್ಷಣೆಗೆ ಲಭ್ಯವಿರಲಿದೆ. ಮುದ್ರಿತ ಪ್ರತಿಯನ್ನು ನೋಡಬಹುದೇ ವಿನಹಃ ಮುದ್ರಿತವಾಗುವ ಪ್ರತಿಯನ್ನು ಪಡೆಯಲು ಅವಕಾಶವಿರುವುದಿಲ್ಲ.

ಸ್ವಯಂಚಾಲಿತ ಪ್ರಿಂಟರ್

ಸ್ವಯಂಚಾಲಿತ ಪ್ರಿಂಟರ್

ವಿವಿಪ್ಯಾಟ್ ನಲ್ಲಿ ಸ್ವಯಂಚಾಲಿತ ಪ್ರಿಂಟರ್ ಇದ್ದು, ಮತದಾರ ಬಟನ್ ಒತ್ತಿದ ಕೂಡಲೇ ಮತದಾರ ಹಾಗೂ ಅಭ್ಯರ್ಥಿಯ ಹೆಸರಿರುವ ಚೀಟಿ ಬರುತ್ತದೆ. ಒಂದು ವೇಳೆ ಮತ ಎಣಿಕೆ ಸಂಧರ್ಭದಲ್ಲಿ ಗೊಂದಲ ಉಂಟಾದರೆ ಮಾತ್ರ ವಿವಿಪ್ಯಾಟ್ ಹಾಗೂ ಇವಿಎಂ ಮತದಾನದ ಸಾಮ್ಯತೆ ಪರಿಶೀಲಿಸುವ ಅವಕಾಶವು ಇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
evm machine in Karnataka elections 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot