Home
ಸುದ್ದಿಜಾಲ

300Mbpsನ ಈ ಬ್ರಾಡ್‌ಬ್ಯಾಂಡ್‌ ಯೋಜನೆ ಈಗ ಆಕರ್ಷಕ ಬೆಲೆಯಲ್ಲಿ ಲಭ್ಯ!

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಎಕ್ಸ್‌ಟೆಲ್‌ (Excitel) ಸಹ ಪ್ರಮುಖ ಇಂಟರ್ನೆಟ್‌ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಭಿನ್ನ ಶ್ರೇಣಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡಿದೆ. ಇದೀಗ ಎಕ್ಸ್‌ಟೆಲ್‌ ಸಂಸ್ಥೆಯು ತನ್ನ 300 Mbps ಯೋಜನೆಯಲ್ಲಿ ಬದಲಾವಣೆ ಮಾಡಿದ್ದು, ಸದ್ದಿಲ್ಲದೆ ಆರಂಭಿಕ ಕೊಡುಗೆ ನೀಡಿದೆ.

ಸಂಸ್ಥೆಯು

ಹೌದು, ಎಕ್ಸ್‌ಟೆಲ್‌ (Excitel) ಸಂಸ್ಥೆಯು ಆನ್‌ಬೋರ್ಡಿಂಗ್‌ ಶುಲ್ಕವನ್ನು (onboarding charges) ತೆಗೆದುಹಾಕಿದ್ದು, ಹೀಗಾಗಿ 300 Mbps ಯೋಜನೆಯು 600ರೂ. ಗಳ ಒಳಗೆ ಲಭ್ಯವಾಗಲಿದೆ. ಹಾಗೆಯೇ ಎಕ್ಸ್‌ಟೆಲ್‌ 200 Mbps, 300Mbps ಮತ್ತು 400Mbps ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಈ ಕೊಡುಗೆಯ ಮೂಲಕ ಎಕ್ಸ್‌ಟೆಲ್‌ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಹೆಜ್ಜೆಗಳನ್ನು ಹಾಕಿದೆ. ಈ ಬಗ್ಗೆ ಇನ್ನಷ್ಟು ಹಾಗೂ ಇತರೆ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಎಕ್ಸ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳು

ಎಕ್ಸ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳು

ಎಕ್ಸ್‌ಟೆಲ್‌ 200 Mbps ಯೋಜನೆಯು ಮೂರು ತಿಂಗಳ, ಆರು ತಿಂಗಳ, ಒಂಬತ್ತು ತಿಂಗಳ ಹಾಗೂ ಹನ್ನೇರಡು ತಿಂಗಳ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಉಳಿದಂತೆ ಆಡ್‌ ಆನ್‌ನಲ್ಲಿ ಅಮೆಜಾನ್‌ ಪ್ರೈಮ್‌, ಸೋನಿ ಲೈವ್, ಜೀ5, ವೂಟ್‌ ಸೆಲೆಕ್ಟ್‌ ನಂತಹ ಓಟಿಟಿ ಪ್ಲಾಟ್‌ಫಾರ್ಮ್ ಆಯ್ಕೆಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಅದೇ ರೀತಿ ಎಕ್ಸ್‌ಟೆಲ್‌ 300 Mbps ಮತ್ತು 400 Mbps ಯೋಜನೆಯ ಸಹ ಮೂರು ತಿಂಗಳ, ಆರು ತಿಂಗಳ, ಒಂಬತ್ತು ತಿಂಗಳ ಹಾಗೂ ಹನ್ನೇರಡು ತಿಂಗಳ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಉಳಿದಂತೆ ಆಡ್‌ ಆನ್‌ನಲ್ಲಿ ಅಮೆಜಾನ್‌ ಪ್ರೈಮ್‌, ಸೋನಿ ಲೈವ್, ಜೀ5, ವೂಟ್‌ ಸೆಲೆಕ್ಟ್‌ ನಂತಹ ಓಟಿಟಿ ಪ್ಲಾಟ್‌ಫಾರ್ಮ್ ಆಯ್ಕೆಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಜಿಯೋ ಪ್ಲಾನ್‌ 399 ರೂ. ಯೋಜನೆ

ಜಿಯೋ ಪ್ಲಾನ್‌ 399 ರೂ. ಯೋಜನೆ

ರಿಲಯನ್ಸ್ ಜಿಯೋ ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್‌ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ.

ಜಿಯೋ ಫೈಬರ್‌ 699ರೂ. ಯೋಜನೆ

ಜಿಯೋ ಫೈಬರ್‌ 699ರೂ. ಯೋಜನೆ

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100 mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಜಿಯೋ ಫೈಬರ್‌ 999ರೂ. ಯೋಜನೆ

ಜಿಯೋ ಫೈಬರ್‌ 999ರೂ. ಯೋಜನೆ

ಜಿಯೋ ಫೈಬರ್‌ 999ರೂ. ಪ್ಲಾನ್‌ನಲ್ಲಿ ನೀವು 150 mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್ ಎಕ್ಸ್‌ಟ್ರೀಮ್ 499 ರೂ. ಯೋಜನೆ

ಏರ್‌ಟೆಲ್ ಎಕ್ಸ್‌ಟ್ರೀಮ್ 499 ರೂ. ಯೋಜನೆ

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್‌ 499 ರೂ ಬೆಲೆಯಲ್ಲಿ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಪ್ಲಾನ್ ಹೊಂದಿದೆ. ಈ ಬ್ರಾಡ್‌ಬ್ಯಾಂಡ್ ಪ್ಲಾನ್‌ ಬಳಕೆದಾರರಿಗೆ 40Mbps ವೇಗದಲ್ಲಿ 3.3TB ವರೆಗೆ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನ ನೀಡಲಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ 799 ರೂ.ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100Mbps ವೇಗದೊಂದಿಗೆ ಅನಿಯಮಿತ ಡೇಟಾ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ FASTag ಕ್ಯಾಶ್‌ಬ್ಯಾಕ್ ಆಫರ್‌ ಮತ್ತು ವಿಂಕ್‌, ಅಪೋಲೋ, ಎಕ್ಸ್‌ಟ್ರಿಮ್‌ ಪ್ರಿಮೀಯಂಗೆ ಪ್ರವೇಶ ದೊರೆಯಲಿದೆ.

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.

Best Mobiles in India

English summary
This 300Mbps Broadband Plan now available at offer price. should you buy it?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+