ಬಿಡುಗಡೆ ಆಯ್ತು ಹೊಸ ಬ್ರಾಡ್‌ಬ್ಯಾಂಡ್ ಪ್ಲ್ಯಾನ್; ವೇಗದ ಡೇಟಾ ಮತ್ತು ಓಟಿಟಿ ಲಭ್ಯ!
ಎಕ್ಸಿಟೆಲ್ (Excitel) ಭಾರತದ ಅತಿದೊಡ್ಡ ಇಂಟರ್ನೆಟ್ ಸಂಪರ್ಕ/ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿದೆ. ಎಕ್ಸಿಟೆಲ್ ಸಂಸ್ಥೆಯು ಕೆಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಯೋಜನೆಗಳ ಮೂಲಕ ಜಿಯೋ, ಏರ್‌ಟೆಲ್, ಎಸಿಟಿ ಸಂಸ್ಥೆಗಳಿಗೆ ಪೈಫೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತಿದೆ. ಎಕ್ಸಿಟೆಲ್ ಕಂಪನಿಯು ಇದೀಗ ಅಗ್ಗದ ಬೆಲೆಯಲ್ಲಿ ಹೊಸದೊಂದು ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದ್ದು, ಅಚ್ಚರಿ ಮೂಡಿಸಿದೆ.
ಹೌದು, ಎಕ್ಸಿಟೆಲ್ (Excitel) ಸಂಸ್ಥೆಯು ನೂತನವಾಗಿ 599ರೂ. ಬೆಲೆಯ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾದ ಡಿಸ್ನಿ + ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆಯ ಪ್ರಯೋಜನ ಪಡೆದಿದೆ. ಹಾಗೆಯೇ ಇತರೆ ಆಕರ್ಷಕ ಪ್ರಯೋಜನಗಳನ್ನು ಈ ಯೋಜನೆಯ ಪಡೆದಿದೆ.

ಎಕ್ಸಿಟೆಲ್ ಕಂಪನಿಯ ಈ ಯೋಜನೆಯು 400 Mbps ಇಂಟರ್ನೆಟ್ ವೇಗ ಪಡೆದಿದ್ದು, 12 ಓಟಿಟಿ ಚಾನಲ್‌ಗಳಿಗೆ ಪ್ರವೇಶ ಪಡೆದಿದೆ. ಇದರೊಂದಿಗೆ ಸುಮಾರು 550 ಕ್ಕೂ ಅಧಿಕ ಟಿವಿ ಚಾನೆಲ್‌ಗಳನ್ನು ಈ ಯೋಜನೆಯು ಒಳಗೊಂಡಿರುವುದು ಈ ಪ್ಲ್ಯಾನಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಇತರೆ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಎಕ್ಸಿಟೆಲ್ ಸಂಸ್ಥೆಯ ಈ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಸುಮಾರು 12 ಓಟಿಟಿ ಚಾನಲ್‌ಗಳನ್ನು ಪಡೆದಿದ್ದು, ಅವುಗಳ ಬಗ್ಗೆ ಕಂಪನಿಯು ಬಹಿರಂಗಪಡಿಸಿಲ್ಲ. ಆದಾಗ್ಯೂ, ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಅವರು ಡಿಸ್ನಿ+ ಹಾಟ್‌ಸ್ಟಾರ್, ಜೀ5 ಓಟಿಟಿ, Alt ಓಟಿಟಿ, ಸೋನಿ ಲೈವ್ ಓಟಿಟಿ, ಹಂಗಾಮಾ ಪ್ಲೇ ಓಟಿಟಿ, ಹಂಗಾಮಾ ಮ್ಯೂಸಿಕ ಓಟಿಟಿ ಇರುವ ಲಿಸ್ಟ್ ಕಾಣಿಸಿದೆ.
ಹಾಗೆಯೇ Shemaroo, Hubhopper, ಫ್ಯಾನ್‌ಕೋಡ್, ಪ್ಲ್ಯಾನ್ ಡಿಸ್ಟ್ರೋ ಟಿವಿ, ಪ್ಲೇಬಾಕ್ಸ್ ಟಿವಿ ಮತ್ತು ಎಪಿಕ್ ಆನ್, ನಂತಹ ಜನಪ್ರಿಯ ಓಟಿಟಿ ತಾಣಗಳನ್ನು ಒಳಗೊಂಡಿರುವ 400 Mbps ವೇಗದ 'ದಿ ಕೇಬಲ್ ಕಟ್ಟರ್' ಎಂಬ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಅನ್ನು ಲಿಸ್ಟ್ ಮಾಡಿದ್ದಾರೆ. ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯ ಈ ಯೋಜನೆಯು ಸಹ ಇದೇ ರೀತಿಯ ಓಟಿಟಿ ಚಾನಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇತರೆ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ.
ಏರ್‌ಟೆಲ್ ಸಂಸ್ಥೆಯ 799ರೂ. ಬ್ರಾಡ್‌ಬ್ಯಾಂಡ್ ಯೋಜನೆ ಮಾಹಿತಿ : ಏರ್‌ಟೆಲ್ ಟೆಲಿಕಾಂನ 799 ರೂ. ಬ್ರಾಡ್‌ಬ್ಯಾಂಡ್ ಯೋಜನೆಯು 100 Mbps ಅನಿಯಮಿತ ಇಂಟರ್‌ನೆಟ್ ವೇಗವನ್ನು ಕೂಡ ಹೊಂದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಹಾಗೆಯೇ ಏರ್‌ಟೆಲ್‌ನ ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ವೈ-ಫೈ ರೂಟರ್ ಸಹ ಸಿಗಲಿದೆ.
ಜಿಯೋಫೈಬರ್‌ನ 399ರೂ. ಬ್ರಾಡ್‌ಬ್ಯಾಂಡ್ ಯೋಜನೆ ಮಾಹಿತಿ : ಜಿಯೋ ಸಂಸ್ಥೆಯ ಈ ಯೋಜನೆಯಲ್ಲಿ 30 mbps ಇಂಟರ್ನೆಟ್ ವೇಗ ದೊರೆಯಲಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಲಭ್ಯ. ಅಲ್ಲದೇ ಬಳಕೆದಾರರಿಗೆ 3,300 FUP ಡೇಟಾ ಮಿತಿಯನ್ನು ಸಹ ಲಭ್ಯವಾಗಲಿದೆ. ಆದರೆ ಈ ಯೋಜನೆಯು ಯಾವುದೇ ಓಟಿಟಿ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಒದಗಿಸುವುದಿಲ್ಲ.
ಜಿಯೋಫೈಬರ್‌ನ 699ರೂ. ಬ್ರಾಡ್‌ಬ್ಯಾಂಡ್ ಯೋಜನೆ ಮಾಹಿತಿ : ಜಿಯೋ ಕಂಪನಿಯ ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬಳಕೆದಾರರು ತಡರಹಿತ ಇಂಟರ್‌ನೆಟ್ ಪ್ರಯೋಜನ ಪಡೆಯಬಹುದಾಗಿದೆ. ಬಳಕೆದಾರರಿಗೆ ಇದರಲ್ಲಿ 100 Mbps ಇಂಟರ್ನೆಟ್ ವೇಗ ಲಭ್ಯವಾಗಲಿದೆ. ಅಂದಹಾಗೆ ಈ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಯಾವುದೇ ಅನಿಯಮಿತ ಕರೆ ಮತ್ತು ಯಾವುದೇ ಓಟಿಟಿ ಸದಸ್ಯತ್ವದ ಪ್ರಯೋಜನ ದೊರೆಯುವುದಿಲ್ಲ.
ಏರ್‌ಟೆಲ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ ಮಾಹಿತಿ : ಏರ್‌ಟೆಲ್ ಟೆಲಿಕಾಂ ಸಂಸ್ಥೆಯ 999ರೂ. ಬ್ರಾಡ್‌ಬ್ಯಾಂಡ್ ಯೋಜನೆಯು 200 Mbps ಅನಿಯಮಿತ ಇಂಟರ್‌ನೆಟ್ ವೇಗವನ್ನು ಕೂಡ ಪಡೆದುಕೊಂಡಿದೆ. ಇದಲ್ಲದೆ ಬಳಕೆದಾರರಿಗೆ ಇದರಲ್ಲಿ ಅನಿಯಮಿತ ಡೇಟಾ ಪ್ರಯೋಜನ ದೊರೆಯುತ್ತದೆ ಹಾಗೂ ಉಚಿತ ವೈ-ಫೈ ರೂಟರ್ ಸಹ ಸಿಗಲಿದೆ.


Click it and Unblock the Notifications








