ಸೆಲ್ಕೋನ್ ವಿನ್ 400 ಲಾಂಚ್ ನವೆಂಬರ್‌ನಲ್ಲಿ
ವಿಂಡೋಸ್ 8.1 ಉಳ್ಳ ಸ್ಮಾರ್ಟ್‌ಫೋನ್ ಅನ್ನು ಸೆಲ್ಕೋನ್ ಲಾಂಚ್ ಮಾಡುತ್ತಿದ್ದು ಇದರ ಹೆಸರು 'ವಿನ್ 400' ಎಂದಾಗಿದೆ. ವಿಂಡೋಸ್ ಆಧಾರಿತ ಹೊಸ ಫೋನ್‌ನ ಚಿತ್ರಗಳನ್ನು ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನೀಡಿದ್ದು ವಿನ್ 400 ಸ್ಮಾರ್ಟ್‌ಫೋನ್ ಅನ್ನು ಸೆಲ್ಕೋನ್ ಯಾವಾಗ ಲಾಂಚ್ ಮಾಡುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ನಾವು ಲೇಖನದಲ್ಲಿ ತೋರಿಸಿರುವ ಚಿತ್ರವು ಸೆಲ್ಕೋನ್ ವಿನ್ 400 ನದ್ದಾಗಿದೆ. ಇದು ಟಿಪ್‌ಸ್ಟರ್‌ನ ಇಮೇಜ್ ಎಂಬುದು ಕೆಲವೊಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಇದೇ ಸಮಯದಲ್ಲಿ, ಇನ್ನೊಂದು ಮೂಲದ ಪ್ರಕಾರ ಹೆಚ್ಚು ಆಕರ್ಷಕ ವಿಂಡೋಸ್ ಫೋನ್ ಅನ್ನು ನವೆಂಬರ್ 24 ರಂದು ಲಾಂಚ್ ಮಾಡಲಿದೆ. ಇದರ ನಿಖರವಾದ ಬೆಲೆ ಇನ್ನೂ ತಿಳಿದು ಬಂದಿಲ್ಲ ಹೆಚ್ಚಿನ ಮಾಹಿತಿಗಳನ್ನು ನಿಮಗೆ ಶೀಘ್ರದಲ್ಲಿ ನಾವು ತಿಳಿಸಲಿರುವೆವು.

ಇನ್ನು ಮೂಲಗಳ ಪ್ರಕಾರ ಡಿವೈಸ್ 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಇದು ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. 512 ಎಮ್‌ಬಿ ಅಥವಾ 1ಜಿಬಿ RAM ಅನ್ನು ಇದು ಪಡೆದುಕೊಂಡಿರಬಹುದು. ಇದು 5 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಮುಂಭಾಗ ಕ್ಯಾಮೆರಾ 0.3 ಎಮ್‌ಪಿಯಾಗಿದೆ. ಇನ್ನು ಈ ಹ್ಯಾಂಡ್‌ಸೆಟ್ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಕಾಲಿಡಲಿದ್ದು ಇದರ ಬೆಲೆ ಅಂದಾಜು ರೂ 7,000 ವಾಗಿರಬಹುದಾಗಿದೆ.
ಇದನ್ನೂ ಓದಿ: ವೈಫೈ ಪಾಸ್‌ವರ್ಡ್ ಅನ್ನು ಮರುಪಡೆದುಕೊಳ್ಳುವುದು ಹೇಗೆ?
ಹೊಸ ಸೆಲ್ಕೋನ್ ವಿನ್ 400 ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ಕೆಲವೊಂದು ದಿನಗಳಿಂದ ಮೊಬೈಲ್ ಕುರಿತು ದೊರೆಯುತ್ತಿರುವ ವ್ಯಾಪಕ ಮಾಹಿತಿ ಇದನ್ನು ಎದ್ದುಗಾಣಿಸುತ್ತಿದೆ. ಫೋನ್‌ನ ಹಿಂಭಾಗ ಚಿತ್ರವು ಸಪ್ಟೆಂಬರ್‌ನಲ್ಲಿ ನಮಗೆ ಲಭ್ಯವಾಗಿದ್ದು, ಆಸಕ್ತರಿಗೆ ಇದರ ಸಂಪೂರ್ಣ ಚಿತ್ರವು ದೊರೆತಿದೆ.
ಇನ್ನು ಕೆಲವೊಂದು ಮೂಲಗಳ ಪ್ರಕಾರ, ಸೆಲ್ಕೋನ್ 5.5 ಇಂಚಿನ ಫ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುವ ನಿರ್ಧಾರಲಿದ್ದು, ನವೆಂಬರ್ 28 ಕ್ಕೆ ಇದು ನಡೆಯುವ ಸಾಧ್ಯತೆ ಇದೆ. ಇದರ ಲಾಂಚ್ ದೆಹಲಿಯಲ್ಲಿ ನಡೆಯಲಿದೆ ಎಂಬುದು ಕೂಡ ಮೂಲಗಳ ಮಾಹಿತಿಯಾಗಿದೆ.


Click it and Unblock the Notifications