ವೈಫೈ ಪಾಸ್‌ವರ್ಡ್ ಅನ್ನು ಮರುಪಡೆದುಕೊಳ್ಳುವುದು ಹೇಗೆ?

Written By:

ಜನರು ಎಲ್ಲಾ ಸಮಯದಲ್ಲೂ ತಮ್ಮ ಪಾಸ್‌ವರ್ಡ್‌ಗಳನ್ನು ಮರೆತುಬಿಡುತ್ತಾರೆ. ಆದರೆ ವೈಫೈ ಪಾಸ್‌ವರ್ಡ್ ಮರಡತು ಹೋದಾಗ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ ಎಂಬುದು ನಿಮಗೆ ಗೊತ್ತೇ? ಎಲ್ಲರೂ ವೈಫೈ ನೆಟ್‌ವರ್ಕ್‌ಗಳನ್ನು ಒಮ್ಮೆ ಮಾತ್ರವೇ ಕಾನ್ಫಿಗರ್ ಮಾಡುತ್ತಾರೆ, ತಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸುತ್ತಾರೆ ಮತ್ತು ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಹಾಗಿದ್ದರೆ ನಿಮ್ಮಮರೆತು ಹೋಗಿರುವ ವೈಫೈ ಪಾಅಸ್‌ವರ್ಡ್ ಅನ್ನು ಪುನಃ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಸರಳ ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಹೊಸ ಫೋನ್ಸ್

ಈ ಸರಳ ಸಲಹೆಗಳು ವಿಂಡೋಸ್‌ನಲ್ಲಿ ನೀವು ಎದುರಿಸುತ್ತಿರುವ ವೈಫೈ ಪಾಸ್‌ವರ್ಡ್ ಮರೆತು ಹೋಗುವಿಕೆ ಸಮಸ್ಯೆಗಳನ್ನು ಪರಿಹರಿಸಲಿದೆ. ಹಾಗಿದ್ದರೆ ಆ ಹಂತಗಳನ್ನು ಕುರಿತು ಕೆಳಗಿನ ಸ್ಲೈಡ್‌ಗಳಲ್ಲಿ ಪರಿಶೋಧಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

#1

ವೈಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಪಿಸಿಯನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಮೊದಲು ಸ್ಟಾರ್ಟ್‌ಗೆ ಹೋಗಿ ನಂತರ ನಿಯಂತ್ರಣ ಫಲಕ > ನೆಟ್‌ವರ್ಕ್ ಮತ್ತು ಶೇರಿಂಗ್ ಸೆಂಟರ್. ವಿಂಡೋಸ್ 8 ಕಂಪ್ಯೂಟರ್‌ಗಳಲ್ಲಿ, ನೀವು ವಿಂಡೋಸ್ ಕೀ + ಸಿಯನ್ನು ಒತ್ತಬಹುದು, ನಂತರ ಸರ್ಚ್ ಅನ್ನು ಕ್ಲಿಕ್ ಮಾಡಿ ನಂತರ ನೆಟ್‌ವರ್ಕ್ ಮತ್ತು ಶೇರಿಂಗ್ ಸೆಂಟರ್‌ನತ್ತ ನೋಡಿ.

2

2

#2

ಎಡ ಸೈಡ್‌ಬಾರ್‌ನಲ್ಲಿ ಅಡಾಪ್ಟರ್ ಸೆಟ್ಟಿಂಗ್ ಬದಲಾಯಿಸಿ ಕ್ಲಿಕ್ ಮಾಡಿ.

3

3

#3

ವೈಫೈ ನೆಟ್‌ವರ್ಕ್‌ಗೆ ಬಲ ಕ್ಲಿಕ್ ಮಾಡಿ ಮತ್ತು ಸ್ಟೇಟಸ್ ಕ್ಲಿಕ್ ಮಾಡಿ.

4

4

#4

ವೈರ್‌ಲೆಸ್ ಪ್ರಾಪರ್ಟೀಸ್ ಕ್ಲಿಕ್ ಮಾಡಿ.

5

5

#5

ಸೆಕ್ಯುರಿಟಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.

6

6

#6

ಇದೀಗ ನೀವು ವೈಫೈ ನೆಟ್‌ವರ್ಕ್‌ನ ಹೆಸರನ್ನು ಕಾಣಬಹುದು ಮತ್ತು ಮರೆಯಾಗಿರುವ ಪಾಸ್‌ವರ್ಡ್‌ ಅನ್ನು ಇಲ್ಲಿ ಗಮನಿಸಬಹುದು. ಉಳಿಸಿರುವ ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಲು ಶೋ ಕ್ಯಾರೆಕ್ಟರ್ಸ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Forgot Wi-Fi Password? Here's How to Recover.
Please Wait while comments are loading...
Opinion Poll

Social Counting