ರಿಯಲ್‌ಮಿ C55 ಮೊಬೈಲ್‌ಗೆ ಲಭ್ಯ ಇರುವ ಆಫರ್‌ಗೆ ಗ್ರಾಹಕರು ಫಿದಾ!
ದೈತ್ಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಲ್ಲಿ ಈಗ ಮೊಬೈಲ್ ಬೊನಾಂಜಾ ಸೇಲ್ ಚಾಲ್ತಿ ಇದ್ದು, ಫೋನ್ ಖರೀದಿದಾರರನ್ನು ಆಕರ್ಷಿಸುತ್ತಿದೆ. ಈ ಮೇಳದಲ್ಲಿ ಬಹುತೇಕ ಜನಪ್ರಿಯ ಮೊಬೈಲ್‌ಗಳಿಗೆ ಡಿಸ್ಕೌಂಟ್ ಲಭ್ಯ ಮಾಡಲಾಗಿದೆ. ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾಂಜಾ ಸೇಲ್ ಮೇಳದಲ್ಲಿ ಪೊಕೊ ಸಂಸ್ಥೆಯ ರಿಯಲ್‌ಮಿ C55 ಫೋನ್ ಗ್ರಾಹಕರು ಹುಬ್ಬೇರಿಸುವಂತಹ ರಿಯಾಯಿತಿ ಪಡೆದುಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಸಂಸ್ಥೆಯು ಮೊಬೈಲ್ಸ್ ಬೊನಾಂಜಾ ಸೇಲ್ ಇದೇ ಡಿಸೆಂಬರ್ 6 ರ ವರೆಗೂ ಇರಲಿದೆ. ಪ್ರಸ್ತತ ಈ ಸೇಲ್ ನಲ್ಲಿ ರಿಯಲ್‌ಮಿ C55 (64GB) ಫೋನ್ ಮೇಲೆ ಶೇ. 23% ರಷ್ಟು ಕೊಡುಗೆ ಲಭ್ಯ ಇದ್ದು, ಖರೀದಿದಾರರು 9,999ರೂ. ಗಳಿಗೆ ಕೊಳ್ಳಬಹುದಾಗಿದೆ. ಹಾಗೆಯೇ ಬ್ಯಾಂಕ್ ಕೊಡುಗೆ ಹಾಗೂ ಇತರೆ ಕೊಡುಗೆ ಪಡೆದರೇ ಈ ಫೋನ್ ಅನ್ನು 8,999ರೂ. ಗಳಿಗೂ ಖರೀದಿಸಬಹುದಾಗಿದೆ.

ರಿಯಲ್‌ಮಿ C55 ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಮೀಡಿಯಾ ಟೆಕ್ ಹಿಲಿಯೋ G88 ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಅಲ್ಲದೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಬಲದಲ್ಲಿ ಇದೆ. ಹಾಗಾದರೇ ರಿಯಲ್‌ಮಿ C55 ಫೋನಿನ ಇತರ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ C55 ಫೀಚರ್ಸ್ ಹೀಗಿವೆ
ರಿಯಲ್‌ಮಿ C55 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಕಾರಣಕ್ಕಾಗಿ ಪಂಚ್-ಹೋಲ್ ನಾಚ್ ಕಟೌಟ್ ಶೈಲಿಯ ಮಾದರಿಯನ್ನು ಇದು ಒಳಗೊಂಡಿದೆ. ಹಾಗೆಯೇ ಬ್ಯಾಟರಿ ಸ್ಥಿತಿ, ಡೇಟಾ ಬಳಕೆ ಮತ್ತು ಇನ್ನಿತರೆ ಮಾಹಿತಿಗಾಗಿ ಮಿನಿ ಕ್ಯಾಪ್ಸುಲ್ ಫೀಚರ್ಸ್ ಹೊಂದಿದೆ.

ಅಲ್ಲದೇ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G88 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸುವ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ರಿಯಲ್‌ನಿ UI 4.0 ಸಪೋರ್ಟ್ ಪಡೆದಿದೆ. ಇನ್ನುಳಿದಂತೆ ಈ ಫೋನ್ ಮೂರು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಅವುಗಳು ಕ್ರಮವಾಗಿ 4 GB/6 GB/8 GB RAM ಹಾಗೂ 64 GB/128 GB ಆಂತರೀಕ ಸ್ಟೋರೇಜ್ ಆಯ್ಕೆಗಳನ್ನು ಈ ಫೋನ್ ಪಡೆದಿದೆ.
ರಿಯಲ್‌ಮಿ ಸಂಸ್ಥೆಯ ಈ ಮೊಬೈಲ್ ಕ್ಯಾಮೆರಾ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಕೂಡಾ ಒಳಗೊಂಡಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಇದು ಸಪೋರ್ಟ್ ಒದಗಿಸುತ್ತದೆ. ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಇದು ಪಡೆದುಕೊಂಡಿದೆ.
ಅದೇ ರೀತಿ ರಿಯಲ್‌ಮಿ C55 ಮೊಬೈಲ್ 4 GB RAM ಮತ್ತು 64 GB ಸ್ಟೋರೇಜ್ ಹಾಗೂ 8 GB + 128 GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇನ್ನು ರಿಯಲ್‌ಮಿ C55 ಫೋನ್ ಸನ್ಶ ವರ್ ಮತ್ತು ರೈನಿ ನೈಟ್ ಎಂಬ ಎರಡು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








