ಜಿಯೋ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್: ಇತರೆ ಏನೇನು?

ಜಿಯೋ ಮುಂದಿನ ವರ್ಷ ಲಾಂಚ್‌ ಮಾಡಲಿರುವ ಅತೀ ಕಡಿಮೆ ಬೆಲೆಯ 4G ಫೋನ್‌ನಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್‌ ಆಫ್‌ಗಳು ಪ್ರೀಲೋಡ್‌ ಆಗಿ ಬರಲಿವೆ.

By Suneel
|

ರಿಲಾಯನ್ಸ್ ಜಿಯೋದ 'ವೆಲ್ಕಮ್ ಆಫರ್' ನಿಧಾನವಾಗಿ ತನ್ನ ಪ್ರಖ್ಯಾತತೆ ಕಳೆದುಕೊಳ್ಳುತ್ತಿದೆ. ಕಾರಣ ಗ್ರಾಹಕರ ಕೆಟ್ಟ ವಿಮರ್ಶೆಗಳು. ಈ ಅಂಶಗಳನ್ನೇ ಅವಲೋಕಿಸಿ ರಿಲಾಯನ್ಸ್ ಜಿಯೋ ಹಲವು ಹೊಸ ಸೇವೆಗಳನ್ನು ನೀಡುವ ಗುರಿ ಹೊಂದಿದೆ.

ರಿಲಾಯನ್ಸ್ ಜಿಯೋ(Reliance Jio) ಮುಂಬರುವ ದಿನಗಳಲ್ಲಿ ನೀಡಲಿರುವ ಹೊಸ ಸೇವೆಗಳಲ್ಲಿ ಅತೀ ಕಡಿಮೆ ಬೆಲೆಯ 4G ಫೀಚರ್‌ ಸ್ಮಾರ್ಟ್‌ಫೋನ್‌ ಸಹ ಒಂದು. ಈಗಾಗಲೇ ಗಿಜ್‌ಬಾಟ್‌ನಲ್ಲಿ ಹೇಳಿರುವಂತೆ ಜಿಯೋದ ಫೀಚರ್ ಫೋನ್ ಬೆಲೆ ರೂ.1000. ಅಂದಹಾಗೆ ರಿಲಾಯನ್ಸ್ ಜಿಯೋದ ಫೀಚರ್‌ ಫೋನ್‌ ಬಗ್ಗೆ ಇಂದು ನಾವೊಂದು ಎಕ್ಸ್‌ಕ್ಲ್ಯೂಸಿವ್ ಮಾಹಿತಿಯೊಂದನ್ನು ತಂದಿದ್ದೇವೆ. ಅದೇನು ಎಂದು ಮುಂದೆ ಓದಿರಿ.

1,000 ರೂನ ಜಿಯೋ 'ಲೈಫ್ ಈಜಿ' 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಮತ್ತು ವಾಟ್ಸಾಪ್ ಫೀಚರ್‌ ಫೋನ್‌ನಲ್ಲಿ ಪ್ರೀಲೋಡೆಡ್

ಫೇಸ್‌ಬುಕ್‌ ಮತ್ತು ವಾಟ್ಸಾಪ್ ಫೀಚರ್‌ ಫೋನ್‌ನಲ್ಲಿ ಪ್ರೀಲೋಡೆಡ್

ಅಂದಹಾಗೆ ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಜಿಯೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಪ್ರಖ್ಯಾತ ಆಪ್‌ಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ಪ್ರೀಲೋಡೆಡ್ ಹೊಂದಿರಲಿದೆ. ಬಳಕೆದಾರರು ಇನ್‌ಸ್ಟಾಲ್ ಆಗಿರುವ ಈ ಆಪ್‌ಗಳನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

 ಆಂಡ್ರಾಯ್ಡ್ ಪವರ್

ಆಂಡ್ರಾಯ್ಡ್ ಪವರ್

ಅಧಿಕೃತ ಮಾಹಿತಿ ಪ್ರಕಾರ ಜಿಯೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓಎಸ್'ನಿಂದ ರನ್‌ ಆಗಲಿದೆ. ಅಂದಹಾಗೆ ಜಿಯೋ ಸ್ಮಾರ್ಟ್‌ಫೋನ್ ಕ್ಯಾರಿಯರ್ ಲಾಕ್‌ ಸಿಸ್ಟಮ್‌ ಹೊಂದಲಿದ್ದು, ಇತರೆ ಯಾವುದೇ ಸಿಮ್‌ಗಳನ್ನು ಇನ್‌ಸರ್ಟ್ ಮಾಡಲು ಆಗುವುದಿಲ್ಲ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋನ್‌ಗಳ ಬೆಲೆ ರೂ.1000 ಮತ್ತು ರೂ.1500

ಫೋನ್‌ಗಳ ಬೆಲೆ ರೂ.1000 ಮತ್ತು ರೂ.1500

ಈ ಮೊದಲೇ ಹೇಳಿದಂತೆ ಫೋನ್‌ ಬೆಲೆ ರೂ.1000 ಮತ್ತು ರೂ.1500 ಇರಲಿದೆ ಎಂದು ತಿಳಿಯಲಾಗಿದೆ. ಅತೀ ಕಡಿಮೆ ಬೆಲೆಯ ಈ ಡಿವೈಸ್ 4G VoLTE ಸಪೋರ್ಟ್ ಮಾಡಲಿದೆ.

ಲಾವಾ ಮತ್ತು ಇತರೆ ಚೀನ ಕಂಪನಿಗಳು ಮೊಬೈಲ್ ತಯಾರಿಸಲಿವೆ

ಲಾವಾ ಮತ್ತು ಇತರೆ ಚೀನ ಕಂಪನಿಗಳು ಮೊಬೈಲ್ ತಯಾರಿಸಲಿವೆ

ಇತ್ತೀಚೆಗೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಅತೀ ಕಡಿಮೆ ಬೆಲೆಯ ಜಿಯೋ ಸ್ಮಾರ್ಟ್‌ಫೋನ್ ಅನ್ನು ಲಾವಾ ಮತ್ತು ಇತರೆ ಹಲವು ಚೀನ ಬ್ರ್ಯಾಂಡ್‌ಗಳು ತಯಾರಿಸಲಿವೆ. ಆದರೆ ಸ್ಮಾರ್ಟ್‌ಫೋನ್‌ಗಳು LYF ಸೀರೀಸ್ ಹೆಸರನ್ನೇ ಪಡೆಯಲಿವೆ.

 ಜಿಯೋ ಮೂಲ ಸೌಕರ್ಯಗಳ ಸುಧಾರಣೆಗಳು

ಜಿಯೋ ಮೂಲ ಸೌಕರ್ಯಗಳ ಸುಧಾರಣೆಗಳು

ಜಿಯೋ, ವೆಲ್ಕಮ್ ಆಫರ್‌ ಮತ್ತು ನೆಟ್‌ವರ್ಕ್‌ ಸಂಪರ್ಕದ ಬಗ್ಗೆ ಹಲವು ವಿಮರ್ಶೆಗಳನ್ನು ಪಡೆದ ನಂತರ, ತನ್ನ ಮೂಲ ಸೌಕರ್ಯಗಳ ಸುಧಾರಣೆಗಾಗಿ ಕಾರ್ಯ ಆರಂಭಿಸಿದೆ. ಮುಂದಿನ ವರ್ಷ ಜಿಯೋ ದೇಶದಾದ್ಯಂತ 45,000 ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Exclusive: Reliance Jio’s Feature Phones to Come Preloaded with Facebook, WhatsApp, and More. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X