Home
ಸುದ್ದಿಜಾಲ

ಫೋನ್‌, ಫ್ರಿಡ್ಜ್ ಸೇರಿದಂತೆ 134 ಡಿವೈಸ್‌ಗಳಿಗೆ 'ಮುಕ್ತಾಯ ದಿನ' ಫಿಕ್ಸ್‌!, ಹಳೇ ಡಿವೈಸ್‌ ಬಳಕೆ ಅಪಾರಾಧ

ಸಾಮಾನ್ಯವಾಗಿ ಪ್ರತಿಯೊಬ್ಬರು ಸಹ ಸ್ಮಾರ್ಟ್‌ಡಿವೈಸ್‌ಗಳನ್ನು ಹಾಗೂ ಸ್ಮಾರ್ಟ್‌ ಗೃಹ ಉಪಯೋಗಿ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿನ ಎಲ್ಲಾ ಕೆಲಸಗಳಿಗೂ ವಿವಿಧ ರೀತಿಯ ಸ್ಮಾರ್ಟ್‌ಡಿವೈಸ್‌ ಗಳು ಲಭ್ಯ ಇವೆ. ಆದರೆ ಈ ಎಲ್ಲಾ ವಸ್ತುಗಳಿಗೆ ಅಂದರೆ ನಾವು ನಿತ್ಯವೂ ಒಂದಲ್ಲಾ ಒಂದು ರೀತಿ ಬಳಕೆ ಮಾಡುವ 134 ಎಲೆಕ್ಟ್ರಾನಿಕ್ ಡಿವೈಸ್‌ಗಳ ಮುಕ್ತಾಯ ದಿನಾಂಕ ಯಾವುದು ಗೊತ್ತಾ!?

ಹೌದು, ಸ್ಮಾರ್ಟ್‌ ಡಿವೈಸ್‌ಗಳಿಗೆ ಇಂತಿಷ್ಟೇ ವರ್ಷ ಎಂದು ಮುಕ್ತಾಯದ ದಿನಾಂಕ ಇರಲಿಲ್ಲ. ಆದರೆ ಈ ಡಿವೈಸ್‌ಗಳಿಂದ ಆಗುತ್ತಿರುವ ಕೆಲವು ಸಮಸ್ಯೆಗಳಿಂದಾಗಿ ಇವುಗಳಿಗೂ ಮುಕ್ತಾಯದ ದಿನಾಂಕ ನಿಗದಿ ಮಾಡಲಾಗಿದೆ. ಅಂದರೆ ಮನೆಯಲ್ಲಿ ಬಳಕೆ ಮಾಡುವ ಮೊಬೈಲ್, ಲ್ಯಾಪ್‌ಟಾಪ್, ಫ್ರಿಡ್ಜ್ ಸೇರಿದಂತೆ ಅನೇಕ ಡಿವೈಸ್‌ಗಳನ್ನು ಅವುಗಳ ಮುಕ್ತಾಯದ ದಿನಾಂಕದ ನಂತರ ಬಳಕೆ ಮಾಡುವಂತಿಲ್ಲ. ಹಾಗಿದ್ರೆ, ಏನಿದು ಹೊಸ ರೂಲ್ಸ್‌?, ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ವರ್ಷದ ವರೆಗೆ ಮಾನ್ಯತೆ ಇರಲಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೋನ್‌, ಫ್ರಿಡ್ಜ್ ಸೇರಿದಂತೆ 134 ಡಿವೈಸ್‌ಗಳಿಗೆ 'ಮುಕ್ತಾಯ ದಿನ' ಫಿಕ್ಸ್‌!

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲದಿಂದ ಹೊಸ ರೂಲ್ಸ್‌: ಕಾರು ಹಾಗೂ ಇತರೆ ನಾಲ್ಕು ಚಕ್ರಗಳ ವಾಹನಗಳನ್ನು 15 ವರ್ಷಗಳ ನಂತರ ಸ್ಕ್ರ್ಯಾಪ್ ಮಾಡಬೇಕು ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಈಗಾಗಲೇ ತಿಳಿಸಿರುವುದು ನಿಮಗೆ ಗೊತ್ತಿರುವ ವಿಷಯ. ಈ ನಡುವೆ ನಾವು ದಿನನಿತ್ಯ ಬಳಕೆ ಮಾಡುವ ವಾಷಿಂಗ್ ಮೆಷಿನ್, ಫ್ರಿಡ್ಜ್, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಸೇರಿದಂತೆ ಇತ್ಯಾದಿ ಡಿವೈಸ್‌ಗಳಿಗೆ ಮುಕ್ತಾಯದ ವರ್ಷಗಳನ್ನು ನಿಗದಿ ಮಾಡಲಾಗಿದೆ.

ಇದೀಗ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು 134 ವಿದ್ಯುತ್ ಉಪಕರಣಗಳ ಮುಕ್ತಾಯ ದಿನಾಂಕವನ್ನು ನಿಗದಿಪಡಿಸಿದೆ. ಈ ಅವಧಿ ಮುಗಿದ ನಂತರ ಆ ಎಲ್ಲಾ ವಸ್ತುಗಳನ್ನು ಇ-ತ್ಯಾಜ್ಯ ಎಂದು ನಾಶಪಡಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಅವಧಿಯ ಮುಕ್ತಾಯದ ನಂತರ ಗ್ರಾಹಕರು ಸರಕುಗಳನ್ನು ಠೇವಣಿ ಮಾಡಬೇಕು ಮತ್ತು ಅಂತಹ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.

ಈ ವಿಭಾಗದಲ್ಲಿ ಕಂಪ್ಯೂಟರ್‌ಗಳು, ಮಾನಿಟರ್‌ಗಳು, ಮೌಸ್‌, ಕೀಬೋರ್ಡ್‌ಗಳು, ಲ್ಯಾಪ್‌ಟಾಪ್‌ಗಳು, ಕಂಡೆನ್ಸರ್‌ಗಳು, ಮೈಕ್ರೋ ಚಿಪ್‌ಗಳು, ಟಿವಿ, ವಾಷಿಂಗ್ ಮೆಷಿನ್‌ಗಳು ಇದ್ದು, ಈ ಯೋಜನೆಯನ್ನು ಆರಂಭಿಕವಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪರಿಚಯಿಸಲಾಗಿದೆ. ಈ ಯೋಜನೆಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಭೋಪಾಲ್ ಸ್ಥಳೀಯ ಆಡಳಿತ ಮೇಲ್ವಿಚಾರಣೆ ಮಾಡುತ್ತದೆ.

ಈ ಕಾನೂನಿನಲ್ಲಿ ಏನೆಲ್ಲಾ ಉಲ್ಲೇಖ ಮಾಡಲಾಗಿದೆ? : ದೇಶದಲ್ಲಿ ಇ-ತ್ಯಾಜ್ಯವನ್ನು ವಿಲೇವಾರಿ ಮಾಡಲು ಸರ್ಕಾರವು ಏಪ್ರಿಲ್ 1, 2023 ರಂದು ಕಾನೂನನ್ನು ಅಂಗೀಕಾರ ಮಾಡಿದೆ. ಇದರ ಪ್ರಕಾರ ಇ-ತ್ಯಾಜ್ಯ ಉತ್ಪಾದಿಸುವ ವ್ಯಕ್ತಿಯೇ ಅದನ್ನು ವಿಲೇವಾರಿ ಮಾಡಬೇಕು. ಹಾಗೆಯೇ ಕಂಪನಿಯು ತಯಾರಿಸುವ ವಾಷಿಂಗ್‌ ಮೆಷಿನ್‌ 10 ವರ್ಷಗಳ ಅವಧಿಯನ್ನು ಹೊಂದಿರುತ್ತದೆ.

ಇದಾದ ನಂತರ ಹೆಚ್ಚಿನ ವಾಷಿಂಗ್ ಮೆಷಿನ್ ಉತ್ಪನ್ನಗಳು ಅಥವಾ ಹೊಸ ಬ್ರಾಂಡ್‌ಗಳನ್ನು ಬಿಡುಗಡೆ ಮಾಡಲು ಅನುಮತಿ ಕೋರುವಾಗ, ಆ ಕಂಪೆನಿಯು 10 ವರ್ಷಗಳ ಹಿಂದೆ ತಯಾರಿಸಿದ 60 ಪ್ರತಿಶತದಷ್ಟು ತೊಳೆಯುವ ಯಂತ್ರಗಳನ್ನು ನಾಶಪಡಿಸಿರುವ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಈ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ಮತ್ತು ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ಅಂದರೆ ಅವಧಿ ಮೀರಿದ ಸರಕುಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿ ಆಯಾ ತಯಾರಕರ ಮೇಲೆಯೇ ಇದೆ. ಕಂಪನಿಗಳು ಹಳೆಯ ಉತ್ಪನ್ನಗಳನ್ನು ಬದಲಾಯಿಸಬಹುದು ಅಥವಾ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿದ ನಂತರವೇ ಹೊಸ ಬ್ರ್ಯಾಂಡ್‌ಗಳನ್ನು ಪ್ರಾರಂಭಿಸಬಹುದು ಎಂದು ತಿಳಿಸಲಾಗಿದೆ. ಸದ್ಯಕ್ಕೆ ಕಂಪನಿಗಳು ಕಡಿಮೆ ಜೀವಿತಾವಧಿಯನ್ನು ಹೊಂದಿರುವ ಸರಕುಗಳನ್ನು ಉತ್ಪಾದಿಸುತ್ತವೆ.

ಖಾಸಗಿ ವಾಹನಗಳ ನಿಯಮಗಳೇನು?: ಈ ಲೇಖನದ ಮೊದಲು ನಾವು ವಾಹನದ ಬಗ್ಗೆಯೂ ಉಲ್ಲೇಖ ಮಾಡಿದ್ದೆವು. ಅಂದರೆ ಖಾಸಗಿ ವಾಹನಗಳಿಗೆ ಈ ಅವಧಿಯು 15 ವರ್ಷಗಳು ಇರಲಿದೆ. ಇದಾದ ನಂತರ ಕಾರಿನ ಫಿಟ್ನೆಸ್ ಪರೀಕ್ಷೆಯನ್ನು ಮಾಡಬೇಕಾಗಿದೆ. ಅದು ಜಾರಿಯಾದರೆ ನೋಂದಣಿಯನ್ನು ಇನ್ನೂ ಐದು ವರ್ಷಗಳವರೆಗೆ ಮಾತ್ರ ವಿಸ್ತರಣೆ ಮಾಡಬಹುದು. ಅದು ವಿಫಲವಾದರೆ ಆ ವಾಹನವನ್ನು ನಾಶ ಮಾಡಬೇಕಿದೆ.

ಫೋನ್‌, ಫ್ರಿಡ್ಜ್ ಸೇರಿದಂತೆ 134 ಡಿವೈಸ್‌ಗಳಿಗೆ 'ಮುಕ್ತಾಯ ದಿನ' ಫಿಕ್ಸ್‌!

ಯಾವ ಡಿವೈಸ್‌ಗಳಿಗೆ ಎಷ್ಟು ವರ್ಷಗಳ ಆಯಸ್ಸು? : ಇಲ್ಲಿ ನೂರಕ್ಕೂ ಡಿವೈಸ್‌ಗಳಿಗೆ ಮುಕ್ತಾಯದ ದಿನಾಂಕ ನಿಗದಿ ಮಾಡಲಾಗಿದೆಯಾದರೂ ನಾವು ಕೆಲವು ಡಿವೈಸ್‌ಗಳ ಆಯಸ್ಸಿವ ವಿವರ ತಿಳಿಸಿಸಲಿದ್ದೇವೆ. ಅದರಂತೆ ಫ್ರಿಡ್ಜ್ 10 ವರ್ಷ, ಸೀಲಿಂಗ್ ಫ್ಯಾನ್ 10 ವರ್ಷ, ವಾಷಿಂಗ್ ಮೆಷಿನ್ 10 ವರ್ಷ, ರೇಡಿಯೋ ಸೆಟ್ 8 ವರ್ಷ, ಸ್ಮಾರ್ಟ್‌ಫೋನ್/ಲ್ಯಾಪ್‌ಟಾಪ್ 5 ವರ್ಷ, ಟ್ಯಾಬ್ಲೆಟ್/ಐಪ್ಯಾಡ್ 5 ವರ್ಷ ಸ್ಕ್ಯಾನರ್ 5 ವರ್ಷ ಬಾಳಿಕೆ ಮಾಡಬಹುದಾಗಿದೆ. ಇದಾದ ನಂತರ ಇವುಗಳನ್ನು ನಾಶಪಡಿಸಬೇಕಿದೆ.

Best Mobiles in India

English summary
Many devices including mobiles, laptops, fridge used at home cannot be used after their expiry date. The government has set an expiry date for these
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+