Home
ಸುದ್ದಿಜಾಲ

Ration Card: ರೇಷನ್‌ ಕಾರ್ಡ್‌ದಾರರೇ ಗಮನಿಸಿ; ಇದು ನಿಮಗೆ ಕೊನೆಯ ಕಾಲಾವಕಾಶ ಆಗಿರಬಹುದು!

ಭಾರತೀಯರಿಗೆ ಆಧಾರ್‌ ಕಾರ್ಡ್‌ ಬಹಳ ಅಗತ್ಯವಾದ ಗುರುತಿನ ಚೀಟಿ ಆಗಿದ್ದು, ಈ ಮೂಲಕ ಎಲ್ಲಾ ರೀತಿಯ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ನಡುವೆ ಆಧಾರ್‌ ಕಾರ್ಡ್‌ ಅನ್ನು ನಮ್ಮ ಬಳಿ ಇರುವ ಎಲ್ಲಾ ದಾಖಲೆಗಳು ಅಂದರೆ ಪಾನ್ ಕಾರ್ಡ್‌, ಬ್ಯಾಂಕ್‌ ಸೇರಿದಂತೆ ಅನೇಕ ಕಡೆ ಕಡ್ಡಾಯವಾಗಿ ಲಿಂಕ್‌ ಮಾಡಲು ಸರ್ಕಾರ ಸೂಚಿಸಿದೆ. ಅದರಂತೆ ಪಡಿತರ ಚೀಟಿಗೂ (Ration Card) ಸಹ ಈ ನಿಯಮ ಕಡ್ಡಾಯವಾಗಿದೆ.

ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ಬಂದಾಗಿನಿಂದ ರೇಷನ್‌ ಕಾರ್ಡ್‌ಗೆ ಮತ್ತಷ್ಟು ಮೌಲ್ಯ ಬಂದಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಗ್ಯಾರಂಟಿ ಯೋಜನೆಗಳಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಕೆಲವು ಸಮಸ್ಯೆಗಳಿಂದ ಈಗ ಅಕ್ಕಿ ಬದಲು ಹಣ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಈ ಬೆಳವಣಿಗೆ ಹಿನ್ನೆಲೆ ಹೊಸ ರೇಷನ್‌ ಕಾರ್ಡ್‌ ಅನ್ನು ಪಡೆಯಲು ಹಲವು ಜನ ಕಾಯುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಸಹ ಮಹತ್ವದ ಮಾಹಿತಿ ನೀಡಿದ್ದು, ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ಗೆ ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಿದೆ.

ರೇಷನ್‌ ಕಾರ್ಡ್‌ದಾರರೇ ಗಮನಿಸಿ; ಇದು ನಿಮಗೆ ಕೊನೆಯ ಕಾಲಾವಕಾಶ ಆಗಿರಬಹುದು!

ಇದೀಗ ಎಲ್ಲಾ ದಾಖಲೆಗಳನ್ನು ಆಧಾರ್‌ನೊಂದಿಗೆ ಜೋಡಣೆ ಮಾಡುತ್ತಿರುವ ಹಿನ್ನೆಲೆ ಸರ್ಕಾರಗಳು ಮೋಸದ ವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿದೆ. ಅದರಂತೆ ರೇಷನ್‌ ಕಾರ್ಡ್‌ಗೂ ಸಹ ಆಧಾರ್‌ ಲಿಂಕ್‌ ಅನ್ನು ಕಡ್ಡಾಯ ಮಾಡಲಾಗಿದ್ದು, ಈ ಹಿಂದೆ ಈ ಕಾರ್ಯಕ್ಕೆ ಜೂನ್ 30 ಕೊನೆಯ ದಿನ ಎಂದು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಭಾರತ ಸರ್ಕಾರವು ಸೆಪ್ಟೆಂಬರ್ 30, 2023 ರವರೆಗೆ ಗಡುವನ್ನು ವಿಸ್ತರಣೆ ಮಾಡಿ ಆದೇಶ ನೀಡಿದೆ.

ಇನ್ನು ಅಂತ್ಯೋದಯ ಅನ್ನ ಯೋಜನೆಯ ಅಡಿಯಲ್ಲಿ ಹಾಗೂ ಆದ್ಯತಾ ಕುಟುಂಬ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅನಿವಾರ್ಯ ಆಗಿದ್ದು, ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡಲು ಇದರೊಂದಿಗೆ ಸರ್ಕಾರದ ಸೇವೆಗಳನ್ನು ಉಚಿತವಾಗಿ ಪಡೆಯಲು ಸ್ಥಳೀಯ ಪಡಿತರ ಕಚೇರಿಗೆ ಭೇಟಿ ನೀಡಬೇಕಿದೆ.

ಯಾಕೆ ಈ ನಿರ್ಧಾರ?: ಮೊದಲೇ ತಿಳಿಸಿದಂತೆ ಅವ್ಯವಹಾರವನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಯಾಕೆಂದರೆ ಈ ಮೊದಲು ಒಂದೇ ಕುಟುಂಬದಲ್ಲಿ ಹಲವು ಕಾರ್ಡ್‌ಗಳನ್ನು ಬಳಕೆ ಮಾಡಲಾಗುತ್ತುತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತಿತ್ತು ಎನ್ನಲಾಗಿದೆ. ಅದರಲ್ಲೂ ಅನರ್ಹರು ಸಹ ಅಂದರೆ ಆದಾಯ ಮಿತಿಯನ್ನು ಮೀರಿರಿವ ಜನರು ಸಹ ಪಡಿತರ ಚೀಟಿ ಪಡೆಯುತ್ತಿರುವ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಇನ್ನು ಪಡಿತರ ಚೀಟಿಗಳು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರವನ್ನು ಪಡೆಯಲು ಅನುವು ಮಾಡಿಕೊಡಲಿದ್ದು, ಇದನ್ನು ಗುರುತಿನ ಪುರಾವೆಯಾಗಿಯೂ ಬಳಕೆ ಮಾಡಬಹುದಾಗಿದೆ. ಆದರೆ ಕೆಲವರು ಎರಡು ಅಥವಾ ಹೆಚ್ಚಿನ ಪಡಿತರ ಚೀಟಿಗಳನ್ನು ಹೊಂದಿದ್ದು, ವಿವಿಧ ಸ್ಥಳಗಳಿಂದ ಸಬ್ಸಿಡಿ ದರದಲ್ಲಿ ಪಡಿತರವನ್ನು ಸಂಗ್ರಹಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸರ್ಕಾರ ಕಟ್ಟು ನಿಟ್ಟಿನ ಕ್ರಮದೊಂದಿಗೆ ಈ ಲಿಂಕ್‌ ಪ್ರಕ್ರಿಯೆಯನ್ನೂ ಸಹ ಜಾರಿ ಮಾಡಿದೆ. ಹಾಗಿದ್ರೆ, ಆನ್‌ಲೈನ್‌ನಲ್ಲಿ ಈ ಸೇವೆ ಪಡೆಯುವುದು ಹೇಗೆ ಎಂದು ತಿಳಿಯೋಣ ಬನ್ನಿ.

ರೇಷನ್‌ ಕಾರ್ಡ್‌ದಾರರೇ ಗಮನಿಸಿ; ಇದು ನಿಮಗೆ ಕೊನೆಯ ಕಾಲಾವಕಾಶ ಆಗಿರಬಹುದು!

ಹಂತ 1 : ಮೊದಲು ಲ್ಯಾಪ್‌ಟಾಪ್‌ ಅಥವಾ ಇತರೆ ಸ್ಮಾರ್ಟ್‌ ಡಿವೈಸ್‌ ಮೂಲಕ ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್‌ಗೆ ಭೇಟಿ ನೀಡಿ. ನಂತರ ಸಕ್ರಿಯ ಕಾರ್ಡ್‌ಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಆಯ್ಕೆಯನ್ನು ಆಯ್ಕೆಮಾಡಿ. ಇದರಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ. ಅಂದರೆ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ತಪ್ಪಿಲ್ಲದೆ ಎಂಟ್ರಿ ಮಾಡಿ.

ಹಂತ 2 : ಇದನ್ನು ಮಾಡಿದ ಮೇಲೆ ಮುಂದುವರೆಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ನೀವು ನೋಂದಾವಣಿ ಮಾಡಿರುವ ಅಂದರೆ ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಫೋನ್‌ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿ ಅಂಕೆಯನ್ನು ಅಲ್ಲೇ ನೀಡಲಾಗುವ ಜಾಗದಲ್ಲಿ ಭರ್ತಿ ಮಾಡಿದ್ರೆ ನಿಮ್ಮ ಆಧಾರ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ಗಳು ಒಂದಕ್ಕೊಂದು ಲಿಂಕ್‌ ಆಗುತ್ತವೆ.

Best Mobiles in India

English summary
Aadhaar link has also been made mandatory for ration card, earlier June 30 was set as the last day for this function. However, now the Government of India has ordered to extend the deadline till September 30, 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+