Home
ಸುದ್ದಿಜಾಲ

Jio: ಜಿಯೋದಿಂದ ಈ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ ಡೇಟಾ ಸೌಲಭ್ಯ!

ಜಿಯೋ (Jio) ಟೆಲಿಕಾಂ ವಲಯದಲ್ಲಿ ಅಗ್ರಸ್ಥಾದಲ್ಲಿದೆ. ಅದರಲ್ಲೂ ಇತ್ತೀಚೆಗೆ ಬಂದ ವರದಿ ಪ್ರಕಾರ ಜಿಯೋ ಹೆಚ್ಚು ಹೆಚ್ಚು ಹೊಸ ಗ್ರಾಹಕರನ್ನು ಪಡೆಯುತ್ತಿದೆ. ಇದಕ್ಕೆ ಕಾರಣ ಆಗುತ್ತಿರುವುದು ಜಿಯೋ ನೀಡುತ್ತಿರುವ ವಿವಿಧ ರೀತಿಯ ಅಗ್ಗದ ಸೌಲಭ್ಯಗಳು. ಈ ನಡುವೆ ಜಿಯೋ ಈಗಾಗಲೇ ಲಭ್ಯ ಇರುವ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.

ಹೌದು, ಜಿಯೋ ಕಡಿಮೆ ದರದಲ್ಲಿ ಅತ್ಯುತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಜೊತೆಗೆ ಈ ಪ್ಲ್ಯಾನ್‌ಗಳಲ್ಲಿ ಸಾಕು ಎನಿಸುವಷ್ಟು ಡೇಟಾ ಹಾಗೂ ಇತರೆ ಸೌಲಭ್ಯಗಳನ್ನೂ ನೀಡುವ ಕೆಲಸ ಮಾಡುತ್ತಿದೆ. ಅದಾಗ್ಯೂ ತನ್ನ ಗ್ರಾಹಕರಿಗೆ ಇನ್ನಷ್ಟು ಸಂತಸ ನೀಡುವ ಉದ್ದೇಶದಿಂದ ಹಾಗೂ ಹೊಸ ಗ್ರಾಹಕರು ಈ ಕಡೆ ತಿರುಗಿ ನೋಡುವಂತೆ ಮಾಡುವ ಉದ್ದೇಶದಿಂದ ಕೆಲವು ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾ ನೀಡುವುದಾಗಿ ತಿಳಿಸಿದೆ. ಹಾಗಿದ್ರೆ, ಯಾವ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಲಭ್ಯ ಇದೆ, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಜಿಯೋದಿಂದ ಈ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ ಡೇಟಾ ಸೌಲಭ್ಯ!

ಹೆಚ್ಚುವರಿ ಡೇಟಾ ಪ್ರಯೋಜನ: ರಿಲಯನ್ಸ್ ಜಿಯೋ ತನ್ನ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಹೆಚ್ಚುವರಿ ಡೇಟಾ ಪ್ರಯೋಜನಗಳೊಂದಿಗೆ ಗುಡ್‌ ನ್ಯೂಸ್ ನೀಡಿದೆ. ಅವೇ 399ರೂ.ಗಳು ಮತ್ತು 219 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌. ಯಾರೆಲ್ಲಾ ಈ ಪ್ಲ್ಯಾನ್‌ಆಯ್ಕೆ ಮಾಡಿಕೊಳ್ಳುತ್ತಾರೋ ಅವರು ಈ ಮೊದಲು ಬಳಕೆ ಮಾಡುವುದಕ್ಕಿಂತ ಹೆಚ್ಚಿನ ಡೇಟಾವನ್ನು ಇನ್ಮುಂದೆ ಪಡೆಯಬಹುದಾಗಿದೆ.

ಇನ್ನು 399 ರೂ.ಗಳ ಪ್ಲ್ಯಾನ್‌ನಲ್ಲಿ ಈಗ ಹೆಚ್ಚುವರಿ 6GB ಡೇಟಾವನ್ನು ನೀಡಲಾಗುತ್ತಿದ್ದು, 219 ರೂ.ಗಳ ಪ್ಲ್ಯಾನ್‌ನಲ್ಲಿ ಹೆಚ್ಚುವರಿ 2GB ಡೇಟಾವನ್ನು ನೀಡಲಾಗುತ್ತದೆ. ಅಲ್ಲದೆ ಈ ಪ್ಲ್ಯಾನ್‌ಗಳಲ್ಲಿ ಅನಿಯಮಿತ 5G ಡೇಟಾ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ ಮತ್ತು ಇತರ ಪರ್ಕ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನೀವು ಹೆಚ್ಚಿನ ಡೇಟಾಗಾಗಿ ಪ್ಲ್ಯಾನ್ ಸರ್ಚ್‌ ಮಾಡುತ್ತಿದ್ದರೆ ಈ ಪ್ಲ್ಯಾನ್‌ ಉತ್ತಮವಾಗಿದೆ.

ಜಿಯೋದಿಂದ ಈ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ ಡೇಟಾ ಸೌಲಭ್ಯ!

ಇನ್ನು ಈ ಪ್ಲ್ಯಾನ್‌ಗಳ ಇತರೆ ಸೌಲಭ್ಯಗಳನ್ನು ಗಮನಿಸುವುದಾದರೆ ಅನಿಯಮಿತ ಕರೆಗಳು, ದಿನಕ್ಕೆ 100 ಎಸ್‌ಎಮ್ಎಸ್ ಮತ್ತು 3GB ದೈನಂದಿನ ಡೇಟಾವನ್ನು 399 ರೂ.ಗಳ ಪ್ಲ್ಯಾನ್‌ನಲ್ಲಿ ಪಡೆಯಬಹುದು. ಇದೇ ಪ್ಲ್ಯಾನ್‌ನಲ್ಲಿ ಮೊದಲೇ ತಿಳಿಸಿದಂತೆ 6GB ಹೆಚ್ಚುವರಿ ಡೇಟಾ ಸಿಗಲಿದೆ. ಅಂದರೆ ನೀವು ಅದು 61 ರೂಪಾಯಿಯ ಉಚಿತ ಡೇಟಾ ವೋಚರ್ ಅನ್ನು ಪಡೆದಕ್ಕೆ ಸಮನಾಗಿರುತ್ತದೆ.

ಇದರೊಂದಿಗೆ ಈ ಪ್ಲ್ಯಾನ್‌ನಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋಕ್ಲೌಡ್‌ ಸೇವೆ ಸಹ ಲಭ್ಯ ಇದ್ದು, ಅನಿಯಮಿತ 5G ಡೇಟಾವನ್ನು ಈ ಪ್ಪ್ಯಾನ್‌ನಲ್ಲಿ ಪಡೆಯಬಹುದಾಗಿದೆ. ಈ ಪ್ಲ್ಯಾನ್ ಮಾನ್ಯತೆ 28 ದಿನಗಳವರೆಗೆ ಇರುತ್ತದೆ. ಅಂದರೆ ಒಂದು ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಈ ಪ್ಲ್ಯಾನ್‌ನಲ್ಲಿ ಮಾಹಿತಿ ಹಾಗೂ ಮನರಂಜನೆ ಪಡೆಯಬಹುದಾಗಿದೆ.

ಕಡಿಮೆ ರೀಚಾರ್ಜ್ ಪ್ಲ್ಯಾನ್‌ ಬೇಕು ಅನ್ನೋರಿಗೆ 219 ರೂ.ಗಳ ಪ್ಲ್ಯಾನ್‌ ಉತ್ತಮ ಆಯ್ಕೆ ಆಗಿದೆ. ಇದೂ ಸಹ 3GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗಲಿದ್ದು, 2GB ಬೋನಸ್ ಡೇಟಾವನ್ನು ಸಿಗಲಿದೆ. ಆದರೆ ಈ ಪ್ಲ್ಯಾನ್‌ 14 ದಿನಗಳವರೆಗೆ ಮಾತ್ರ ಇರುತ್ತದೆ. ಇದರಲ್ಲೂ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋಕ್ಲೌಡ್‌ ನೊಂದಿಗೆ ಅನಿಯಮಿತ 5G ಡೇಟಾ ಸಿಗಲಿದೆ.

ಜಿಯೋದಿಂದ ಈ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ ಡೇಟಾ ಸೌಲಭ್ಯ!

ಈ ಪ್ಲ್ಯಾನ್‌ಗಳು ಇತರೆ ಸಾಮಾನ್ಯ ಪ್ಲ್ಯಾನ್‌ಗಳಿಗಿಂತ ಸ್ವಲ್ಪ ದುಬಾರಿಯಾಗಿರಬಹುದು. ಡೇಟಾ ವಿಚಾರಕ್ಕೆ ಬಂದರೆ ಇವೇ ಅಗ್ಗದ ಪ್ಲ್ಯಾನ್‌ ಆಗಿವೆ. ಈ ವರ್ಧಿತ ಆಯ್ಕೆಗಳೊಂದಿಗೆ, ಜಿಯೋದೊಂದಿಗೆ ಸಂಪರ್ಕದಲ್ಲಿರಲು ಮತ್ತು ಮನರಂಜನೆಯನ್ನು ನಿರಂತರವಾಗಿ ಪಡೆಯಲು ಇದು ಅನುಕೂಲ ಆಗಲಿದೆ. ಹಾಗಿದ್ರೆ ಈ ಪ್ಲ್ಯಾನ್‌ಗಳು ನಿಮಗೆ ಎಷ್ಟು ಸೂಕ್ತ?, ಯಾವ ಪ್ಲ್ಯಾನ್‌ ಆಯ್ಕೆ ಮಾಡುತ್ತೀರ ಅನ್ನೋದನ್ನು ಕಮೆಂಟ್ ಮೂಲಕ ತಿಳಿಸಿ.

Best Mobiles in India

English summary
Jio is now offering additional data benefits. That means more data facility will be available in Rs 399 and Rs 219 prepaid plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+