Home
ಸುದ್ದಿಜಾಲ

32ಎಂಪಿ ಸೆಲ್ಫಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಈ ಆನ್‌ಲೈನ್‌ ವೆಬ್‌ಸೈಟ್‌ ಎಲ್ಲ ಉತ್ಪನ್ನಗಳಿಗೂ ಏನಾದರೊಂದು ಡಿಸ್ಕೌಂಟ್‌ ಲಭ್ಯ ಮಾಡಿರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಮೊಬೈಲ್‌ಗಳಿಗೂ ಸಹ ಬೊಂಬಾಟ್‌ ಡಿಸ್ಕೌಂಟ್‌ ಕೊಡುಗೆಗಳನ್ನು ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ. ಸದ್ಯ ಒಪ್ಪೋ ಮೊಬೈಲ್‌ ಸಂಸ್ಥೆಯ ಒಪ್ಪೋ F27 5G (OPPO F27 5G) ಫೋನ್‌ ಸಖತ್ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಹಿಂತಿರುಗಿ ನೋಡುವಂತೆ ಆಗಿದೆ.

ಹೌದು, ಇ ಕಾಮರ್ಸ್‌ ದಿಗ್ಗಜ ಎನಿಸಿರುವ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಒಪ್ಪೋ F27 5G (OPPO F27 5G) ಮೊಬೈಲ್‌ ಶೇ. 15% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ 8GB RAM + 128GB ವೇರಿಯಂಟ್‌ ಫೋನ್‌ ಅನ್ನು 22,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದಲ್ಲದೇ ಈ ಫೋನಿಗೆ ಕೆಲವು ಆಯ್ದ ಬ್ಯಾಂಕ್‌ ಆಫರ್‌ ಸಹ ಲಭ್ಯ ದೊರೆಯುತ್ತವೆ.

32ಎಂಪಿ ಸೆಲ್ಫಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಹಾಗೆಯೇ ಈ ಒಪ್ಪೋ F27 5G ಮೊಬೈಲ್‌ 8GB RAM + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ AMOLED ಸ್ಕ್ರೀನ್‌ ಹಾಗೂ 120Hz ರಿಫ್ರೆಶ್ ರೇಟ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಒಪ್ಪೋ F27 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಒಪ್ಪೋ F27 5G - ಫೀಚರ್ಸ್‌ ಹೀಗಿವೆ
ಒಪ್ಪೋ F27 5G ಮೊಬೈಲ್‌ 6.67 ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2400×1080 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 120Hz ರಿಫ್ರೆಶ್ ರೇಟ್, ಅಕ್ವಾ ಡೈನಾಮಿಕ್ಸ್, 240Hz ಟಚ್ ಸ್ಯಾಂಪ್ಲಿಂಗ್ ದರ, 394 PPI, 100% DCI P3 ಬಣ್ಣದ ಹರವು ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ 2100 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಪಡೆದಿದೆ.

ಒಪ್ಪೋ F27 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಕಾರ್ಯ ನಿರ್ವಹಿಸಲಿದ್ದು, ಮಾಲಿ G57 MP2 GPU ಸಪೋರ್ಟ್‌ ಸಹ ಇದೆ. ಅಲ್ಲದೇ ಇದು ಕಲರ್‌ ಓಎಸ್‌ 14 ಜೊತೆಗೆ ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. 2TB ವರೆಗೆ ವಿಸ್ತರಣೆಗೆ ಬೆಂಬಲದೊಂದಿಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಕೂಡಾ ಇದೆ.

ಒಪ್ಪೋ F27 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಹಾಗೆಯೇ ಉಳಿದ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಒಪ್ಪೋ F27 5G ಮೊಬೈಲ್‌ 45W SuperVOOC ಚಾರ್ಜಿಂಗ್ ಸಪೋರ್ಟ್‌ ಪಡೆದಿದ್ದು, ಇದಕ್ಕೆ ಸಪೋರ್ಟ್‌ ಆಗಿ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್-ಸಿಮ್, 5G, WiFi 5 802.11 ax, ಬ್ಲೂಟೂತ್ 5.3, ಯುಎಸ್‌ಬಿ 2.0, ಜಿಪಿಎಸ್‌, GLONASS, ಗೆಲಿಲಿಯೋ, BeiDou ಮತ್ತು QZSS ಆಯ್ಕೆಗಳು ಇವೆ.

Best Mobiles in India

English summary
Fabulous price cut on OPPO F27 5G in India. Check Price and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+