Home
ಸುದ್ದಿಜಾಲ

8GB RAM + 128GB ಇರುವ ಈ ಸ್ಟೈಲಿಶ್‌ ಮೊಬೈಲ್‌ ಬೆಲೆಯಲ್ಲಿ ದಿಢೀರ್‌ ಕುಸಿತ!

ಜನಪ್ರಿಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈಗ ಮೊಬೈಲ್‌ ಬೋನಾಂಜಾ ಸೇಲ್ 2024 (Mobiles Bonanza Sale) ಸೇಲ್‌ ಲೈವ್‌ ಆಗಿದೆ. ಈ ಸ್ಪೆಷಲ್‌ ಮಾರಾಟ ಮೇಳದಲ್ಲಿ ಕೆಲವು ಆಯ್ದ ಮೊಬೈಲ್‌ಗಳು ಆಕರ್ಷಕ ಡಿಸ್ಕೌಂಟ್‌ ಪಡೆದಿದ್ದು, ಇದರೊಂದಿಗೆ ಕೆಲವು ಬ್ಯಾಂಕ್‌ ಆಫರ್‌ಗಳು ಸಹ ಲಭ್ಯ ಇವೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ನಥಿಂಗ್‌ ಫೋನ್‌ 2a ಫೋನ್‌ (Nothing Phone (2a) 5G) ಭಾರೀ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ನಥಿಂಗ್‌ ಫೋನ್‌ 2a ಫೋನ್‌ (Nothing Phone (2a) 5G) ಫೋನ್‌ ಶೇ. 7% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 8GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಗ್ರಾಹಕರು 23,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಆಫರ್‌ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಲು ಅವಕಾಶ ಲಭ್ಯ ಇದೆ.

8GB RAM + 128GB ಇರುವ ಈ ಸ್ಟೈಲಿಶ್‌ ಮೊಬೈಲ್‌ ಬೆಲೆಯಲ್ಲಿ ದಿಢೀರ್‌ ಕುಸಿತ!

ಈ ಸ್ಟೈಲಿಶ್‌ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಸಹ ಪಡೆದಿದ್ದು, ಇದರ ಜೊತೆಗೆ ಬ್ಲ್ಯಾಕ್‌ ಹಾಗೂ ವೈಟ್‌ ಕಲರ್‌ ಆಯ್ಕೆ ಪಡೆದಿದೆ. ಹಾಗಾದರೇ ನಥಿಂಗ್‌ ಫೋನ್‌ 2a ಫೋನ್‌ (Nothing Phone (2a) 5G) ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಥಿಂಗ್‌ ಫೋನ್‌ 2a - ಫೀಚರ್ಸ್‌

ನಥಿಂಗ್‌ ಫೋನ್‌ 2a ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇದರ ಡಿಸ್‌ಪ್ಲೇಯು 30Hz ನಿಂದ 120Hz ವರೆಗಿನ ರಿಫ್ರೆಶ್ ರೇಟ್‌, 394ppi ಪಿಕ್ಸೆಲ್ ಸಾಂದ್ರತೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. HDR10+ ಬೆಂಬಲ ಮತ್ತು 1,300 nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದೆ.

ನಥಿಂಗ್‌ ಫೋನ್‌ 2a ಮೊಬೈಲ್‌ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.5 ಸಪೋರ್ಟ್‌ನಲ್ಲಿ ರನ್‌ ಆಗಲಿದೆ. ಇದು ಮೂರು ವರ್ಷಗಳ ಆಂಡ್ರಾಯ್ಡ್ ನವೀಕರಣಗಳು ಲಭ್ಯ. ಅಲ್ಲದೇ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಇದೆ.

ನಥಿಂಗ್‌ ಫೋನ್‌ 2a ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ನಥಿಂಗ್‌ ಫೋನ್‌ 2a ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 45W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ನೀಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಪೋರ್ಟ್‌ ಮಾಡಲಿದೆ.

Best Mobiles in India

English summary
Amazing Price Drop on Nothing Phone (2a) 5G on Mobiles Bonanza Sale. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+