Home
ಸುದ್ದಿಜಾಲ

ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರು ಫುಲ್‌ ಖುಷ್‌!

ಒಪ್ಪೋ ಮೊಬೈಲ್‌ ಸಂಸ್ಥೆಯು ಭಿನ್ನ ಮಾದರಿಯ ಸ್ಮಾರ್ಟ್‌ಫೊನ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಒಪ್ಪೋ ಸಂಸ್ಥೆಯ ಫ್ಲಿಪ್‌ ಹಾಗೂ ಫೋಲ್ಡ್‌ ಮಾದರಿಯ ಮೊಬೈಲ್‌ಗಳು ಆಕರ್ಷಕ ಎನಿಸಿವೆ. ಆ ಪೈಕಿ ಒಪ್ಪೋ ಫೈಂಡ್‌ N3 ಫ್ಲಿಪ್ ಇದೀಗ ಭಾರೀ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ನಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ ಶೇ. 5% ರಷ್ಟು ನೇರ ರಿಯಾಯಿತಿ ಪಡೆದಿದ್ದು, 12 GB RAM + 256 GB ವೇರಿಯಂಟ್‌ ಫೋನ್‌ 94,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ಲಭ್ಯ ಇತರೆ ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಆಫರ್‌ ಪಡೆದುಕೊಂಡರೆ, ಈ ಮೊಬೈಲ್‌ ಮತ್ತಷ್ಟು ರಿಯಾಯಿತಿಯಲ್ಲಿ ಲಭ್ಯ.

ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರು ಫುಲ್‌ ಖುಷ್‌!

ಇನ್ನು ಒಪ್ಪೋದ ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದೆ. ಇನ್ನುಳಿದಂತೆ ಈ ಮೊಬೈಲ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಒಪ್ಪೋ ಫೈಂಡ್‌ N3 ಫ್ಲಿಪ್ - ಫೀಚರ್ಸ್‌

ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ 6.8 ಇಂಚಿನ ಫುಲ್‌ HD LTPO AMOLED ಇನರ್‌ ಡಿಸ್‌ಪ್ಲೇ ಇದ್ದು, 1,080x2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ರೇಟ್‌ ಪಡೆದಿದ್ದು, ಇನ್ನು ಮೊಬೈಲ್‌ 3.26 ಇಂಚಿನ ಕವರ್‌ ಡಿಸ್‌ಪ್ಲೇ ಅನ್ನು ಕೂಡಾ ಪಡೆದಿದೆ. ಹಾಗೆಯೇ ಕವರ್‌ ಡಿಸ್‌ಪ್ಲೇಯು ಅಮೋಲೆಡ್‌ ಪ್ಯಾನಲ್‌ ಅನ್ನು ಹೊಂದಿದ್ದು, 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರು ಫುಲ್‌ ಖುಷ್‌!

ಒಪ್ಪೋದ ಈ ಮೊಬೈಲ್‌ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಒಪ್ಪೋದ ColorOS 13.2 ಸ್ಕಿನ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ARM ಇಮ್ಮಾರ್ಟಲಿಸ್-G715 MC11 GPU ಅನ್ನು ಪಡೆದಿರುವ ಜೊತೆಗೆ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಆಯ್ಕೆ ಇದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ತೃತೀಯ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆಯಲ್ಲಿ ಸಖತ್‌ ಇಳಿಕೆ!..ಗ್ರಾಹಕರು ಫುಲ್‌ ಖುಷ್‌!

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 44W SuperVOOC ಚಾರ್ಜಿಂಗ್‌ಗೆ ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಆಯ್ಕೆ ಕಾಣಬಹುದಾಗಿದೆ.

ಇನ್ನು ಈ ಫೋನ್‌ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಫೋನ್‌ ಅನ್ನು ಒಪ್ಪೋದ ಅಧಿಕೃತ ಆನ್‌ಲೈನ್ ಸ್ಟೋರ್, ಅಮೆಜಾನ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Fabulous Price Drop on OPPO Find N3 Flip on flipkart website. offer price and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+