ಸಿಂಗಲ್‌ ಕ್ಯಾಮೆರಾ ಫೋನಿಂದ ಫೇಸ್‌ಬುಕ್‌ನಲ್ಲಿ 3D ಫೋಟೊ ಪೋಸ್ಟ್ ಮಾಡೊದು ಸುಲಭ!

|

ಸಾಮಾಜಿಕ ಜಾಲಾತಾಣಗಳ ದೊಡ್ಡಣ್ಣ ಫೇಸ್‌ಬುಕ್ ಇದೀಗ ಹೊಸದೊಂದು ಫೀಚರ್ಸ್‌ ಅನ್ನು ಅಳವಡಿಸಿಕೊಂಡಿದ್ದು, ತನ್ನ ಬಳಕೆದಾರರಿಗೆ ಇದೀಗ ಸಿಹಿಸುದ್ದಿ ಹೊರಹಾಕಿದೆ. ಕಳೆದ 2018ರಲ್ಲಿ ಪರಿಚಯಿಸಿದ್ದ 3D ಫೋಟೊ ಅಪ್‌ಲೋಡ್‌ ಆಯ್ಕೆಯಲ್ಲಿ ಪರಿಷ್ಕರಣೆ ಮಾಡಿದೆ. ಬಳಕೆದಾರರು ಅವರ ಫೇಸ್‌ಬುಕ್‌ ವಾಲ್‌ನಲ್ಲಿ 3D ಫೋಟೊವನ್ನು ಸುಲಭವಾಗಿ ಅಪ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

3D ಫೋಟೊ

ಹೌದು, ಫೇಸ್‌ಬುಕ್ ಪರಿಚಯಿಸಿರುವ 3D ಫೋಟೊ ಅಪ್‌ಲೋಡ್ ಈ ಮೊದಲು ಡ್ಯುಯಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು. ಆದರೆ ಈಗ ಸಿಂಗಲ್ ರಿಯಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಸಹ 3D ಫೋಟೊ ಅಪ್‌ಲೋಡ್ ಮಾಡಬಹುದಾಗಿದೆ. ಫೋಟೊ 2Dಯಲ್ಲಿದ್ದರೂ ಸಹ ಅದನ್ನು 3Dಗೆ ಕನ್ವರ್ಟ್ ಮಾಡಿ ಅಪ್‌ಲೋಡ್ ಮಾಡುವ ಸೌಲಭ್ಯ ಕಲ್ಪಿಸಿದೆ.

3D ಫೋಟೊ

2Dಯಲ್ಲಿರುವ ಫೋಟೊಗಳನ್ನು 3D ಫೋಟೊ ಆಗಿ ಕರ್ವರ್ಟ್ ಮಾಡಲು ಫೇಸ್‌ಬುಕ್ ಆರ್ಟ್‌ ಮಶಿನ್ ಲರ್ನಿಂಗ್ ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳಿದೆ. ಆಂಡ್ರಾಯ್ಡ್‌ ಓಎಸ್‌ ಮತ್ತು ಐಫೋನ್ ಐಓಎಸ್‌ ಹೊಂದಿರುವ ಸಿಂಗಲ್ ಕ್ಯಾಮೆರಾ ಮತ್ತು ಡ್ಯುಯಲ್ ಬಳಕೆದಾರರಿಬ್ಬರಿಗೂ ಈ ಸೌಲಭ್ಯ ಲಭ್ಯವಾಗುತ್ತದೆ. ಈಗಾಗಲೇ ಫೋಸ್ಟ್‌ ಮಾಡಿರುವ ಫೋಟೊಗಳನ್ನು ಬೇಕಿದ್ದರೇ 3Dಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

3D ಫೋಟೊ ಎಫೆಕ್ಟ್‌

ಸೆಲ್ಫಿ ಕ್ಯಾಮೆರಾದಿಂದ ಸೆರೆಹಿಡಿದಿರುವ ಫೋಟೋಗಳಿಗೂ ಸಹ ಎಫೆಕ್ಟ್ ನೀಡಬಹುದಾಗಿದೆ. ಮಿಲಿಯನ್‌ನಷ್ಟು ಬಳಕೆದಾರರಿಗೆ 3D ಫೋಟೊ ಎಫೆಕ್ಟ್‌ ಸೌಲಭ್ಯವನ್ನು ಲಭ್ಯ ಮಾಡುವುದೇ ಫೇಸ್‌ಬುಕ್ನ ಉದ್ದೇಶವಾಗಿದೆ. ಬಳಕೆದಾರರು ಈ 3D ಫೋಟೊ ಸೌಲಭ್ಯ ಪಡೆಯಲು ಫೇಸ್‌ಬುಕ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು ಅದಕ್ಕಾಗಿ ಫೇಸ್‌ಬುಕ್ ಅಪ್‌ಡೇಟ್ ಮಾಡಿಕೊಳ್ಳಬೇಕಿದೆ.

 3Dಗೆ ಕರ್ವರ್ಟ್

ಫೇಸ್‌ಬುಕ್‌ನಲ್ಲಿ ಫೋಟೊ ಪೋಸ್ಟ್‌ ಮಾಡುವುದು ನಂತರ ಫೋಸ್ಟ್‌ನಲ್ಲಿ ಕಾಣುವ ಮೂರು ಡಾಟ್‌ಗಳ ಆಯ್ಕೆ ಒತ್ತಿರಿ. (ಫೋನ್ 3D ಸಪೋರ್ಟ್ ಇರದಿದ್ದರೇ) ನಂತರ ಅಲ್ಲಿ 3D ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯನ್ನು ಟ್ಯಾಪ್ ಮಾಡಿರಿ. ನಂತರ ಗ್ಯಾಲರಿಯಲ್ಲಿ ಯಾವ ಫೋಟೊ 3Dಯಲ್ಲಿ ಫೋಸ್ಟ್‌ ಮಾಡಬೇಕೆಂದಿರುವಿರೋ ಆ ಫೋಟೊವನ್ನು ಸೆಲೆಕ್ಟ್ ಮಾಡಿರಿ. 3Dಗೆ ಕರ್ವರ್ಟ್ ಮಾಡಲು ಫೇಸ್‌ಬುಕ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆ ನಂತರ ಫೋಟೊ 3D ಲುಕ್‌ನಲ್ಲಿ ಕಾಣಿಸುತ್ತದೆ. ಅದನ್ನು ನೀವು ಫೋಸ್ಟ್ ಮಾಡಬಹುದು.

Best Mobiles in India

English summary
Facebook has made the feature available for phones with single rear camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X