Home
ಸುದ್ದಿಜಾಲ

ಫೇಸ್‌ಬುಕ್‌ ರೀಲ್ಸ್‌ನಲ್ಲಿ ಹೊಸ ಸೌಕರ್ಯ: ಶಾರ್ಟ್‌ ವಿಡಿಯೋ ವೀಕ್ಷಕರಿಗೆ ಹಲವು ಅನುಕೂಲ!

ಮೆಟಾ ಒಡೆತನದ ಫೇಸ್‌ಬುಕ್‌ ಅನ್ನು ಸಾಮಾನ್ಯವಾಗಿ ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಈ ಆಪ್‌ನಲ್ಲಿ ಇದೀಗ ಹಲವಾರು ಫೀಚರ್ಸ್‌ ಲಭ್ಯವಾಗಿದ್ದು, ಇದರ ಜೊತೆಗೆ ಮತ್ತೆ ಕೆಲವು ಹೊಸ ಫೀಚರ್ಸ್‌ ಹಾಗೂ ಟೂಲ್ಸ್‌ ಸೇರಿಕೊಂಡಿವೆ. ಈ ಮೂಲಕ ಫೇಸ್‌ಬುಕ್‌ನಲ್ಲಿ ರೀಲ್ಸ್‌ ನೋಡುವವರು ಹಾಗೂ ಅಪ್‌ಲೋಡ್‌ ಮಾಡುವವರು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.

ಹೌದು, ಮೆಟಾ ಈಗಾಗಲೇ ಫೇಸ್‌ಬುಕ್‌ನಲ್ಲಿ 90 ಸೆಕೆಂಡ್‌ನ ರೀಲ್‌ಗಳನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಟ್ಟಿದ್ದು, ಇದರಲ್ಲಿ 'ಕ್ರಿಯೇಟಿವ್ ಎಕ್ಸ್‌ಪ್ರೆಶನ್' ಟೂಲ್ಸ್‌ಗಳನ್ನೂ ಸಹ ಬಳಕೆ ಮಾಡಿಕೊಳ್ಳಬಹುದು. ಈ ನಡುವೆ ಫೇಸ್‌ಬುಕ್‌ನಲ್ಲಿ ನಿಮ್ಮ ಆಸಕ್ತಿಗಳು ಮತ್ತು ಆದ್ಯತೆಗಳಿಗೆ ಸರಿಹೊಂದುವ ಶಾರ್ಟ್‌ ವಿಡಿಯೋಗಳನ್ನು ಅನ್ವೇಷಿಸಲು ಅತ್ಯಂತ ಸರಳ ಮಾರ್ಗ ಕಲ್ಪಿಸಿಕೊಡಲಾಗಿದೆ. ಹಾಗಿದ್ರೆ, ಫೇಸ್‌ಬುಕ್‌ನ ಈ ವಿಶೇ‍ಷ ಫೀಚರ್ಸ್ ಹೇಗೆ ಕೆಲಸ ಮಾಡಲಿದೆ?, ಇದರಿಂದ ಬಳಕೆದಾರರಿಗೆ ಅನುಕೂಲ ಏನು ಎಂದು ತಿಳಿದುಕೊಳ್ಳಿ.

ಫೇಸ್‌ಬುಕ್‌ ರೀಲ್ಸ್‌ನಲ್ಲಿ ಹೊಸ ಸೌಕರ್ಯ: ಶಾರ್ಟ್‌ ವಿಡಿಯೋ ವೀಕ್ಷಕರಿಗೆ ಅನುಕೂಲ

ನಿಮ್ಮದೇ ಅನ್ವೇಷಣೆ: ಫೇಸ್‌ಬುಕ್‌ನಲ್ಲಿ ನಿಮ್ಮ ಆಸಕ್ತಿಗಳು ಮತ್ತು ಆದ್ಯತೆಗಳಿಗೆ ಸರಿಹೊಂದುವ ಶಾರ್ಟ್‌ ವಿಡಿಯೋಗಳನ್ನು ಅನ್ವೇಷಿಸಲು ಮತ್ತು ಆನಂದಿಸಲು ಹೊಸ ಫೀಚರ್ಸ್‌ ಸಹಾಯ ಮಾಡಲಿದ್ದು, ಫೇಸ್‌ಬುಕ್‌ನಲ್ಲಿ ರೀಲ್‌ಗಳು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದಂತೆ ಈ ಬದಲಾವಣೆ ಕಂಡುಬಂದಿದೆ. ಈ ಮೂಲಕ ಫೇಸ್‌ಬುಕ್‌ನಲ್ಲಿ ನಿಮ್ಮ ಇಷ್ಟದ ರೀಲ್‌ಗಳನ್ನು ಕಂಡುಹಿಡಿಯುವುದು ಇನ್ನಷ್ಟು ಸುಲಭವಾಗಿದೆ.

ಹೊಸ ಟೂಲ್ಸ್‌ ಎಲ್ಲಿದೆ?: ಫೇಸ್‌ಬುಕ್‌ ವಾಚ್‌ನಲ್ಲಿ ಇತ್ತೀಚಿನ ನವೀಕರಣಗಳೊಂದಿಗೆ ರೀಲ್‌ಗಳನ್ನು ಅನ್ವೇಷಿಸಲು ಅನುಕೂಲ ಮಾಡಿಕೊಟ್ಟಿದ್ದು, ಇದು ಕ್ರಿಯೇಟರ್ಸ್‌, ಟ್ರೆಂಡ್‌ಗಳು ಮತ್ತು ನಿಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ವಿಷಯಗಳಿಗೆ ವೇಗದ ಎಂಟ್ರಿ ನೀಡಲಿದೆ. ಅದರಲ್ಲೂ ನೀವು ವಿಡಿಯೋಗಳನ್ನು ವೀಕ್ಷಣೆ ಮಾಡುವಾಗಲೂ ರೀಲ್ಸ್ ಮತ್ತು ದೀರ್ಘ ರೂಪದ ವಿಡಿಯೋಗಳ ನಡುವೆ ನಿಮಗಿಷ್ಟಬಂದಂತೆ ಸ್ಕ್ರಾಲ್ ಮಾಡಬಹುದಾದ ಆಯ್ಕೆ ನೀಡಲಾಗಿದೆ.

ರೀಲ್‌ಗಳನ್ನು ವೈಯಕ್ತೀಕರಿಸಿ: ಇನ್ನು ಫೇಸ್‌ಬುಕ್‌ನಲ್ಲಿ ನೀವು ನೋಡುವ ರೀಲ್‌ಗಳ ಮೇಲೆ ನಿಮಗೆ ಹೆಚ್ಚಿನ ಕಂಟ್ರೋಲ್‌ ಆಯ್ಕೆಯನ್ನು ನೀಡಲಾಗಿದ್ದು, ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಇದು ಬಹಳಷ್ಟು ಸಹಾಯ ಮಾಡಲಿದೆ. ಇದಕ್ಕಾಗಿ ನೀವು ಶೋ ಮೋರ್‌, ಶೋ ಲೆಸ್‌ ಹಾಗೂ ಸಂದರ್ಭೋಚಿತ ಲೇಬಲ್‌ ಎಂಬ ಈ ಕೆಳಗೆ ನೀಡಲಾದ ಫೀಚರ್ಸ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು.

ಫೇಸ್‌ಬುಕ್‌ ರೀಲ್ಸ್‌ನಲ್ಲಿ ಹೊಸ ಸೌಕರ್ಯ: ಶಾರ್ಟ್‌ ವಿಡಿಯೋ ವೀಕ್ಷಕರಿಗೆ ಅನುಕೂಲ

ಶೋ ಮೋರ್‌, ಶೋ ಲೆಸ್‌: ವಿಡಿಯೋ ಪ್ಲೇಯರ್‌ನ ಕೆಳಭಾಗದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ನೀವು ಹೆಚ್ಚು ಅಥವಾ ಕಡಿಮೆ ನೋಡುವ ರೀಲ್‌ಗಳ ಪ್ರಕಾರಗಳನ್ನು ಅನ್ವೇಷಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ಮುಂದಿನ ಇಂಟ್ರೆಸ್ಟಿಂಗ್‌, ಕ್ರಿಯೇಟರ್ಸ್‌ ಮತ್ತು ಕಮ್ಯೂನಿಟಿ ಅನ್ವೇಷಿಸಲು ಇದು ಸಹಾಯ ಮಾಡುತ್ತದೆ.

ಇನ್ನು ಈ ಶೋ ಮೋರ್ ಆಯ್ಕೆಯು ತಾತ್ಕಾಲಿಕವಾಗಿ ರೀಲ್‌ನ ಶ್ರೇಯಾಂಕದ ಸ್ಕೋರ್ ಅನ್ನು ಹೆಚ್ಚಿಗೆ ಮಾಡಲಿದ್ದು, ಶೋ ಲೆಸ್ ಆಯ್ಕೆಯು ಅದರ ಶ್ರೇಣಿಯ ಸ್ಕೋರ್ ಅನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ನಿಮ್ಮ ನೇರ ಪ್ರತಿಕ್ರಿಯೆಯು ರೀಲ್‌ಗಳ ಶ್ರೇಯಾಂಕವನ್ನು ಚುರುಕಾಗಿ ಮಾಡಲು ಮತ್ತು ನಿಮ್ಮ ಆದ್ಯತೆಗಳಿಗೆ ಹೆಚ್ಚು ಹೊಂದುವಂತೆ ಮಾಡಲು ಇದು ಅನುಕೂಲ ಆಗಲಿದೆ.

ಸಂದರ್ಭೋಚಿತ ಲೇಬಲ್‌ಗಳು(Contextual Labels): ಇದರೊಂದಿಗೆ ರೀಲ್ಸ್ ವಿಡಿಯೋ ಪ್ಲೇಯರ್‌ನಲ್ಲಿ ಸಂದರ್ಭೋಚಿತ ಲೇಬಲ್‌ಗಳನ್ನು ಒದಗಿಸುವ ಹೊಸ ಫೀಚರ್ಸ್‌ ಅನ್ನು ನೀಡಲಾಗಿದೆ. ಇದು ನಿಮಗೆ ನಿರ್ದಿಷ್ಟ ರೀಲ್‌ಗಳನ್ನು ಏಕೆ ತೋರಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿದೆ. ಉದಾಹರಣೆಗೆ ನಿಮ್ಮ ಸ್ನೇಹಿತರು ಇದನ್ನು ಇಷ್ಟಪಟ್ಟರೆ, ಅದು ನಿಮ್ಮ ಫೀಡ್‌ನಲ್ಲಿ ಏಕೆ ಇದೆ ಎಂಬುದನ್ನು ವಿವರಿಸುವ ಲೇಬಲ್ ಅನ್ನು ನೀವು ಗಮನಿಸಬಹುದು.

ಫೇಸ್‌ಬುಕ್‌ ರೀಲ್ಸ್‌ನಲ್ಲಿ ಹೊಸ ಸೌಕರ್ಯ: ಶಾರ್ಟ್‌ ವಿಡಿಯೋ ವೀಕ್ಷಕರಿಗೆ ಅನುಕೂಲ

ಈ ಫೀಚರ್ಸ್‌ ನೀವು ನೋಡುತ್ತಿರುವ ರೀಲ್‌ಗಳ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದೆ. ಜೊತೆಗೆ ವೈಯಕ್ತೀಕರಿಸಿದ ರೀಲ್ಸ್ ಫೀಡ್‌ನ ಕುರಿತು ಹೆಚ್ಚಿನ ಒಳನೋಟವನ್ನು ಇದು ನೀಡಲಿದೆ. ಈ ಮೂಲಕ ಫೇಸ್‌ಬುಕ್‌ನಲ್ಲಿ ಹೆಚ್ಚು ರೀಲ್‌ಗಳನ್ನು ವೀಕ್ಷಣೆ ಮಾಡುವವರು ಹಾಗೂ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುವವರು ಬಹಳಷ್ಟು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Meta already enables uploading of 90 second reels on Facebook, and now tools with new features have been introduced in this category. It will help you discover and enjoy short videos that suit your interests and personalize.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+