ಏಪ್ರಿಲ್ 30ರ ಒಳಗಾಗಿ ನಿಮ್ಮ ವಿಂಡೋಸ್ ಫೋನನ್ನು ಎಸೆದುಬಿಡಿ!
ಅತಿದೊಡ್ಡ ತಂತ್ರಜ್ಞಾನ ಸೋಲುಗಳಲ್ಲಿ ಒಂದಾದ ವಿಂಡೋಸ್ ಆಪರೇಟಿಂಗ್ ಸ್ಮಾರ್ಟ್‌ಫೋನ್ ಅನ್ನು ನೀವು ಬಳಸುತ್ತಿದ್ದರೆ ಇದೇ ಏಪ್ರಿಲ್ 30ರ ಒಳಗಾಗಿ ಅದನ್ನು ಮಕ್ಕಳಿಗೆ ಆಟವಾಡಲು ಕೊಟ್ಟುಬಿಡಿ. ಏಕೆಂದರೆ, ಏಪ್ರಿಲ್ 30ರ ನಂತರ ವಿಂಡೋಸ್ ಬಳಕೆದಾರರ ಫೇಸ್‌ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ, ಮೆಸೆಂಜರ್ ಮತ್ತು ಜಿಮೇಲ್ ಆಪ್ಗಳು ಕಾರ್ಯನಿರ್ವಹಿಸುವುದಿಲ್ಲ.
ಹೌದು, ಮೈಕ್ರೋಸಾಫ್ಟ್ ಬಿಡುಗಡೆಮಾಡಿದ್ದ ವಿಂಡೋಸ್ ಫೋನ್‌ಗಳು ಮಾರುಕಟ್ಟೆಯಲ್ಲಿ ಬಳಕೆದಾರರಿಲ್ಲದೇ ಸೊರಗಿರುವುದರಿಂದ ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್ ಆಗುತ್ತಿಲ್ಲ. ಹಾಗಾಗಿ, ಇತ್ತೀಚಿನ ಪ್ರಮುಖ ಸೇವೆಗಳಾದ ಫೇಸ್‌ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ ಮತ್ತು ಮೆಸೆಂಜರ್ ಆಪ್ಗಳು ವಿಂಡೋಸ್ ಫೋನ್ ಬಳಕೆದಾರರಿಂದ ದೂರಾಗುತ್ತಿವೆ.

ವಿಂಡೋಸ್ ಫೋನ್ಗಳಲ್ಲಿ ಫೇಸ್‌ಬುಕ್ ಆಪ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಕಾರಣ ಫೇಸ್‌ಬುಕ್ ಸಂಸ್ಥೆ ಏಪ್ರಿಲ್ 30 ರಿಂದ ವಿಂಡೋಸ್‌ಗೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಆಲೋಚನೆಯನ್ನು ಮಾಡಿದೆ. ಇಷ್ಟಲ್ಲದೇ ಫೇಸ್‌ಬುಕ್ ತನ್ನ ಒಡೆತನದಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸ್ಆಪ್, ಇನ್ಸ್ಟಾಗ್ರಾಂ ಮತ್ತು ಮೆಸೆಂಜರ್ ಕೂಡ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಇನ್ನು ವಿಂಡೋಸ್ ಬಳಕೆದಾರರಿಗೆ ಈ ಎಲ್ಲಾ ಅಪ್ಲಿಕೇಶನ್‌ಗಳ ಬೆಂಬಲವನ್ನು ಕೊನೆಗೊಳಿಸಲು ಫೇಸ್‌ಬುಕ್ ಮಾಡಿರುವ ನಿರ್ಧಾರವು ಅಷ್ಟೇನೂ ಆಶ್ಚರ್ಯಕರವಾಗಿಲ್ಲ. ವಿಂಡೋಸ್ ಫೋನ್ ಪ್ಲಾಟ್‌ಫಾರ್ಮ್ ಅಧಿಕೃತವಾಗಿ ಸತ್ತಿದೆ. ಮೈಕ್ರೋಸಾಫ್ಟ್ ಸಹ ವಿಂಡೋಸ್ 10 ಇತ್ತೀಚಿನ ಆವೃತ್ತಿಗೆ ಬೆಂಬಲವನ್ನು ನಿಲ್ಲಿಸುತ್ತಿರುವುದರಿಂದ ಇದು ಈಗ ಸಮಸ್ಯೆಯೂ ಅಲ್ಲ ಎನ್ನಲಾಗುತ್ತಿದೆ.

ಪ್ರಸ್ತುತ ಮೈಕ್ರೋಸಾಫ್ಟ್ನ ವಿಂಡೋಸ್ ಫೋನ್ 8.1 ಮತ್ತು ವಿಂಡೋಸ್ 10 ಮೊಬೈಲ್ಗಳಲ್ಲಿ ಮಾತ್ರ ವಾಟ್ಸ್ಆಪ್ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ತಿಂಗಳ ಕೊನೆಯ ದಿನಗಳಲ್ಲಿ ವಾಟ್ಸ್ಆಪ್ ಕೂಡ ತನ್ನ ಕಾರ್ಯ ಸ್ಥಗಿತಗೊಳಿಸಲು ಮುಂದಾಗಿದೆ. ಹಾಗಾಗಿ, ವಾಟ್ಸ್ಆಪ್, ಫೇಸ್‌ಬುಕ್ ಸೇರಿ ಎಲ್ಲಾ ಸೇವೆ ಕಳೆದುಕೊಂಡಿರುವ ನಿಮ್ಮ ಪೋನನ್ನು ಏನು ಮಾಡುತ್ತೀರಾ ನೋಡಿ.
ಓದಿರಿ: ಒಂದು ರೂಪಾಯಿಗೆ ಶಿಯೋಮಿ 'ರೆಡ್ಮಿ ನೋಟ್ 7 ಪ್ರೊ' ಫೋನ್ ಗೆಲ್ಲುವುದು ಹೇಗೆ?


Click it and Unblock the Notifications








