ಫೇಸ್‌ಬುಕ್‌ನಲ್ಲಿ ಡಿಸ್‌ಲೈಕ್ ಬಟನ್ ಒತ್ತಿ!
ಫೇಸ್‌ಬುಕ್‌ನಲ್ಲಿ ಡಿಸ್‌ಲೈಕ್ ಬಟನ್ ಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್ ನ್ಯೂಸ್. ಫೇಸ್‌ಬುಕ್ ಕೊನೆಗೂ ಈ ಬಟನ್ ಬಳಕೆದಾರಿಗೆ ನೀಡಿದೆ.ಆದರೆ ಇದು ಮೆಸೇಜ್‌ಗೆ ಮಾತ್ರ ಸಿಮೀತವಾಗಿದೆ.
ಈ ಬಟನ್ ನಿಮಗೆ ಬೇಕಾದ್ರೆ ಮೆಸೇಜ್‌ನ ಬಲ ತುದಿಯಲ್ಲಿರುವ ಸ್ಟಿಕ್ಕರ್ ಸ್ಟೋರ್‌ಗೆ ಹೋಗಿ ಆರಿಸಿ ಈ ಬಟನ್ ಆರಿಸಬಹುದು. ಆದರೆ ಬಳಕೆದಾರರ ವಾಲ್‌ನಲ್ಲಿ ಪೋಸ್ಟ್ ಆಗುವ ಫೋಟೋ ವಿಡಿಯೋ, ಕಾಮೆಂಟ್‌ಗಳಿಗೆ ಫೇಸ್‌ಬುಕ್ ಡಿಸ್‌ಲೈಕ್ ಬಟನ್ ಇನ್ನೂ ನೀಡಿಲ್ಲ.

ಫೇಸ್‌ಬುಕ್‌ನ್ನು ಬಳಕೆದಾರ ಸ್ನೇಹಿಯಾಗಿ ಪರಿವರ್ತಿಸಲು ಫೇಸ್‌ಬುಕ್ ಎಂಜಿನಿಯರ್‌ಗಳು ಹೊಸ ಹೊಸ ಐಡಿಯಾಗಳನ್ನು ಫೇಸ್‌ಬುಕ್‌ನಲ್ಲಿ ಪ್ರಯೋಗ ಮಾಡುತ್ತಿದ್ದರು. 2007ರಲ್ಲಿ ಫೇಸ್‌ಬುಕ್ ನಾಲ್ವರು ಎಂಜಿನಿಯರ್‌ಗಳು ವಾಲ್‌ನಲ್ಲಿ ಪೋಸ್ಟ್ ಮಾಡಿದ ಫೋಟೋ,ಮೆಸೇಜ್,ವಿಡಿಯೋಗೆ ಉಳಿದ ಬಳಕೆದಾರರು ಟೈಪ್ ಮಾಡದೇ ತಮ್ಮ ಅಭಿಪ್ರಾಯವನ್ನು ಹೇಗೆ ತಿಳಿಸಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಈ ಚರ್ಚೆ ವೇಳೆ ಪ್ಲಸ್,ಮೈನಸ್‌ಅಥವಾ ಸ್ಟಾರ್ ಬಟನ್‌ಗಳನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೊನೆಗೆ ಆ ಬಟನ್ ಬದಲಾಗಿ thumbs up ಬಟನ್ ಸೇರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.ಇವರು ತಮ್ಮ ಅಭಿಪ್ರಾಯವನ್ನು ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್ ತಿಳಿಸಿದ್ದರು. ಜುಕರ್‌ಬರ್ಗ್ ಆ ಬಟನ್‌ಗೆ thumbs up ಹೆಸರಿಗಿಂತ ಲೈಕ್ ಬಟನ್ ಹೆಸರು ಇಟ್ಟರೆ ಉತ್ತಮ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದರಂತೆ. ಜುಕ್‌ರ್‌ಬರ್ಗ್ ಅಭಿಪ್ರಾಯಕ್ಕೆ ಫೇಸ್‌ಬುಕ್‌ನ ಉದ್ಯೋಗಿಗಳು ಸಹಮತ ವ್ಯಕ್ತಪಡಿಸಿದ ಬಳಿಕ ಲೈಕ್ ಬಟನ್‌ನ್ನು 2009ರಿಂದ ಫೇಸ್‌ಬುಕ್ ಬಳಕೆದಾರರಿಗೆ ನೀಡಿತ್ತು.
ಮಾಹಿತಿ:www.quora.com
ಇದನ್ನೂ ಓದಿ: ಫೇಸ್‌ಬುಕ್‌ನ್ನು ಸಕ್ರಿಯವಾಗಿ ಬಳಸುವವರಿಗೆ ಏಳು ಟಿಪ್ಸ್


Click it and Unblock the Notifications








