Subscribe to Gizbot

ಭಾರತದಲ್ಲಿ ಸ್ಟಾರ್ಟ್ಅಪ್ ತರಬೇತಿ ಕೇಂದ್ರಗಳಿಗೆ ಫೇಸ್‌ಬುಕ್ ಚಾಲನೆ!!

Written By:

ಡಿಜಿಟಲ್ ಸ್ಟಾರ್ಟ್ಅಪ್‌ಗಳ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಡಿಜಿಟಲ್ ಸ್ಟಾರ್ಟ್ಅಪ್ ತರಬೇತಿ ಕೇಂದ್ರಗಳಿಗೆ ಫೇಸ್‌ಬುಕ್ ಚಾಲನೆ ನೀಡಿದೆ.!! ಭಾರತದಲ್ಲಿ ಡಿಜಿಟಲ್ ತರಬೇತಿ ನೀಡಿ ಸಣ್ಣ ಉದ್ಯಮಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಫೇಸ್‌ಬುಕ್ ಈ ಕಾರ್ಯ ಕೈಗೊಂಡಿದೆ.!!

ಡಿಜಿಟಲ್ ಎಕಾನಮಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತದ ಜನರಿಗೆಡಿಜಿಟಲ್ ಸ್ಟಾರ್ಟ್ಅಪ್ ತರಬೇತಿ ತರಬೇತಿ ನೀಡಲಾಗುತ್ತದೆ ಎಂದು ಫೇಸ್‌ಬುಕ್ ಹೇಳಿದ್ದು, 2020ರ ವೇಳೆಗೆ 50 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಡಿಜಿಟಲ್ ತರಬೇತಿ ನೀಡುವ ಗುರಿಯನ್ನು ಹೊಂದಿರುವುದಾಗಿ ಫೇಸ್‌ಬುಕ್ ತಿಳಿಸಿದೆ.!!

ಭಾರತದಲ್ಲಿ ಸ್ಟಾರ್ಟ್ಅಪ್ ತರಬೇತಿ ಕೇಂದ್ರಗಳಿಗೆ ಫೇಸ್‌ಬುಕ್ ಚಾಲನೆ!!

ಈ ಮೊದಲು ಗೂಗಲ್ ಡಿಜಿಟಲ್ ಪಾಠ ಮಾಡಲು ಮುಂದಾಗಿತ್ತು. ಇದೀಗ ಫೇಸಬುಕ್ ಕೂಡ ಭಾರತದಲ್ಲಿ ಡಿಜಿಟಲ್ ಕೌಶಲ್ಯ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದು, ಇದರಿಂದಾಗಿ ಯುವ ಉದ್ಯಮಿಗಳಿಗೆ ಆನ್‌ಲೈನ್ ಜಗತ್ತಿನಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಿದೆ.!!

ಭಾರತದಲ್ಲಿ ಸ್ಟಾರ್ಟ್ಅಪ್ ತರಬೇತಿ ಕೇಂದ್ರಗಳಿಗೆ ಫೇಸ್‌ಬುಕ್ ಚಾಲನೆ!!

ಇನ್ನು ಡಿಜಿಟಲ್ ಕೌಶಲ್ಯದ ತರಬೇತಿಗಾಗಿ ಪಠ್ಯಗಳನ್ನು ತಯಾರಿಸಲು ಸಾಮಾಜಿಕ ಜಾಲತಾಣ ಸಂಸ್ಥೆ ಡಿಜಿಟಲ್ ವಿದ್ಯಾ, ಎಡಿಐಐ, ಧರ್ಮಲೈಫ್ ಹಾಗೂ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಇನಿಷಿಯೇಟೀವ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಫೇಸ್‌ಬುಕ್ ಕಾರ್ಯನಿರ್ವಹಿಸಲಿದೆ.!!

ಓದಿರಿ:ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!

English summary
hubs to help entrepreneurs start and scale up businesses besides imparting digital skills to jobseekers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot