ಇಂಟರ್‌ನೆಟ್‌ ಡ್ರೋನ್‌:ಏರೋಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಚಿಂತನೆ

Posted By:

ವಾಟ್ಸ್‌‌ಆಪ್‌‌ನ್ನು19 ಶತಕೋಟಿ ಡಾಲರ್‌ ನೀಡಿ ಖರೀದಿಸಿದ ಫೇಸ್‌ಬುಕ್‌ ಈಗ ವಿಶ್ವದಲ್ಲಿ ಉಚಿತವಾಗಿ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಅಮೆರಿಕದ ಮಾನವ ರಹಿತ ವಿಮಾನ ತಯಾರಕಾ ಕಂಪೆನಿಯನ್ನು ಖರೀದಿಸಲು ಮುಂದಾಗುತ್ತಿದೆ.

ಕೆಲವೊಂದು ಆಂಗ್ಲ ಮಾಧ್ಯಮ ವೆಬ್‌ಸೈಟ್‌ಗಳು‌ ಈ ಸುದ್ದಿಯನ್ನು ಪ್ರಕಟಿಸಿದ್ದು ಟೈಟಾನ್‌ ಏರೋಸ್ಪೇಸ್‌‌ ಕಂಪೆನಿಯನ್ನು ಖರೀದಿಸಲು ಫೇಸ್‌ಬುಕ್‌ ಮಾತುಕತೆ ನಡೆಸುತ್ತಿದೆ ಎಂದು ವರದಿ ಮಾಡಿವೆ.

ವಿಶ್ವದೆಲ್ಲೆಡೆ ಇಂಟರ್‌ನೆಟ್‌ನ್ನುಕಡಿಮೆ ಬೆಲೆಯಲ್ಲಿ ತಲುಪಿಸುವಂತಾಗಲು ವಿಶ್ವದ ಟೆಕ್‌ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್‌‌, ಎರಿಕ್‌ಸನ್‌‌,ಮಿಡಿಯಾಟೆಕ್‌‌‌‌,ನೋಕಿಯಾ,ಒಪೆರಾ,ಕ್ವಾಲಕಂ ಕಂಪೆನಿಗಳು 2013 ಅಗಸ್ಟ್‌‌ 20 ರಂದು Internet.org ಹೆಸರಿನಲ್ಲಿ ಒಂದು ಸಂಘಟನೆಯನ್ನು ಸ್ಥಾಪಿಸಿದೆ. Internet.org ಯೋಜನೆಗೆ ಸಂಬಂಧಿಸಿದಂತೆ ಟೈಟಾನ್‌ ಏರೋಸ್ಪೇಸ್‌ ಈಗಾಗಲೇ ಎರಡು ಮಾನವ ರಹಿತ ವಿಮಾನ(Uunmanned Aerial Vehicles) ಮಾದರಿ ತಯಾರಿಸಿದೆ. ಸೋಲಾರಾ 50 ಮತ್ತು ಸೋಲಾರಾ 60 ಹೆಸರಿನ ಎರಡು ಡ್ರೋನ್‌ ಮಾದರಿಗಳನ್ನು ಟೈಟಾನ್‌ ಏರ್‌ಸ್ಪೇಸ್‌ ಅಭಿವೃದ್ಧಿ ಪಡಿಸಿದೆ.

ಗೂಗಲ್‌ನ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ ಸೇವೆ ನೀಡುವ ಪ್ರೊಜೆಕ್ಟ್‌ ಲೂನ್‌ಗೆ‌ ಪ್ರತಿಯಾಗಿ ಟೆಕ್‌ ಕಂಪೆನಿಗಳು Internet.org ಆರಂಭಿಸಿದ್ದು,ಗೂಗಲ್‌ ಪ್ರೊಜೆಕ್ಟ್‌ ಲೂನ್‌‌ನಲ್ಲಿ ಬಲೂನ್‌ ಹಾರಿಸಿ ಇಂಟರ್‌ನೆಟ್‌ ಸಿಗ್ನಲ್‌ ಪಡೆಯುವ ವ್ಯವಸ್ಥೆ ಇದ್ದರೆ, Internet.orgನಲ್ಲಿ ಮಾನವ ರಹಿತ ವಿಮಾನಗಳ ಮೂಲಕ ಇಂಟರ್‌ನೆಟ್‌ ಸಿಗ್ನಲ್‌ ಕಳುಹಿಸಲಾಗುತ್ತದೆ.

ಟೈಟಾನ್‌ ಏರೋಸ್ಪೇಸ್‌ ಅಭಿವೃದ್ಧಿ ಪಡಿಸಿದ ಸೋಲಾರಾ 50 ಮತ್ತು ಸೋಲಾರಾ 60 ಹೆಸರಿನ ಎರಡು ಡ್ರೋನ್‌ ಮಾದರಿಗಳು ಸೂರ್ಯ‌ನ ಶಕ್ತಿಯನ್ನು ಉಪಯೋಗಿಸಿಕೊಂಡು ಕಾರ್ಯ‌ನಿರ್ವ‌ಹಿಸುತ್ತದೆ. ಸಮುದ್ರ ಮಟ್ಟದಿಂದ 20 ಕಿ.ಮೀ ಎತ್ತರದಲ್ಲಿ ಕಾರ್ಯ‌ನಿರ್ವ‌ಹಿಸುವ ಈ ಡ್ರೋನ್‌ಗಳು ಐದು ವರ್ಷ‌ಗಳವರೆಗೆ ಆಕಾಶದಲ್ಲೇ ಹಾರಾಡುವ ಸಾಮರ್ಥ್ಯವನ್ನು ಹೊಂದಿವೆ.

ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌‌‌ ವಿಶ್ವದೆಲ್ಲೆಡೆ ಉಚಿತವಾಗಿ ಸಿಗುವಂತೆ ಮಾಡುವುದು ಜುಕರ್‌ಬರ್ಗ್‌ ಕನಸಾಗಿದ್ದು,ಜೊತೆಗೆ Internet.orgಗೆ ಹೆಚ್ಚಿನ ಅರ್ಥಿಕ ಸಹಾಯ ನೀಡುವ ಕಂಪೆನಿ ಫೇಸ್‌ಬುಕ್‌ ಆಗಿರುವ ಹಿನ್ನಲೆಯಲ್ಲಿ ಈಗ ಟೈಟಾನ್‌ ಏರೋಸ್ಪೇಸ್‌ ಕಂಪೆನಿಯನ್ನು ಖರೀದಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಸೋಲಾರಾ 50

 ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಸೋಲಾರಾ 60

ವಿಶ್ವದೆಲ್ಲೆಡೆ ಇಂಟರ್‌ನೆಟ್‌ನ್ನುಕಡಿಮೆ ಬೆಲೆಯಲ್ಲಿ ತಲುಪಿಸುವಂತಾಗಲು ವಿಶ್ವದ ಟೆಕ್‌ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್‌‌, ಎರಿಕ್‌ಸನ್‌‌, ಮಿಡಿಯಾಟೆಕ್‌‌‌‌, ನೋಕಿಯಾ, ಒಪೆರಾ,ಕ್ವಾಲಕಂ ಕಂಪೆನಿಗಳು 2013 ಅಗಸ್ಟ್‌‌ 20 ರಂದು Internet.org ಸ್ಥಾಪಿಸಿದೆ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ಏರ್‌ಸ್ಪೇಸ್‌ ಕಂಪೆನಿ ಖರೀದಿಗೆ ಫೇಸ್‌ಬುಕ್‌ ಪ್ರಯತ್ನ

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot