ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

By Ashwath
|

ಇತ್ತೀಚಿಗಷ್ಟೇ ಆಫ್ರಿಕಾದಲ್ಲಿ ವಿಶ್ವದ ಮೊದಲ ಟ್ಯಾಬ್ಲೆಟ್‌ ಕೆಫೆ ಆರಂಭಿಸಿದ್ದ ಗೂಗಲ್‌ ಈಗ ಇಂಟರ್‌ನೆಟ್‌ ಕ್ಷೇತ್ರಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಲ್ಲಿಯವರಗೆ ಇಂಟರ್‌ನೆಟ್‌ ಸೌಲಭ್ಯದಿಂದ ವಂಚಿತರಾಗಿದ್ದ ದೂರದ ಪ್ರದೇಶಗಳ ಜನರಿಗೆ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಗೂಗಲ್‌ ಈಗ ಮುಂದಾಗಿದೆ. ಈ ಸಂಬಂಧ 'ಪ್ರೊಜೆಕ್ಟ್ ಲೂನ್‌' ಎಂಬ ಸಂಶೋಧನೆಯಲ್ಲಿ ನಿರತವಾಗಿದ್ದು,ಆಗಸಕ್ಕೆ ಪಾರದರ್ಶಕ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಅದರಿಂದ ಸಂಕೇತಗಳನ್ನುಪಡೆಯುವ ಪ್ರಯತ್ನವನ್ನು ಮುಂದುವರಿಸಿದೆ.

ಇಂಟರ್‌ನೆಟ್‌ ಕ್ಷೇತ್ರದಲ್ಲಿ ಮಹತ್ವವಾದ ಸಂಶೋಧನೆಯೆಂದೇ ಪರಿಗಣಿಸಲಾದ ಈ ಸಂಶೋಧನೆಯನ್ನು ಗೂಗಲ್ ಹೇಗೆ ನಡೆಸುತ್ತಿದೆ?ಎಲ್ಲಿ ನಡೆಸುತ್ತದೆ? ಮತ್ತು ಯಾಕೆ ನಡೆಸುತ್ತಿದೆ ಎನ್ನುವುದರ ಬಗ್ಗೆ ಕೆಲವು ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

20 ಕಿ.ಮೀ ಎತ್ತರದ ಆಗಸದಲ್ಲಿ ಪಾರದರ್ಶಕ ಬಲೂನ್‌ಗಳನ್ನು ಹಾರಿಸಿ, ಅದರದಿಂದ 3ಜಿ ವೇಗದ ಇಂಟರ್‌ನೆಟ್‌ ಸಂಕೇತಗಳನ್ನು ಪಡೆಯುವ ಪ್ರಯತ್ನ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಪಾಲಿಥೀನ್ ಪ್ಲಾಸ್ಟಿಕ್‌ನಿಂದ ಈ ಬಲೂನ್‌ಗಳನ್ನು ತಯಾರಿಸಲಾಗಿದ್ದು, ಈ ಬಲೂನಿನಲ್ಲಿ ಮೇಜಿನ ಗಾತ್ರದಲ್ಲಿರುವ ಸೌರ ತಟ್ಟೆಯನ್ನು ಅಳವಡಿಸಿಲಾಗಿದೆ. ಈ ಸೌರ ತಟ್ಟೆಯ ಸಹಾಯದಿಂದ ಬಲೂನ್‌ ಅಗಸದಲ್ಲಿ ಹಾರಾಡುತ್ತಿರುತ್ತದೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಈ ಬಲೂನ್‌ನಲ್ಲಿ ಸರ್ಕ್ಯೂಟ್ ಬೋರ್ಡ್‌ಗಳು ಇದ್ದು ಇದು ಬಲೂನ್‌ನ್ನು ನಿಯಂತ್ರಿಸುತ್ತದೆ. ಈ ಬಲೂನ್‌ಗಳು ರವಾನಿಸುವ ಸಂಕೇತಗಳನ್ನು ಭೂಮಿಯ ಮೇಲಿನ ಕೇಂದ್ರಗಳು ಸ್ವೀಕರಿಸುತ್ತವೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಈ ಸೇವೆಯಿಂದ ಇಂಟರ್‌ನೆಟ್‌ ಪಡೆಯುವ ವ್ಯಕ್ತಿ ತನ್ನ ಮನೆಯ ಹೊರಗಡೆ ಅಂಟೆನಾಗಳನ್ನು ಅಳವಡಿಸಬೇಕಾಗುತ್ತದೆ.ಇದಕ್ಕಾಗಿಯೇ ವಿಶೇಷವಾದ ರೇಡಿಯೋ ಅಂಟೆನಾಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಈ ಬಲೂನ್‌ಗಳು ರವಾನಿಸುವ ಇಂಟರ್‌ನೆಟ್‌ ಸಂಕೇತಗಳು ಸುಮಾರು 1,250 ಚದರ ಕಿಲೋಮೀಟರ್ (780 ಚದರ ಮೈಲಿ) ವ್ಯಾಪ್ತಿಯನ್ನು ಹೊಂದಿರುತ್ತವೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಐದು ವರ್ಷಗಳ ಹಿಂದೆಯೇ ಗೂಗಲ್‌ ಈ ಯೋಜನೆಗೆ ಚಾಲನೆ ನೀಡಿತ್ತು. ಕಳೆದ ಒಂದುವರೆ ವರ್ಷದಿಂದ ಪ್ರಯೋಗಗಳನ್ನು ನಡೆಸುತಿದ್ದ ಗೂಗಲ್‌ನ ಪ್ರಯತ್ನ ಈಗ ಅಂತಿಮ ಹಂತದಲ್ಲಿದೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಇದೇ ಜೂನ್‌ 16 ರಂದು ಗೂಗಲ್‌ ನ್ಯೂಜಿಲೆಂಡ್‌ನ ಟೆಕಾಪೋ(Tekapo) ಪ್ರದೇಶದಲ್ಲಿ ಪ್ರಯೋಗಕ್ಕಾಗಿ 30 ಬಲೂನ್‌ಗಳನ್ನು ಹಾರಿಸಿದ್ದು,ಈ ಪ್ರದೇಶದಲ್ಲಿರುವ 50 ಜನರು ಈಗ ಈ ಹೊಸ ಪ್ರಯೋಗದ ಸೇವೆಯನ್ನು ಪಡೆಯುತ್ತಿದ್ದಾರೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದಲ್ಲಿ ಇಂಟರ್‌ನೆಟ್‌ ಸಂಪರ್ಕದಿಂದ ಹೊರಗುಳಿದಿರುವ ವಿಶ್ವದ ಸುಮಾರು 400 ಕೋಟಿ ಜನರನ್ನು ತನ್ನ ಕಕ್ಷೆಗೆ ತರಲು ಗೂಗಲ್‌ ಉದ್ದೇಶಿಸಿದೆ. ಫೈಬರ್‌ ಕೇಬಲ್‌ ಅಳವಡಿಸಲು ವೆಚ್ಚ ಮಾಡುವ ಕೋಟ್ಯಂತರ ರೂ.ಗಳು ಉಳಿತಾಯವಾಗಲಿದೆ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ಮುಂದಿನ ಹಂತದಲ್ಲಿ ನ್ಯೂಜಿಲೆಂಡ್‌ನಿಂದ ಹಿಡಿದು ಆಸ್ಟ್ರೇಲಿಯಾ, ಚಿಲಿ, ಉರುಗ್ವೆ, ಪರಗ್ವೆ, ಮತ್ತು ಆರ್ಜೆಂಟೀನಾಗಳನ್ನು ವ್ಯಾಪಿಸುವಂತೆ 300 ಬಲೂನ್‌ಗಳನ್ನು ಗೂಗಲ್‌ ಹಾರಿಬಿಡಲಿದೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X