Facebook ತನ್ನ ಹೆಸರು ಬದಲಾಯಿಸಲಿದೆ!..ಕಾರಣ ಏನು?
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ದೈತ್ಯ ಫೇಸ್‌ಬುಕ್ ಈಗ ತನ್ನ ಹೆಸರು ಬದಲಾಯಿಸಲು ಮುಂದಾಗಿದೆ. ಫೇಸ್‌ಬುಕ್ ಇಂಕ್ ಮುಂದಿನ ವಾರ ಕಂಪನಿಯ ಅನ್ನು ಹೊಸ ಹೆಸರಿನೊಂದಿಗೆ ಬ್ರ್ಯಾಂಡ್ ಮಾಡಲು ಯೋಜಿಸುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ.

ಹೌದು, ಜನಪ್ರಿಯ ಫೇಸ್‌ಬುಕ್ ಇದೀಗ ತನ್ನ ಹೆಸರನ್ನು ಬದಲಾಯಿಸಲು ಯೋಚಿಸಿದೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಇದೇ ಅಕ್ಟೋಬರ್ 28 ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ. ಅದಾಗ್ಯೂ ಫೇಸ್‌ಬುಕ್ ಹೆಸರು ಬದಲಿಸುವ ಕಾರ್ಯ ಬಹುಬೇಗನೆ ಅನಾವರಣ ಆಗಬಹುದು ಎಂದು ವರ್ಜ್ ತನ್ನ ವರದಿಯಲ್ಲಿ ತಿಳಿಸಿದೆ.
ಹೆಸರು ಬದಲಾದರೂ ಕೂಡ ಫೇಸ್‌ಬುಕ್ ಆಪ್ ಮತ್ತು ಸೇವೆಯು ತಮ್ಮ ಬ್ರ್ಯಾಂಡಿಂಗ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ. ರೀ ಬ್ರ್ಯಾಂಡ್ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಅನ್ನು ಪೋಷಕ ಕಂಪೆನಿಯ ಅಡಿಯಲ್ಲಿರುವ ಅನೇಕ ಉತ್ಪನ್ನಗಳಲ್ಲಿ ಒಂದಾಗಿ ಇರಿಸುತ್ತದೆ. ಇದು ಇನ್‌ಸ್ಟಾಗ್ರಾಂ, ಓಕ್ಯುಲಸ್, ವಾಟ್ಸಾಪ್ ಸೇರಿದಂತೆ ಸಂಸ್ಥೆಯ ಇತರೆ ಸೇವೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು 2004 ರಲ್ಲಿ ಮಾರ್ಕ್ ಜುಗರ್ ಬರ್ಗ್ ಸ್ಥಾಪಿಸಿದ. ಸದ್ಯ ಫೇಸ್‌ಬುಕ್ ವಿಶ್ವದಾದ್ಯಂತ ಹೆಚ್ಚಿನ ಬಳಕೆದಾರರನ್ನು ಒಳಗೊಂದಿದ್ದು, ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ಫೇಸ್‌ಬುಕ್ ಸಾಮಾಜಿಕ ಜಾಲತಾಣ ಎಂಬ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಸಲುವಾಗಿ ಇದೀಗ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಫೇಸ್‌ಬುಕ್ ಯಾವ ಹೆಸರಿನಿಂದ ಮರು ಬ್ರ್ಯಾಂಡ್ ಆಗಲಿದೆ ಎಂಬುದು ಗೊತ್ತಾಗಿಲ್ಲ.
ಫೇಸ್‌ಬುಕ್ ತನ್ನ ಕಂಪನಿಯ ಹೆಸರನ್ನು ಬದಲಾಯಿಸುತ್ತಿರುವುದು ಟೆಕ್ ವಲಯದಲ್ಲಿ ಇದೇ ಮೊದಲೇನಲ್ಲ. ಏಕೆಂದರೇ 2015 ರಲ್ಲಿ, ಗೂಗಲ್ ಸಂಪೂರ್ಣವಾಗಿ ಆಲ್ಫಾಬೆಟ್ ಎಂಬ ಹೋಲ್ಡಿಂಗ್ ಕಂಪನಿಯ ಅಡಿಯಲ್ಲಿ ಮರುಸಂಘಟಿಸಿತು. ಹಾಗೆಯೇ ಸ್ನ್ಯಾಪ್‌ಚಾಟ್ 2016 ರಲ್ಲಿ ಸ್ನ್ಯಾಪ್ ಇಂಕ್‌ಗೆ ಮರುಬ್ರಾಂಡ್ ಮಾಡಿತು. ಹೀಗಾಗಿ ಫೇಸ್‌ಬುಕ್ ಹೆಸರು ಬದಲಾವಣೆ ಮೊದಲೇನಲ್ಲ ಎನ್ನಲಾಗಿದೆ.

ಸದ್ಯ ಫೇಸ್‌ಬುಕ್ ಸಂಸ್ಥೆಯು ತನ್ನ ವ್ಯವಹಾರ ಪದ್ಧತಿಗಳ ಮೇಲೆ US ಸರ್ಕಾರದಿಂದ ಹೆಚ್ಚಿನ ಪರಿಶೀಲನೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ವರದಿ ಪ್ರಕಟಗೊಂಡಿದ್ದು, ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಲ್ಲಿನ ಸರ್ಕಾರದ ಎರಡೂ ಪಕ್ಷಗಳ ಸಂಸದರು ಫೇಸ್‌ಬುಕ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್‌ಬುಕ್ ಕುರಿತು ಯುಎಸ್ ಕಾಂಗ್ರೆಸ್ ನಲ್ಲಿ ಹೆಚ್ಚಾಗುತ್ತಿರುವ ಆಕ್ರೋಶವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಇದೇ ಅಕ್ಟೋಬರ್ 18 ರಂದು, ಫೇಸ್‌ಬುಕ್ ಮುಂದಿನ ಐದು ವರ್ಷಗಳಲ್ಲಿ 10,000 ಜನರನ್ನು ನೇಮಿಸಿಕೊಳ್ಳಲು ಪ್ಲ್ಯಾನ್ ಇದೆ ಎಂದು ಹೇಳಿತ್ತು. metaverse ಹೊಸ ಆನ್‌ಲೈನ್ ಜಗತ್ತು, ಅಲ್ಲಿ ಜನರು ಅಸ್ತಿತ್ವದಲ್ಲಿದ್ದಾರೆ ಮತ್ತು ಹಂಚಿಕೆಯ ವರ್ಚುವಲ್ ಜಾಗದಲ್ಲಿ ಸಂವಹನ ನಡೆಸುತ್ತಾರೆ. ಹಾಗೆಯೇ ಫೇಸ್‌ಬುಕ್ ಇತ್ತೀಚಿಗೆ Virtual Reality (VR) ಮತ್ತು Augmented Reality (AR) ವಿಭಾಗಗಳಲ್ಲಿ ಭಾರಿ ಹೂಡಿಕೆ ಮಾಡಿದೆ.
ಇತ್ತೀಚಿಗೆ ಫೇಸ್‌ಬುಕ್ ಹೊಸ ಪೇಜ್ ರಿ ಡಿಸೈನ್ ಅನ್ನು ಭಾರತೀಯರಿಗೆ ಪರಿಚಯಿಸಿದೆ. ಈ ವರ್ಷದ ಜನವರಿಯಲ್ಲಿ ಫೇಸ್‌ಬುಕ್ ಪೇಜ್ ರಿ ಡಿಸೈನ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಭಾರತದ ಬಳಕೆದಾರರಿಗೆ ಪರಿಚಯಿಸಿದೆ. ಪೇಜ್ ರಿ ಡಿಸೈನ್ ಸಾಕಷ್ಟು ಸರಳವಾಗಿದ್ದು, ಅರ್ಥಗರ್ಭಿತವಾಗಿದೆ. ಇದರಲ್ಲಿ ಫೇಸ್‌ಬುಕ್ ಪೇಜ್‌ಗಳು ಡೇಡಿಕೇಟೆಡ್ ನ್ಯೂಸ್ ಫೀಡ್ ಅನ್ನು ಹೊಂದಿದ್ದು, ಬಳಕೆದಾರರಿಗೆ ಸಂಭಾಷಣೆಯಲ್ಲಿ ಸೇರಲು, ಟ್ರೆಂಡ್‌ಗಳನ್ನು ಅನುಸರಿಸಲು ಅವಕಾಶ ನೀಡಲಿದೆ.
ಫೇಸ್‌ಬುಕ್‌ನ ಹೊಸ ಪೇಜ್ ರಿ ಡಿಸೈನ್ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಬಳಕೆದಾರರು ಹೊಸದಾಗಿ ಟ್ರೆಂಡ್‌ಗಳನ್ನು ಅನುಸರಿಸಲು, ಗೆಳೆಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಸುಲಭ ಅವಕಾಶ ನೀಡಲಿದೆ. ಜೊತೆಗೆ ಡೇಡಿಕೇಟೆಡ್ ನ್ಯೂಸ್ ಫೀಡ್, ಪಬ್ಲಿಕ್ ಫಿಗರ್ಸ್, ಪೇಜ್‌ಗಳು, ಗುಂಪುಗಳು ಮತ್ತು ಟ್ರೆಂಡಿಂಗ್ ಕಂಟೆಂಟ್ ನಡುವೆ ಹೊಸತನವನ್ನು ಪರಿಚಯಿಸಿದೆ. ಅಲ್ಲದೆ ರಿ ಡಿಸೈನ್ ಬಳಕೆದಾರರಿಗೆ ತಮ್ಮ ವೈಯಕ್ತಿಕ ಪ್ರೊಫೈಲ್ ಮತ್ತು ಪೇಜ್‌ಸ್ ನಡುವೆ ಸರ್ಚ್ ಮತ್ತು ನ್ಯಾವಿಗೇಟ್ ಮಾಡಲು ಸಹಾಯ ಮಾಡಲಿದೆ. ಅಷ್ಟೇ ಅಲ್ಲ ಲೈಕ್ಸ್‌ಗಳನ್ನು ಹೈಡ್ ಮಾಡುವ ಆಯ್ಕೆಯನ್ನು ಸಹ ಒಳಗೊಂಡಿದೆ.


Click it and Unblock the Notifications








