Home
ಸುದ್ದಿಜಾಲ

ಜಿಯೋ ಸಂಸ್ಥೆಯ ಶೇ 9.9 ಷೇರುಗಳನ್ನು ತನ್ನದಾಗಿಸಿಕೊಂಡ ಫೇಸ್‌ಬುಕ್‌!

ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಫೇಸ್‌ಬುಕ್ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಿಲಾಯನ್ಸ್‌ ಜಿಯೋ ಸಂಸ್ಥೆಯಲ್ಲಿ 5.7 ಬಿಲಿಯನ್ (43,574ಕೋಟಿ) ಹೂಡಿಕೆ ಮಾಡಿದೆ. ಈ ಮೂಲಕ ರಿಲಾಯನ್ಸ್ ಜಿಯೋ ಸಂಸ್ಥೆಯಲ್ಲಿ ಶೇ 9.9ರಷ್ಟು ಪಾಲುದಾರಿಕೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಬಗ್ಗೆ ರಿಲಾಯನ್ಸ್ ಸಂಸ್ಥೆಯು ಮುಂಬೈ ‍ಸ್ಟಾಕ್‌ ಎಕ್ಸ್‌ಚೇಂಜ್‌ (ಬಿಎಸ್‌ಇ)ಗೆ ತಿಳಿಸಿದೆ.

ಜಿಯೋ

ದೇಶದಲ್ಲಿ ಜಿಯೋ ಅತೀ ಹೆಚ್ಚಿನ ಚಂದಾದಾರರನ್ನು ಹೊಂದಿ ಮುಂಚೂಣಿಯಲ್ಲಿ ಇರುವ ಜಿಯೋ ಟೆಲಿಕಾಂ ಜೊತೆಗೆ ಸೇಋಉವ ಮೂಲಕ ಫೇಸ್‌ಬುಕ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ. ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ, ಭಾರಿ ಪ್ರಮಾಣದ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ಕೂಡಾ ಎನಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಕ್ತಾರರು ಹೇಳಿದ್ದಾರೆ.

ಜಿಯೋ ಮತ್ತು ಫೇಸ್‌ಬುಕ್

ಈಗಾಗಲೆ ಜಿಯೋ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಸದ್ಯ ಈ ಹೊಂದಾಣಿಗೆಯು ಜಿಯೋ ಮತ್ತು ಫೇಸ್‌ಬುಕ್ ಸಂಸ್ಥೆಗಳೆರಡಕ್ಕೂ ಹೆಚ್ಚಿನ ಲಾಭ ತರಲಿವೆ ಎನ್ನಲಾಗಿದೆ. ಭಾರತದಲ್ಲಿನ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳು, ಮಧ್ಯಮ ಗಾತ್ರದ ಕೈಗಾರಿಕೆಗಳು, ರೈತರು, ಮಧ್ಯಮ ಗಾತ್ರದ ವ್ಯಾಪಾರಿಗಳಿಗೆ ಹಾಗೂ ಇನ್ನು ಅನೇಕ ಜನರಿಗೆ ಡಿಜಿಟಲ್ ಸೇವೆಗಳ ಬಗ್ಗೆ ತಿಳಿಸುವ ಯೋಜನೆ ಇದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ

ಜಿಯೋ ಟೆಲಿಕಾಂನಂತೆ ಭಾರತದಲ್ಲಿ ಫೇಸ್‌ಬುಕ್‌ ಸಹ ಸುಮಾರು 40 ಕೋಟಿಗೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹೀಗಾಗಿ ಡಿಜಿಟಲ್ ಸೇವೆಗಳಿಗೆ ಇದು ಪೂರಕ ಯೋಜನೆ ಅನಿಸಿದೆ. ಈಗಾಗಲೆ ಜಿಯೋ ಹೆಚ್ಚಿನ ಬಳಕೆದಾರರನ್ನು ಆನ್‌ಲೈನ್‌ ಸೇವೆಯ ಬಳಕೆಯ ವ್ಯಾಪ್ತಿಗೆ ತಂದು ಇಂಟರ್ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದೆ. ಈ ಜಿಯೋ ಮೂಲಕ ಭಾರತದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಫೇಸ್‌ಬುಕ್‌ ತಲುಪಲಿದೆ ಎಂದು ಫೇಸ್‌ಬುಕ್‌ ವಕ್ತಾರರು ಹೇಳಿದ್ದಾರೆ.

Best Mobiles in India

English summary
Facebook’s investment will translate into a 9.99% equity stake in Jio Platforms on a fully diluted basis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+